ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಟೋಕ್ಲಾಪಲ್ಲಿ ಗ್ರಾಮದ ಹಿರಿಯರು ಅಲ್ಲಿನ ಮಹಿಳೆಯರಿಗೆ ವಿಚಿತ್ರ ನಿಯಮ ಜಾರಿಮಾಡಿದ್ದಾರೆ. ಒಂದು ವೇಳೆ ಆ ನಿಯಮ ಮೀರಿದರೆ 2000 ರೂ. ದಂಡ ವಿಧಿಸುತ್ತಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಈ ಗ್ರಾಮದಲ್ಲಿ ಮಹಿಳೆಯರು ಮಹಿಳೆಯರು ಹಗಲಿನಲ್ಲಿ ಯಾವುದೇ ಕಾರಣಕ್ಕೂ ನೈಟಿಗಳನ್ನು ಧರಿಸುವಂತಿಲ್ಲ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಮಹಿಳೆಯರು ನೈಟಿ ಧರಿಸಲು ನಿಷೇಧ ಹೇರಲಾಗಿದ್ದು, ಒಂದು ವೇಳೆ ಧರಿಸಿದರೆ 2000 ರೂ. ದಂಡ ಕಟ್ಟಬೇಕು, ಇಲ್ಲವಾದರೆ ಅವರನ್ನು ಗ್ರಾಮದಿಂದ ಬಹಿಷ್ಕರಿಸುವ ವಿಚಿತ್ರ ನಿಯಮವನ್ನು ಗ್ರಾಮದ ಮುಖಂಡರು ಜಾರಿ ಮಾಡಿದ್ದಾರೆ. 



ಈ ನಿಯಮದ ಬಗ್ಗೆ ಗ್ರಾಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಗ್ರಾಮದಲ್ಲಿ ಹಗಲಿನ ವೇಳೆ ನೈಟಿ ಧರಿಸುವುದು ಸೂಕ್ತವಲ್ಲ, ರಾತ್ರಿ ವೇಳೆ ಮಾತ್ರ ರಚಿಸಬೇಕು ಎಂದು ಹಿರಿಯರು ಮಾಡಿರುವ ಆದೇಶ ಒಳ್ಳೆಯದೆ. ಅದನ್ನು ನಾವೆಲ್ಲರೂ ಖುಷಿಯಿಂದ ಪಾಲಿಸುತ್ತೇವೆ. ಆದರೆ ಈ ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಾಗುವುದು ಎಂಬ ವಿಚಾರ ನಮಗೆ ತಿಳಿದಿಲ್ಲ" ಎಂದು ಗ್ರಾಮದ ಮಹಿಳೆಯೊಬ್ಬರು ಹೇಳಿದ್ದಾರೆ. 



ಮತ್ತೊಂದೆಡೆ, ನೈಟಿ ಧರಿಸುವುದು ಬಿಡುವುದು ನಮ್ಮ ಇಚ್ಛೆ. ಆದರೆ ಗ್ರಾಮದ ಮುಖಂಡರು ತಮ್ಮ ಮನದಂತೆ ಈ ಆದೇಶ ಹೊರಡಿಸಿದ್ದಾರೆ. ಇದು ಕಾನೂನು ಬಾಹಿರ ಎಂದು ಕೆಲವರು ಈ ನಿಯಮವನ್ನು ವಿರೋಧಿಸಿದ್ದಾರೆ.