ನವದೆಹಲಿ: ವಾಟ್ಸಪ್ ಗ್ರೂಪ್ ನಲ್ಲಿ ಮಹಿಳೆಯ ಮೊಬೈಲ್ ನಂಬರ್ ಸೇರಿಸಿ ಗ್ರೂಪ್ ನಲ್ಲಿ ಅಶ್ಲೀಲ ವೀಡಿಯೋ ಮತ್ತು ಮೆಸೇಜುಗಳನ್ನು ಕಳುಹಿಸುತ್ತಿದ್ದ ಗ್ರೂಪ್ ಅಡ್ಮಿನ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳ ಮೂಲಕದ ಮುಷ್ತಾಕ್ ಅಲಿ ಶೇಕ್(24) ಎಂಬಾತನೇ ಈ ಕೃತ್ಯ ಎಸಗಿದ ವಾಟ್ಸಪ್ ಅಡ್ಮಿನ್. ಈತ Tripple XXX ಎಂಬ ವಾಟ್ಸಪ್ ಗ್ರೂಪ್ ರಚಿಸಿ, ಆ ಗ್ರೂಪ್ ಗೆ ಮಹಿಳೆಯೋರ್ವರ ಮೊಬೈಲ್ ಸಂಖ್ಯೆ ಸೇರಿಸಿದ್ದಾನೆ. ಪದೇ ಪದೇ ಅಶ್ಲೀಲ ಮೆಸೇಜುಗಳು, ವೀಡಿಯೋಗಳು ಬರುತ್ತಿದ್ದುದನ್ನು ಕಂಡ ಮಹಿಳೆ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. 


"ಆ ವಾಟ್ಸಪ್ ಗ್ರೂಪ್ ನಲ್ಲಿ 12 ಮಂದಿ ಸದಸ್ಯರಿದ್ದರು. ಆ ಗ್ರೂಪ್ ಅಡ್ಮಿನ್ ಆಗಲೀ, ಇತರ ಸದಸ್ಯರಾಗಲೀ ಯಾರ ಪರಿಚಯವೂ ನನಗಿಲ್ಲ" ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.


ಈ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಕಾರ್ಪೆಂಟರ್ ಮುಷ್ತಾಕ್ ಅಲಿ ಶೇಕ್ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನ ವಿರುದ್ಧ ಸೆಕ್ಷನ್ 67 ಮತ್ತು 67-A ಅನ್ವಯ ಕೇಸು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.