Trending Video: ರಾಜಸ್ಥಾನದ ಶ್ರೀಗಂಗಾನಗರದಿಂದ ಬ್ಯಾಂಕ್ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಓರ್ವ ದರೋಡೆಕೋರ ಬ್ಯಾಂಕ್ ಅನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ಬ್ಯಾಂಕ್ ಗೆ ಪ್ರವೇಶಿಸಿದ್ದ. ಆದರೆ, ಬ್ಯಾಂಕ್ ನಲ್ಲಿ ಆತನಿಗೆ 'ರಿವಾಲ್ವರ್ ರಾಣಿ' ಎದುರಾಗಲಿದ್ದಾಳೆ ಎಂಬುದನ್ನು ಆತ ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ. ಈ 'ರಿವಾಲ್ವರ್ ರಾಣಿ' ಬಳಿ ರಿವಾಲ್ವರ್ ರೂಪದಲ್ಲಿ ಒಂದು ಪಕ್ಕಡ್ ಇತ್ತು. ಈ ಪಕ್ಕಡ್ ಸಹಾಯದಿಂದಲೇ ಆಕೆ ದರೋಡೆಕೋರರ ಉದ್ದೇಶವನ್ನು ಹುಸಿಗೊಳಿಸಿ, ಬ್ಯಾಂಕ್ ಹೊರಗಟ್ಟಿದ್ದಾಳೆ. ಈ ಮಹಿಳಾ ಬ್ಯಾಂಕ್ ಮ್ಯಾನೇಜರ್ ಎಷ್ಟೊಂದು ಧೈರ್ಯ ತೋರಿದ್ದಾಳೆ ಎಂದರೆ, ಇದೀಗ ಎಲ್ಲರೂ ಆಕೆಯ ಬುದ್ಧಿವಂತಿಕೆ ಮತ್ತು ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ದುಷ್ಕರ್ಮಿಗಳು ಬ್ಯಾಂಕ್ ನಲ್ಲಿದ್ದ ಜನರಿಗೆ ಚಾಕು ತೋರಿಸಿ ಬೆದರಿಸುತ್ತಿದ್ದರು ಆದರೆ ಅವರಿಗೆ ಬ್ಯಾಂಕ್ ಮ್ಯಾನೇಜರ್ ಆಗಿರುವ ಪೂನಂ ಗುಪ್ತಾ ಅವರನ್ನು ಹೆದರಿಸಲು ಸಾಧ್ಯವಾಗಲಿಲ್ಲ. ಪೂನಂ ಗುಪ್ತಾ ಸಶಸ್ತ್ರ ದರೋಡೆಕೋರನನ್ನು ಧೈರ್ಯದಿಂದ ಎದುರಿಸಿದ್ದಾಳೆ. ನಡೆದ ಭಾರಿ ಗದ್ದಲದ ನಡುವೆಯೇ ಬ್ಯಾಂಕ್ ನ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಬಂದು ಕಳ್ಳನನ್ನು ಹಿಡಿದೊಯ್ದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಮದುವೆ ಮಂಟಪದಲ್ಲಿ ವಧುವನ್ನು ಕಂಡು ಕಿರುಚಾಡುತ್ತಾ ಎದ್ದು ಬಿದ್ದು ಓಡಿಹೋದ ವರ!


ಬ್ಯಾಂಕ್ ಮ್ಯಾನೇಜರ್ ತನ್ನ ಕೈಯಲ್ಲಿ ಪಕ್ಕಡ್ ಹಿಡಿದುಕೊಂಡು ಈ ಶಸ್ತ್ರಸಜ್ಜಿತ ದರೋಡೆಕೋರನನ್ನು ಎದುರಿಸಿದ್ದಾಳೆ. ದರೋಡೆಕೋರ ಪೂನಂ ಗುಪ್ತಾಳನ್ನು ಚಾಕುವಿನಿಂದ ಇರಿಯಲು ಯತ್ನಿಸಿದಾಗ,  ಪಕ್ಕಡ್ ನಿಂದ  ಪೂನಂ ಆತನ ಕೈಗೆ ಹೊಡೆಯುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಮಹಿಳೆ ತೋರಿದ ಧೈರ್ಯದ ಮುಂದೆ ಶಸ್ತ್ರಸಜ್ಜಿತ ಕಳ್ಳನ ಆತ್ಮಸ್ಥೈರ್ಯ ನೆಲಕಚ್ಚಿದೆ. ಮಹಿಳೆಯನ್ನು ಎದುರಿಸಲು ಆತನಿಂದ ಸಾಧ್ಯವಾಗಿಲ್ಲ.  ನಂತರ ಬ್ಯಾಂಕ್ ಸಿಬ್ಬಂದಿಯ ಸಹಾಯದಿಂದ ದರೋಡೆಕೋರನನ್ನು ಹಿಡಿಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ ಬಳಕೆದಾರರು ಈ ಮಹಿಳೆ ತೋರಿದ ಧೈರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ, ದರೋಡೆಕೋರರು ಬ್ಯಾಂಕ್‌ಗೆ ನುಗ್ಗಿದ್ದರಿಂದ ಬ್ಯಾಂಕ್‌ನ ಭದ್ರತೆ ಬಗ್ಗೆ ಇದೀಗ ಹಲವರು ಪ್ರಶ್ನಿಸುತ್ತಿದ್ದಾರೆ.


Viral Video: ತಂದೆಗೆ ಕೆಲಸ ಸಿಕ್ಕಿತೆಂದು ಮಗಳು ನೀಡಿದ ಪ್ರತಿಕ್ರಿಯೆ ನೋಡಿದ್ರೆ ಕಣ್ಣೀರು ಬರುತ್ತೆ!


ಮಾಧ್ಯಮ ವರದಿಗಳ ಪ್ರಕಾರ, ಅಕ್ಟೋಬರ್ 15 ರ ಶನಿವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಈ ದರೋಡೆಕೋರ ಬ್ಯಾಂಕ್‌ಗೆ ಬಂದು ಬ್ಯಾಗ್‌ನಲ್ಲಿದ್ದ ಎಲ್ಲ ಹಣವನ್ನು ತುಂಬುವಂತೆ ಸಿಬ್ಬಂದಿಯನ್ನು ಕೇಳುತ್ತಿದ್ದ ಎಂದು ನೌಕರರು ತಿಳಿಸಿದ್ದಾರೆ. ಈ ವೇಳೆ ಬ್ಯಾಂಕ್ ನಲ್ಲಿ ಸುಮಾರು 35 ಲಕ್ಷ ರೂಪಾಯಿ ನಗದು ಠೇವಣಿ ಇದ್ದು, ಮಹಿಳಾ ಮ್ಯಾನೇಜರ್ ತೋರಿದ ಧೈರ್ಯದಿಂದ ಬ್ಯಾಂಕ್ ಬಚಾವಾಗಿದೆ. ಶ್ರೀಗಂಗಾನಗರದ ಮೀರಾ ಚೌಕಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.