ನವದೆಹಲಿ : ಚೀನಾ ಮೂಲದ ಸ್ಮಾರ್ಟ್ ಫೋನ್ ಕಂಪನಿ Xiaomi ತನ್ನ ನೂತನ ಸೆಲ್ಫಿ ಪೋನ್ Redmi Y2 ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ರಾಹಕರು ಈ ನೂತನ ಮೊಬೈಲ್ ಅನ್ನು Amazon, Mi.Com ಮತ್ತು ಕಂಪನಿಯ ಎಲ್ಲಾ ಔಟ್ಲೆಟ್ ಗಳಲ್ಲಿ ಜೂ.12ರಿಂದ ಖರೀದಿಸಬಹುದು. ಈ ಸ್ಮಾರ್ಟ್ ಫೋನ್ ಬೆಲೆ 9,999 ರೂ.ಗಳು. 



COMMERCIAL BREAK
SCROLL TO CONTINUE READING

Redmi Y2 ಮೊಬೈಲ್ 5.99 ಇಂಚಿನ ಡಿಸ್ಪ್ಲೇ, ಸ್ನಾಪ್ಡ್ರಾಗನ್ 625 ಪ್ರೊಸೆಸರ್, 4GB RAM ಮತ್ತು 64GB ಆಂತರಿಕ ಸ್ಟೋರೇಜ್, 12MP+5MPಹಿಂಭಾಗದ ಕ್ಯಾಮೆರಾ ಸೆಟಪ್, 16MP ಮುಂಭಾಗದ ಕ್ಯಾಮೆರಾ ಹೊಂದಿದ್ದು, ಫೇಸ್ ಅನಲಾಕ್, ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್, ಒಂದು 3080mAh ಬ್ಯಾಟರಿ, ಮತ್ತು MIUI 9.5 ಸ್ಟಾಕ್ ಆಂಡ್ರಾಯ್ಡ್ ಓರಿಯೊ ಹೊಂದಿದೆ. 


ಸಂಗ್ರಹ ಸಾಮರ್ಥ್ಯ ಮತ್ತು ಬೆಲೆ
3GB + 32 GB = 9,999 ರೂ.ಗಳು
4GB + 64 GB = 12,999 ರೂ.ಗಳು


ವಿಶೇಷ ಕೊಡುಗೆ
Redmi Y2 ಸ್ಮಾರ್ಟ್ ಫೋನ್ ಬಿಡುಗಡೆ ಕೊಡುಗೆಯಾಗಿ ಐಸಿಐಸಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಮೊಬೈಲ್ ಕೊಳ್ಳುವ ಗ್ರಾಹಕರಿಗೆ ಒಟ್ಟು ಬೆಲೆಯಲ್ಲಿ 500 ರೂ. ರಿಯಾಯಿತಿ ದೊರೆಯಲಿದೆ. ಅಲ್ಲದೆ, ಏರ್ ಟೆಲ್ ಗ್ರಾಹಕರಿಗೆ 1,800 ರೂ.ಗಳ ಕ್ಯಾಶ್ ಬ್ಯಾಕ್ ಮತ್ತು 240 GBವರೆಗಿನ ಡಾಟಾ ದೊರೆಯಲಿದೆ. 


ಇದರೊಂದಿಗೆ ಕಂಪನಿಯು ಭಾರತದಲ್ಲಿ ತನ್ನ ನವೀಕರಿಸಿದ ಆಪರೇಟಿಂಗ್ ಸಿಸ್ಟಮ್ MIUI 10 ಲಭ್ಯತೆಯನ್ನು ಘೋಷಿಸಿದೆ. ಬೀಟಾ ಆವೃತ್ತಿಯು ಈ ತಿಂಗಳ ನಂತರ ಇತರ ಎಲ್ಲಾ ಆವೃತ್ತಿಯ್ ಸಾಧನಗಳಿಗೆ ದೊರೆಯಲಿದೆ.