ನವದೆಹಲಿ: ಸ್ವರಾಜ್ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ತಮಿಳುನಾಡಿನ ಪ್ರತಿಭಟನಾ ನಿರತ ರೈತರ ಭೇಟಿ ಸಂದರ್ಭದಲ್ಲಿ ಪೊಲೀಸರು ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅವರ ಫೋನ್ ಕಿತ್ತುಕೊಂಡು ವಾಹನದಲ್ಲಿ ತಳ್ಳಿದ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.



COMMERCIAL BREAK
SCROLL TO CONTINUE READING

ಸುಮಾರು 10 ಸಾವಿರ ಕೋಟಿ ರೂ ವೆಚ್ಚದ ಸೇಲಂ-ಚೆನ್ನೈ ಎಕ್ಷ್ಪ್ರೆಸ್ ಅಷ್ಟಪಥ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಯಾದವ್ ಅವರನ್ನು ಸ್ಥಳೀಯ ರೈತರು ಆಹ್ವಾನಿಸಿದ್ದರು. ಈ ಹಿನ್ನಲೆಯಲ್ಲಿ ಇಲ್ಲಿಗೆ ಬಂದ ಯಾದವ್ ಅವರನ್ನು ತಿರುವಣ್ಣಾಮಲೈ ಜಿಲ್ಲೆಯ ಪೊಲೀಸರು ತಡೆ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾರೆ.




ಈ ಕುರಿತಾಗಿ ಟ್ವೀಟ್ ಮಾಡಿರುವ ಯೋಗೇಂದ್ರ ಯಾದವ್ " ಅಷ್ಟ ಪಥ ಎಕ್ಸ್ಪ್ರೆಸ್ ವೆ  ವಿಚಾರವಾಗಿ ನಡೆಸಿರುವ ಸ್ವಾದೀನದ ಬಗ್ಗೆ ನಾನು ಜಿಲ್ಲಾ ಅಧಿಕಾರಿ ಕಂದಸ್ವಾಮಿ ಅವರ ಜೊತೆ ಮಾತನಾಡಿದೆ.ಆದರೆ ಅವರು ಇದನ್ನು ಸಂಪೂರ್ಣವಾಗಿ ಅಲ್ಲಗಳೆದರು.ಇದಾದ ಕೆಲವು ನಿಮಿಷದಲ್ಲಿ ಪೊಲೀಸರು ಬಂದು ನಮ್ಮನ್ನು ತಡೆ ಹಿಡಿದರು" ಎಂದು ಅವರು ಟ್ವೀಟ್ ಮಾಡಿದ್ದಾರೆ.


ತಮಿಳುನಾಡಿನಲ್ಲಿ ಈ ಎಕ್ಸ್ಪ್ರೆಸ್ ಮಾರ್ಗಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.ರೈತರು ಮತ್ತು ಸ್ಥಳೀಯರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭೀತಿ ಒಂದೆಡೆಯಾದರೆ ಇನ್ನೊಂದೆಡೆ ಪರಿಸರ ತಜ್ಞರು ಈ ಯೋಜನೆಯಿಂದ ಈ ಭಾಗದಲ್ಲಿ ಭಾರಿ ಪ್ರಮಾಣದ ಗಿಡ ಮರಗಳ ಬೆಲೆ ತೆರಬೇಕಾಗುತ್ತದೆ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.