Viral Video: ತಂದೆಗೆ ಕೆಲಸ ಸಿಕ್ಕಿತೆಂದು ಮಗಳು ನೀಡಿದ ಪ್ರತಿಕ್ರಿಯೆ ನೋಡಿದ್ರೆ ಕಣ್ಣೀರು ಬರುತ್ತೆ!

ಈ ವೀಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಶಾಲಾ ಡ್ರೆಸ್‌ನಲ್ಲಿ ಕಣ್ಣುಗಳ ಮೇಲೆ ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಅಲ್ಲಿಯೇ ಅವಳ ಮುಂದೆ ತಂದೆ ಕೈಯಲ್ಲಿ ಸ್ವಿಗ್ಗಿ ಟಿ-ಶರ್ಟ್ ಹಿಡಿದು ನಿಂತಿದ್ದಾರೆ. ಅಸಲಿಗೆ, ತಂದೆಗೆ ಹೊಸ ಕೆಲಸ ಸಿಕ್ಕಿದೆ.

Written by - Bhavishya Shetty | Last Updated : Oct 16, 2022, 05:45 PM IST
    • ತಂದೆ ಮತ್ತು ಮಗಳ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ
    • ಹೆಣ್ಣುಮಕ್ಕಳು ಭಾವನೆಗಳನ್ನು ತಮ್ಮ ತಂದೆಯ ಜೊತೆ ಉತ್ತಮವಾಗಿ ವ್ಯಕ್ತಪಡಿಸುತ್ತಾರೆ
    • ಈ ವೀಡಿಯೊ ಅದನ್ನು ಸಾಬೀತುಪಡಿಸುತ್ತದೆ
Viral Video: ತಂದೆಗೆ ಕೆಲಸ ಸಿಕ್ಕಿತೆಂದು ಮಗಳು ನೀಡಿದ ಪ್ರತಿಕ್ರಿಯೆ ನೋಡಿದ್ರೆ ಕಣ್ಣೀರು ಬರುತ್ತೆ! title=
Swiggy

ತಂದೆ ಮತ್ತು ಮಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಮುದ್ದಾದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದು. ಇತ್ತೀಚಿಗೆ ಇಂತಹದೊಂದು ವಿಡಿಯೋ ಜನಮನ ಸೆಳೆಯುತ್ತಿದೆ. ತಂದೆ ಮತ್ತು ಮಗಳ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ. ಹೆಣ್ಣುಮಕ್ಕಳು ತಮ್ಮ ಭಾವನೆಗಳನ್ನು ತಮ್ಮ ತಂದೆಯ ಜೊತೆ ಉತ್ತಮವಾಗಿ ವ್ಯಕ್ತಪಡಿಸುತ್ತಾರೆ ಮತ್ತು ಈ ವೀಡಿಯೊ ಅದನ್ನು ಸಾಬೀತುಪಡಿಸುತ್ತದೆ.

ಇದನ್ನೂ ಓದಿ: “ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಗಾಂಧಿ ಪರಿವಾರದ ಸಲಹೆ ಪಡೆಯುತ್ತೇನೆ”

ವೀಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಶಾಲಾ ಡ್ರೆಸ್‌ನಲ್ಲಿ ಕಣ್ಣುಗಳ ಮೇಲೆ ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಅಲ್ಲಿಯೇ ಅವಳ ಮುಂದೆ ತಂದೆ ಕೈಯಲ್ಲಿ ಸ್ವಿಗ್ಗಿ ಟಿ-ಶರ್ಟ್ ಹಿಡಿದು ನಿಂತಿದ್ದಾರೆ. ಅಸಲಿಗೆ, ತಂದೆಗೆ ಹೊಸ ಕೆಲಸ ಸಿಕ್ಕಿದೆ. ಅದರ ಬಗ್ಗೆ ಈ ರೀತಿ ಸರ್ಪ್ರೈಸ್ ನೀಡುವ ಮೂಲಕ ಮಗಳಿಗೆ ಹೇಳಲು ಬಯಸಿದ್ದಾರೆ. ಮೊದಲು ನೀವೂ ಈ ವಿಡಿಯೋ ನೋಡಿ...

 

 

ಮಗಳು ಕಣ್ಣು ತೆರೆದ ಕೂಡಲೇ ತಂದೆ ಸ್ವಿಗ್ಗಿ ಟಿ ಶರ್ಟ್ ಹಿಡಿದಿರುವುದನ್ನು ನೋಡಿ ಖುಷಿಯಿಂದ ಕುಣಿದಾಡುತ್ತಾಳೆ. ಈ ವೀಡಿಯೋ ನೋಡಿ ಹೆಣ್ಣು ಮಗುವಿನ ಆನಂದವನ್ನು ನೀವೂ ಊಹಿಸಬಹುದು. ಮಗಳು ಉತ್ಸಾಹದಿಂದ ಜಿಗಿಯಲು ಪ್ರಾರಂಭಿಸುತ್ತಾಳೆ ಮತ್ತು ಓಡಿಹೋಗಿ ತನ್ನ ತಂದೆಯನ್ನು ತಬ್ಬಿಕೊಳ್ಳುತ್ತಾಳೆ. ಮಗಳ ಇಂತಹ ಪ್ರತಿಕ್ರಿಯೆ ನೋಡಿ ತಂದೆಯ ಮುಖದಲ್ಲೂ ನಗು ಬರುತ್ತದೆ. ಹುಡುಗಿಯ ಈ ಮುದ್ದಾದ ಪ್ರತಿಕ್ರಿಯೆಯು ಅನೇಕ ಜನರ ಹೃದಯವನ್ನು ಗೆದ್ದಿದೆ.

ಇದನ್ನೂ ಓದಿ: PMVVY: ವಿವಾಹಿತರಿಗೆ ಮಾಸಿಕವಾಗಿ 10,000 ರೂ.ಪಿಂಚಣಿ ನೀಡಲಿದೆ ಮೋದಿ ಸರ್ಕಾರ

ಈ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಜನರನ್ನು ಸಾಕಷ್ಟು ರಂಜಿಸುತ್ತಿದೆ. ಇದನ್ನು ಇಲ್ಲಿಯವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದು ಲೈಕ್ ಕೂಡ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News