`ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ಸಚಿವರಿಗೆ ವಾಸ!`
ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲು ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ಎಂಬ ಆದೇಶವನ್ನು ಸಿಎಂ ಯೋಗಿ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬಸ್ಥರನ್ನು ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸುವಂತಿಲ್ಲ ಎಂದು ಸೂಚಿಸಿದ್ದಾರೆ.
ಉತ್ತರಪ್ರದೇಶ: ಬಿಜೆಪಿ ಪಕ್ಷದ ನಿಷ್ಠಾವಂತ ರಾಜಕಾರಣಿ ಹಾಗೂ ಉತ್ತರ ಪ್ರದೇಶ ರಾಜ್ಯದ ದಿಟ್ಟ ನಾಯಕ ಎಂದು ಖ್ಯಾತಿ ಗಳಿಸಿರುವ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ನೂತನ ಕಾನೂನುಗಳಿಂದ ಮಾದರಿಯಾದವರು. ಸದ್ಯ ತಮ್ಮ ಸಂಪುಟದ ಸಚಿವರ ಕಾರ್ಯವೈಖರಿಗಾಗಿ ಹಲವು ಮಾದರಿ ನಿಯಮಗಳನ್ನು ರೂಪಿಸಿ ಮತ್ತೆ ಸುದ್ದಿಯಾಗಿದ್ದಾರೆ.
ಇದನ್ನು ಓದಿ: ಈ ಕೆಲಸಗಳನ್ನ ಅತಿಯಾಗಿ ಮಾಡುವುದರಿಂದ, ಇವು ಜೀವಕ್ಕಿದೆ ಕುತ್ತು
ಇನ್ನು ಮುಂದೆ ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲು ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ಎಂಬ ಆದೇಶವನ್ನು ಸಿಎಂ ಯೋಗಿ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬಸ್ಥರನ್ನು ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸುವಂತಿಲ್ಲ ಎಂದು ಸೂಚಿಸಿದ್ದಾರೆ.
ಅಧಿಕಾರಿಗಳು ಸಹ ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು. ಅಧಿಕೃತ ಸಭೆಗಳು ನಡೆಯುವಾಗ ಅಧಿಕಾರಿಗಳು ತೆಗೆದುಕೊಳ್ಳುವ ಭೋಜನ ವಿರಾಮವನ್ನು ಅರ್ಧ ಗಂಟೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಜನತಾ ಜಲಧಾರೆಯ ಮೂಲಕ ನೀರಾವರಿ ಸಮಸ್ಯೆ ತೆರೆದಿಡಲು ಮುಂದಾದ ಜೆಡಿಎಸ್
ಕಡತ ವಿಲೇವಾರಿಗೆ ಗಡುವು:
ಇನ್ನು ಯೋಜನೆಗಳು, ಜನರ ಸಮಸ್ಯೆಗಳಿಗೆ ಸಂಬಂಧಿಸಿದ ಕಡತಗಳು ಮೂರು ದಿನಗಳೊಳಗೆ ವಿಲೇವಾರಿಯಾಗಬೇಕು. ಕಛೇರಿಗಳಲ್ಲಿ ನಾಗರಿಕ ಸನ್ನದು ನೇತು ಹಾಕಬೇಕು. ಆ ಮೂಲಕ ಯಾವುದೇ ಕೆಲಸ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಆದೇಶದಲ್ಲಿ ಸೂಚಿಸಲಾಗಿದೆ.
ಈ ಆದೇಶವು ಸಚಿವರು ಹೆಚ್ಚಿನ ಹಣ ವ್ಯಯಿಸುವುದನ್ನು ತಪ್ಪಿಸುವ ಜತೆಗೆ, ಅಧಿಕಾರಿಗಳ ದಕ್ಷ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರವೂ ಲಭಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.