Rain Forecast: ಈ ವರ್ಷ ದೇಶದಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಈ ವರ್ಷ ದೇಶದಲ್ಲಿ ಸರಾಸರಿ ಶೇಕಡ 94ರಷ್ಟು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಹವಾಮಾನ ವರದಿ ಸ್ಕೈಮೇಟ್ ಈ ಬಗ್ಗೆ ಭವಿಷ್ಯ ನುಡಿದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರೂ ಸಹ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎನ್ನಲಾಗುತ್ತಿದೆ. ಮಧ್ಯ ಮತ್ತು ಉತ್ತರ ಭಾರತದಲ್ಲಿ ಕಡಿಮೆ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಜುಲೈನಿಂದ ಆಗಸ್ಟ್ ಅವಧಿಯಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌’ನಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ.


ಇದನ್ನೂ ಓದಿ: ಇನ್‌ಸ್ಟಾದಲ್ಲಿ ಅಲ್ಲು ಅರ್ಜುನ್ ಸೀಕ್ರೇಟ್‌ ಅಕೌಂಟ್‌.! ಇದು ವಿಶೇಷ ಸ್ನೇಹಿತರಿಗಷ್ಟೇ ಮೀಸಲು?


COMMERCIAL BREAK
SCROLL TO CONTINUE READING

ರಾಜಸ್ಥಾನದಲ್ಲಿ ಅಕಾಲಿಕ ಮಳೆ:


ಒಂದೆಡೆ ಕಡಿಮೆ ಮಳೆಯ ಮುನ್ಸೂಚನೆ, ಮತ್ತೊಂದೆಡೆ ಅಕಾಲಿಕ ಮಳೆಯಿಂದ ರೈತರು ಕಂಗೆಟ್ಟಿದ್ದಾರೆ. ರಾಜಸ್ಥಾನದಲ್ಲಿ ಪ್ರತಿಕೂಲ ಹವಾಮಾನ ಮತ್ತು ಆಲಿಕಲ್ಲು ಮಳೆಯಿಂದಾಗಿ 38 ಸಾವಿರ ಹೆಕ್ಟೇರ್ ಹಾನಿಯಾಗಿದೆ. ಸಾತಾನ ತಾಲೂಕಿನಲ್ಲಿ 1000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಕಳೆದ 2 ದಿನಗಳಿಂದ ಸುರಿದ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ಈ ಹಾನಿಯಾಗಿದೆ. ಹವಾಮಾನ ವೈಪರೀತ್ಯದಿಂದ ರಾಜ್ಯದಲ್ಲಿ ಸುಮಾರು 10 ಸಾವಿರ ಎಕರೆ ದ್ರಾಕ್ಷಿತೋಟಗಳು ನೆಲಕಚ್ಚಿವೆ. ದ್ರಾಕ್ಷಿ ಸೀಸನ್ ಅಂತಿಮ ಹಂತದಲ್ಲಿದ್ದು, ಬೆಲೆ ಮತ್ತು ಬೇಡಿಕೆಯ ಕೊರತೆಯಿಂದಾಗಿ ದ್ರಾಕ್ಷಿ ಇನ್ನೂ ಕಟಾವಿಗೆ ಕಾಯುತ್ತಿದೆ. ದ್ರಾಕ್ಷಿತೋಟಗಳ ನಷ್ಟದಿಂದಾಗಿ, ಕರ್ರಂಟ್(Currant) ಉತ್ಪಾದನಾ ಉದ್ಯಮದ ಮೇಲೂ ಸಹ ಪರಿಣಾಮ ಬೀರಿದೆ.


ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಗದ್ದೆಯಲ್ಲಿ ಇಟ್ಟಿದ್ದ ಈರುಳ್ಳಿ ಸಂಪೂರ್ಣ ನೆನೆದಿದೆ. ಇದರ ಜೊತೆ ಗೋಧಿಯೂ ನಷ್ಟದ ಹಾದಿ ಹಿಡಿಯುತ್ತಿದೆ. ಈರುಳ್ಳಿ ಉತ್ಪಾದನಾ ವೆಚ್ಚ ಭರಿಸಲು ಕಷ್ಟವಾಗಿರುವುದರಿಂದ ರೈತ ಬಿಕ್ಕಟ್ಟಿಗೆ ಸಿಲುಕಿದ್ದಾರೆ.


ಇನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಅಂಬೇಗಾಂವ್ ತಾಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಹೂಗಳು ಬಿದ್ದಿರುವುದರಿಂದ ರಾಗಿ ಧಾನ್ಯಗಳಿಂದ ತುಂಬುವುದಿಲ್ಲ. ರಾಗಿ ಬೆಳೆ ನಷ್ಟವಾದ್ದರಿಂದ ರೈತ ಮತ್ತಷ್ಟು ಸಂಕಷ್ಟ ಅನುಭವಿಸಲಿದ್ದಾರೆ ಎನ್ನಲಾಗಿದೆ.


ಇನ್ನು ಮಹಾರಾಷ್ಟ್ರದ ವಾಶಿಮ್ ಜಿಲ್ಲೆ ಅಕಾಲಿಕ ಮಳೆಗೆ ತತ್ತರಿಸಿದೆ. ಬಿರುಗಾಳಿಯೊಂದಿಗೆ ಮಳೆ. ಕೃಷಿಯಲ್ಲಿ ಅಪಾರ ನಷ್ಟ ಉಂಟಾಗಿದೆ. ಗೋಧಿ, ಮುಸುಕಿನ ಜೋಳ, ಈರುಳ್ಳಿ, ಟೊಮೇಟೊ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಪಪ್ಪಾಯಿ ಮರಗಳು ಬುಡಮೇಲಾಗಿವೆ.


ಮಾಲೆಗಾಂವ್ ನಲ್ಲಿಯೂ ಅಕಾಲಿಕ ಮಳೆ ಸುರಿದಿದೆ. ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆಗೆ ಸಾಕಷ್ಟು ನಷ್ಟವಾಗಿದೆ. ಈ ಬಿಕ್ಕಟ್ಟಿನಿಂದಾಗಿ ರೈತರು ಮತ್ತೆ ಕಂಗಾಲಾಗಿದ್ದಾರೆ.


ನಾಸಿಕ್ ಜಿಲ್ಲೆಯ ತಕೇಟ್ ದರ್ನಾ ಪ್ರದೇಶದಲ್ಲಿ ಭಾರೀ ಅಕಾಲಿಕ ಮಳೆಯಾಗಿದೆ. ಹಣ್ಣಿನ ಮರಗಳಿಗೆ ಅಪಾರ ನಷ್ಟವಾಗಿದೆ. ಆಲಿಕಲ್ಲು ಹಾಗೂ ಅಕಾಲಿಕ ಮಳೆಯಿಂದ ಹುಣಸೆ, ಮಾವಿಗೆ ಅಪಾರ ಹಾನಿಯಾಗಿದೆ. ಹುಣಸೆ ಮರಗಳು ರೈತನಿಗೆ ಪೂರಕ ಆದಾಯವನ್ನು ನೀಡುತ್ತವೆ. ಆದರೆ ಈ ಮಳೆ ಅಕ್ಷರಶಃ ಮಣ್ಣು ಪಾಲು ಮಾಡಿದೆ. ಇವಿಷ್ಟೇ ಅಲ್ಲ ಮಾವಿನ ಹೂವೂ ಸಹ ನೆಲ ಪಾಲಾಗಿದೆ.


ಇದನ್ನೂ ಓದಿ: Astro Tips: ಉದ್ಯೋಗದಲ್ಲಿನ ಪ್ರಗತಿಗಾಗಿ ಈ ಒಂದು ವಸ್ತುವನ್ನು ದಿಂಬಿನ ಕೆಳಗಿಟ್ಟು ಮಲಗಿ.!


ದ್ರಾಕ್ಷಿ, ಕಲ್ಲಂಗಡಿ ಬೆಳೆಗಳಿಗೆ ಹಾನಿ!


ಧಾರಾಶಿವ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಹಣ್ಣಿನ ಬೆಳೆಗಳಾದ ದ್ರಾಕ್ಷಿ, ಕಲ್ಲಂಗಡಿ, ಮಾವು, ಬಾಳೆ ಅಪಾರ ಹಾನಿಯಾಗಿದೆ. ತರಕಾರಿಗಳು ಮತ್ತು ಇತರ ಬೆಳೆಗಳು ಸಹ ನಾಶವಾಗಿವೆ. ಕಳಂಬ್, ತುಳಜಾಪುರ ಭಾಗದಲ್ಲಿ ಅಪಾರ ಪ್ರಮಾಣದ ಕೃಷಿ ಉತ್ಪನ್ನ ಹಾನಿಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.