ನವದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಸರ್ಚ್ ಇಂಜಿನ್ ಗೂಗಲ್, ಯಾಹೂ ಸೇರಿದಂತೆ ಸಾವಿರಾರು ವೆಬ್ ಸೈಟ್ ಗಳಿವೆ. ಆದರೆ, ಇವೆಲ್ಲಾ ಸಾಧ್ಯವಾಗಿರುವುದು ಇಂಟರ್ನೆಟ್ ನಿಂದ ಮಾತ್ರ. ಹೌದು, ಆಧುನಿಕ ಮನುಕುಲದ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾದ World Wide Web(WWW)ಗೆ ಇಂದು 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಸಿದ್ಧಪಡಿಸುವ ಮೂಲಕ WWWಗೆ ಶುಭ ಹಾರೈಸಿದೆ. 


COMMERCIAL BREAK
SCROLL TO CONTINUE READING

ಇಂದು www ಸಾಕಷ್ಟು ಅನ್ವೇಷಣೆಗಳಿಗೆ ಕಾರಣವಾಗಿದೆಅಂದರೆ ಅದರ ಎಲ್ಲಾ ಕ್ರೆಡಿಟ್ ಸರ್​ ಟಿಮ್​ ಬರ್ನರ್ಸ್​ ಲೀ ಗೆ ಸೇರುತ್ತದೆ. ಯೂರೋಪ್​ನ ಸಿಇಆರ್​ಎನ್​ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ಸರ್​ ಟಿಮ್​ ಬರ್ನರ್ಸ್​ ಲೀ (33) ಎಂಬಾತ 1989ರ ಮಾರ್ಚ್​ 12ರಂದು ತನ್ನ ಬಾಸ್​ಗೆ 'ಇನ್ಫರ್ಮೇಷನ್​ ಮ್ಯಾನೇಜ್​ಮೆಂಟ್​: ಎ ಪ್ರೊಪೋಸಲ್'​ ಎಂಬ ವರದಿಯನ್ನು ಸಲ್ಲಿಸಿದ್ದರು. ಅದೇ ವರದಿ World Wide Web ಹುಟ್ಟಿಗೆ ಕಾರಣವಾಯಿತು. 1991 ರ ವೇಳೆಗೆ ವಿಶ್ವಕ್ಕೇ ಇದನ್ನು ಪರಿಚಯಿಸಲಾಯಿತು. 


ಏನಿದು WWW?
ವರ್ಲ್ಡ್‌ ವೈಡ್‌ ವೆಬ್‌- (world wide web) ಇದರ ಸಂಕ್ಷಿಪ್ತ ರೂಪವೇ www. ಹೈಪರ್‌ಟೆಕ್ಸ್ಟ್‌ ಟ್ರಾನ್ಸ್‌ಫರ್‌ ಪ್ರೊಟೊಕಾಲ್ (HTTP) ಬಳಸುವ ಎಲ್ಲ ಇಂಟರ್‌ನೆಟ್ ಬಳಕೆದಾರರು ಹಾಗೂ ರಿಸೋರ್ಸ್‌ಗಳ (ಸಂಪನ್ಮೂಲಗಳು-ಮಾಹಿತಿ ಕಣಜಗಳು) ಸಂಯುಕ್ತ ರೂಪವೇ ಈ ವರ್ಲ್ಡ್‌ ವೈಡ್‌ ವೆಬ್‌.