Yashwant Sinha: ಬಿಜೆಪಿ ಮಾಜಿ ನಾಯಕ `ಯಶವಂತಸಿನ್ಹಾ` ಟಿಎಂಸಿ ಪಾರ್ಟಿ ಸೇರ್ಪಡೆ!
2018ರಲ್ಲಿ ಪಕ್ಷ 83 ವರ್ಷದ ಮಾಜಿ ಬಿಜೆಪಿ ನಾಯಕ ತೊರೆದಿದ್ದರು.
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಯಶವಂತಸಿನ್ಹಾ ಇಂದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 2018ರಲ್ಲಿ ಪಕ್ಷ 83 ವರ್ಷದ ಮಾಜಿ ಬಿಜೆಪಿ ನಾಯಕ ತೊರೆದಿದ್ದರು.
ಯಶವಂತ್ ಸಿನ್ಹಾರವರು, ಡೆರೆಕ್ ಓ ಬ್ರಾಯನ್, ಸುದೀಪ್ ಬಂದೋಪಾಧ್ಯಾಯ ಹಾಗೂ ಸುಬ್ರತ್ ಮುಖರ್ಜಿ ಸಮ್ಮುಖದಲ್ಲಿ ಟಿಎಂಸಿ(TMC)ಗೆ ಸೇರ್ಪಡೆಗೊಂಡಿದ್ದಾರೆ. ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಟಿಎಂಸಿ ಈ ಮಾಹಿತಿಯನ್ನು ಖಚಿತಪಡಿಸಿದೆ.
NEET UG 2021 Exam: ಆಗಸ್ಟ್ 1 ರಿಂದ NEET ಪರೀಕ್ಷೆ, ಹಿಂದಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು
ಇನ್ನು ಯಶವಂತ್ ಸಿನ್ಹಾ ತಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸುಬ್ರತ್ ಮುಖರ್ಜಿ 'ಯಶವಂತ್ ಸಿನ್ಹಾ(Yashwant Sinha) ನಮ್ಮ ಜೊತೆಗಿದ್ದಾರೆಂದು ನಮಗೆ ಬಹಳ ಖುಷಿಯಾಗುತ್ತಿದೆ. ನಂದಿಗ್ರಾಮದಲ್ಲಿ ನಡೆದ ಹಲ್ಲೆಯಿಂದ ಮಮತಾ ಬ್ಯಾನರ್ಜಿ ಗಾಯಗೊಂಡಿರದಿದ್ದರೆ, ಇಂದು ಖುದ್ದು ಅವರೇ ಇಲ್ಲಿರುತ್ತಿದ್ದರು' ಎಂದಿದ್ದಾರೆ.
AIADMK ಮೇಡಂ ಜಯಲಲಿತಾ ಪಕ್ಷವಲ್ಲ, ಬಿಜೆಪಿ ಗುಲಾಮ: AIMIM ಮುಖ್ಯಸ್ಥ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.