NEET UG 2021 Exam: ಆಗಸ್ಟ್ 1 ರಿಂದ NEET ಪರೀಕ್ಷೆ, ಹಿಂದಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು

NEET UG 2021 Date: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ NEET-2021 ಪರೀಕ್ಷೆಗಾಗಿ ದಿನಾಂಕ ಘೋಷಿಸಿದೆ. ಈ ಬಾರಿ ಈ ಪರೀಕ್ಷೆಯನ್ನು ಆಗಸ್ಟ್ 1, 2021 ರಂದು ಆಯೋಜಿಸಲಾಗುತ್ತಿದೆ.

Last Updated : Mar 13, 2021, 12:51 PM IST
  • NEET-2021 ದಿನಾಂಕ ಘೋಷಣೆ.
  • ಆಗಸ್ಟ್ 1 ರಂದು ಪರೀಕ್ಷೆ.
  • ಹಿಂದಿ ಸೇರಿದಂತೆ 11 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು.
NEET UG 2021 Exam: ಆಗಸ್ಟ್ 1 ರಿಂದ NEET ಪರೀಕ್ಷೆ, ಹಿಂದಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು title=
NEET UG 2021 Date(File Photo)

NEET UG 2021 Date: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ NEET-2021 ಪರೀಕ್ಷೆಗಾಗಿ ದಿನಾಂಕ ಘೋಷಿಸಿದೆ. ಈ ಬಾರಿ ಈ ಪರೀಕ್ಷೆಯನ್ನು ಆಗಸ್ಟ್ 1, 2021 ರಂದು ಆಯೋಜಿಸಲಾಗುತ್ತಿದೆ. ಮೆಡಿಕಲ್ ಕಾಲೇಜುಗಳಲ್ಲಿ ಪದವಿ ಪೂರ್ವ ಕೋರ್ಸ್ ಗಳ ಪ್ರವೇಶಕ್ಕಾಗಿ ಆಯೋಜಿಸಲಾಗುವ ಈ ಪರೀಕ್ಷೆಯನ್ನು (Medical 
Entrance Exam 2021) ಹಿಂದೆ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ನಡೆಸಲಾಗುತ್ತದೆ. NTA ಅಧಿಕೃತ ವೆಬ್ ಸೈಟ್ ಆಗಿರುವ nta.ac.in ಮೇಲೆ MBBS/BDS ಪ್ರವೇಶಕ್ಕಾಗಿ ಆಯೋಜಿಸಲಾಗುವ NEET ಪರೀಕ್ಷೆಯ ದಿನಾಂಕ ಘೋಷಿಸಲಾಗಿದೆ. 

ಪೆನ್ ಹಾಗೂ ಪೇಪರ್ ಮೋಡ್ ನಲ್ಲಿಯೇ ಪರೀಕ್ಷೆ ನಡೆಯಲಿದೆ (Examination will be held in pen and paper mode)
ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿರುವ NTA "MBBS, BDS, BAMS, BSMS, BUMS, ಹಾಗೂ BHMS ಕೋರ್ಸ್ ಗಳಿಗಾಗಿ NEET (ಸ್ನಾತಕ) 2021 ಆಯೋಜನೆಯನ್ನು ಸಂಬಂಧಿತ ಮಾನದಂಡಗಳು, ಮಾರ್ಗಸೂಚಿಗಳು ಹಾಗೂ ರೆಗ್ಯುಲೆಶನ್ ಅನುಸಾರ ನಡೆಸಲು NTA ನಿರ್ಧರಿಸಿದೆ" ಎಂದು ಹೇಳಲಾಗಿದೆ. ಅಧಿಸೂಚನೆಯಲ್ಲಿ ಪರೀಕ್ಷೆಯನ್ನು ಆಗಸ್ಟ್ 1 ರಂದು ಪೆನ್ ಮತ್ತು ಪೇಪರ್ ಮೋಡ್ ನಲ್ಲಿ ಹಿಂದಿ ಸೇರಿದಂತೆ 11 ಭಾಷೆಗಳಲ್ಲಿ ಆಯೋಜಿಸಲಾಗುವುದು ಎನ್ನಲಾಗಿದೆ.

NEET UG 2021 Date ಪರೀಕ್ಷೆಯನ್ನು ಒಟ್ಟು 720 ಅಂಕಗಳಿಗಾಗಿ ಆಫ್ ಲೈನ್ ಮೋಡ್ ನಲ್ಲಿ ಆಯೋಜಿಸಲಾಗುತ್ತದೆ. ಫಿಸಿಕ್ಸ್ ಕಾಗೂ ಕೆಮಿಸ್ಟ್ರಿ ಸೆಕ್ಷನ್ ನಲ್ಲಿ 180 ಅಂಕಗಳು ಇರಲಿವೆ. ಬಯಾಲಾಜಿ ಸೆಕ್ಷನ್ ನಲ್ಲಿ 360 ಅಂಕಗಳು ಇರಲಿವೆ.

ಇದನ್ನೂ ಓದಿ-NEET 2021: ವರ್ಷದಲ್ಲಿ ಒಂದೇ ಬಾರಿ ನಡೆಯಲಿದೆ NEET, ಶೀಘ್ರವೇ NTA ನಿಂದ ಡೇಟ್ ಶೀಟ್ ಬಿಡುಗಡೆ

ಈ ರೀತಿ ರಿಜಿಸ್ಟ್ರೇಶನ್ ಮಾಡಿ   (How to register)
- ಮೊದಲು NTA ಅಧಿಕೃತ ವೆಬ್ ಸೈಟ್ ಆಗಿರುವ ntaneet.nic.in ಗೆ ಭೇಟಿ ನೀಡಿ.
- ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ಕಿಸಿ.
- ಲಾಗಿನ್ ಕ್ರೆಡೆನ್ಸಿಯಲ್ಸ್ ಜನರೇಟ್ ಮಾಡಲು ಅಗತ್ಯ ಮಾಹಿತಿ ಒದಗಿಸಿ.
- ಬಳಿಕ ಲಾಗಿನ್ ಮಾಡಿ NEET-2021 ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಕೆ ಮಾಡಿ.

ಇದನ್ನೂ ಓದಿ- ಶೀಘ್ರವೇ ಭಾರತೀಯ ಬಳಕೆದಾರರಿಗೆ Netflixನಿಂದ ಅಗ್ಗದ Mobile+ Plan ಬಿಡುಗಡೆ, ಸಿಗುವ ಲಾಭಗಳೇನು?

ಈ ದಾಖಲೆಗಳು ಅಗತ್ಯ (These things will be needed)
ಕ್ರೆಡೆನ್ಸಿಯಲ್ಸ್ ಜನರೇಟ್ ಮಾಡಲು ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ, ಪೋಸ್ಟ್ ಕಾರ್ಡ್ ಸೈಜ್ ಫೋಟೋ, ಅಭ್ಯರ್ಥಿ ಸಹಿ, JPEG/JPG ಫಾರ್ಮ್ಯಾಟ್ ನಲ್ಲಿ ಎಡಗೈ ಹೆಬ್ಬೆರಳು ಗುರುತು ಚಿನ್ಹೆಯ ಜೊತೆಗೆ JPEG ಫಾರ್ಮ್ಯಾಟ್ ನಲ್ಲಿ 10ನೇ ತರಗತಿ ಸರ್ಟಿಫಿಕೆಟ್ ಸಬ್ಮಿಟ್ ಮಾಡಬೇಕು. 

ಇದನ್ನೂ ಓದಿ-Engineering ಓದಲು 12ನೇ ತರಗತಿಯಲ್ಲಿ Maths, Physics ಆಯ್ಕೆ ಅನಿವಾರ್ಯವಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News