easy weight lose Tips : ಪ್ರಸ್ತುತ ನಾವು ಅನುಸರಿಸುತ್ತಿರುವ ಜೀವನಶೈಲಿಯಿಂದ ಹೆಚ್ಚಿನವರು ಬೊಜ್ಜಿನ ಸಮಸ್ಯೆ ಎದುರಿಸುತ್ತಿರುತ್ತಾರೆ. ಒಮ್ಮೆ ದೇಹ ತೂಕ ಹೆಚ್ಚಾದರೆ ನಂತರ ಜೊತೆಯಲ್ಲಿಯೇ ನಾನಾ ರೀತಿಯ ಕಾಯಿಲೆಗಳು ಕೂಡಾ ದೇಹವನ್ನು ಹೊಕ್ಕಿಕೊಳ್ಳುತ್ತವೆ. ಇದರಿಂದ ಪಾರಾಗುವ ಸಲುವಾಗಿ ದೇಹ ತೂಕ ಹೆಚ್ಚಾದ ಕೂಡಲೇ ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗುವವರೂ ಅನೇಕ ಮಂದಿ. ವ್ಯಾಯಾಮ, ಜುಂಬಾ ಹೀಗೆ ನಾನಾ ರೀತಿಯ ಪ್ರಯತ್ನಕ್ಕೆ ಕೈ ಹಾಕುವುದು ಸಾಮಾನ್ಯ. ಆದರೆ ಇದಕ್ಕೂ ಸಮಯ ಬೇಕಲ್ಲ? ಹಾಗಿದ್ದರೆ, ಈ ಬ್ಯುಸಿ ಲೈಫ್ ಶೆಡ್ಯೂಲ್ ನಲ್ಲಿ ಜಿಮ್ಗೆ ಹೋಗದೆ ತೂಕವನ್ನು ಇಳಿಸಿಕೊಳ್ಳುವುದು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯ. ಅದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನ ಓದಿ ..
ಜಂಕ್ ಫುಡ್ ನಿಂದ ದೂರವಿರಿ :
ಜಿಮ್ಗೆ ಹೋಗದೆ ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸುವುದಾದರೆ, ಮೊದಲು ನೀವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಿ. ಜಂಕ್ ಫುಡ್ ಮತ್ತು ಇನ್ಸ್ಟಂಟ್ ಫುಡ್ ಗಳಿಗೆ ನಿಮ್ಮ ಅಡುಗೆ ಮನೆಯಲ್ಲಿ ಜಾಗ ನೀಡಬೇಡಿ. ಏಕೆಂದರೆ ಜಂಕ್ ಫುಡ್ ತಿನ್ನುವುದರಿಂದ ಬೊಜ್ಜು ಹೆಚ್ಚಾಗುತ್ತದೆ . ಜಂಕ್ ಫುಡ್ ಸೇವಿಸಿ ನೀವು ತೂಕ ಕಳೆದುಕೊಳ್ಳಬೇಕು ಎಂದು ಬಯಸಿದರೆ ಅದು ಸಾಧ್ಯವಾಗದ ಮಾತು.
ಇದನ್ನೂ ಓದಿ : ಒಣ ದ್ರಾಕ್ಷಿಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಸಕ್ಕರೆ ಬಳಕೆಯನ್ನು ಸಂಪೂರ್ಣ ನಿಲ್ಲಿಸಿ :
ತೂಕ ಇಳಿಸಿಕೊಳ್ಳುವ ಮೊದಲ ಹಂತವೇ ಸಕ್ಕರೆಯನ್ನು ತ್ಯಜಿಸುವುದು. ಸಕ್ಕರೆಯನ್ನು ಸೇವಿಸಿದರೆ, ತೂಕವನ್ನು ಕಳೆದುಕೊಳ್ಳುವ ಎಲ್ಲಾ ಪ್ರಯತ್ನಗಳು ವ್ಯರ್ಥ. ಅದಕ್ಕಾಗಿಯೇ ಸಿಹಿತಿಂಡಿಗಳು, ಮಾರುಕಟ್ಟೆ ಉತ್ಪನ್ನಗಳಿಂದ ದೂರವಿರಿ. ಹೀಗೆ ಮಾಡುವುದರಿಂದ ರೋಗಗಳ ಬಾಧೆಯಿಂದ ಕೂಡಾ ಪಾರಾಗಬಹುದು. ಸಾಧ್ಯವಾದರೆ ಟೀ ಕಾಫಿ ಸೇವನೆ ಕೂಡಾ ಸಕ್ಕರೆ ರಹಿತವಾಗಿದ್ದರೆ ಉತ್ತಮ.
ಪ್ರೋಟೀನ್ ಭರಿತ ಆಹಾರಗಳು :
ಆಹಾರದಲ್ಲಿ ಪ್ರೋಟೀನ್ ಇರಬೇಕು. ಇದಕ್ಕಾಗಿ ಬೇಳೆಕಾಳು, ಮೊಟ್ಟೆ ಮತ್ತು ಪನೀರ್ ಅನ್ನು ಸೇವಿಸಬಹುದು. ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ, ಹೊಟ್ಟೆಯು ಹೆಚ್ಚು ಕಾಲ ತುಂಬಿರುತ್ತದೆ. ಇದರಿಂದ ಬಹಳ ಬೇಗನೆ ಹಸಿವಾಗುವುದಿಲ್ಲ. ಹೀಗಾಗಿ ಪದೇ ಪದೇ ಏನನ್ನಾದರೂ ತಿನ್ನಬೇಕು ಎಂದನಿಸುವುದಿಲ್ಲ.
ಇದನ್ನೂ ಓದಿ : Vitamin B Veg Foods: ಈ ಆಹಾರಗಳ ಸೇವನೆಯಿಂದಲೂ ವಿಟಮಿನ್ ಬಿ ಕೊರತೆ ನೀಗಿಸಬಹುದು
ಹೆಚ್ಚು ನೀರು ಕುಡಿಯಿರಿ :
ತೂಕ ಇಳಿಸಿಕೊಳ್ಳಲು ಹೆಚ್ಚು ನೀರು ಕುಡಿಯಿರಿ . ಹೆಚ್ಚು ನೀರು ಕುಡಿಯುವುದರಿಂದ ದೇಹ ಹೈಡ್ರೆಡ್ ಆಗಿರುತ್ತದೆ. ಇದು ವೇಗವಾಗಿ ತೂಕವನ್ನು ಕಳೆದುಕೊಳ್ಳಳು ಸಹಾಯ ಮಾಡುತ್ತದೆ. ಇನ್ನು ಬಿಸಿ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿಯಾಗಿರಲಿದೆ. ಅದರಲ್ಲೂ ಸೊಂಪಿನ ನೀರು, ಜೀರಿಗೆ ನೀರು ಮತ್ತಷ್ಟು ಪರಿಣಾಮಕಾರಿಯಾಗಿರಲಿದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಅನುಮೊದಿಸುವುದಿಲ್ಲ. )
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.