ಮುಂಬೈ: ಮುಂಬೈನ ಬ್ರಾಬೌರ್ನೆ ಸ್ಟೇಡಿಯಂಯಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಪ್ರಾರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡಿದ್ದ ಹೈದರಾಬಾದ್ ಪುಟಿದೆದ್ದು ಬಂದಿದ್ದು, ಸತತ 2 ಗೆಲುವು ಸಾಧಿಸಿದೆ. ಇದೀಗ ಕೋಲ್ಕತ್ತಾ ಮೇಲೆ ಸವಾರಿ ಮಾಡುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿರುವ ಕೋಲ್ಕತ್ತಾ ತಂಡವು ತನ್ನ ಸಾಮರ್ಥ್ಯವನ್ನು ಈಗಾಗಲೇ ತೋರಿಸಿದೆ. ಬಲಿಷ್ಟ ತಂಡಗಳಿಗೆ ಮಣ್ಣುಮುಕ್ಕಿಸಿರುವ ಶ್ರೇಯಸ್ ಅಯ್ಯರ್ ಪಡೆ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಯುವಪಡೆಯನ್ನು ಹೊಂದಿರುವ ಕೋಲ್ಕತ್ತಾ ಪ್ರಸಕ್ತ ಟೂರ್ನಿಯಲ್ಲಿ ಸ್ಟ್ರಾಂಗ್ ತಂಡವಾಗಿ ಗಮನ ಸೆಳೆಯುತ್ತಿದೆ. ಉಭಯ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಬಲಿಷ್ಠವಾಗಿರುವುದರಿಂದ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: RCB Fan Poster: ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವವರೆಗೂ ಮದುವೆಯಾಗೋಲ್ಲ- ಮಹಿಳಾ ಅಭಿಮಾನಿಯ ಪೋಸ್ಟರ್ ವೈರಲ್
2 ಸೋಲುಗಳ ಬಳಿಕ ನಾಯಕ ಕೇನ್ ವಿಲಿಯಮ್ಸನ್ ಅವರ ತಂತ್ರಗಾರಿಕೆ ವರ್ಕೌಟ್ ಆಗುತ್ತಿದೆ. ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಮ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಶ್ರೇಯಸ್ ಗೋಪಾಲ್, ಅಬ್ದುಲ್ ಸಮದ್ ಮುಂತಾದವರು ತಂಡದ ಗೆಲುವಿಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಎದುರಾಳಿಯನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದರೆ ಹೈದರಾಬಾದ್ ಗೆಲುವು ಸುಲಭವಾಗುತ್ತದೆ. ಹೀಗಾಗಿ ತಂತ್ರಗಾರಿಕೆ ಅರಿತು ಬೌಲಿಂಗ್ ಮಾಡಬೇಕಾಗಿದೆ.
ಇನ್ನು ಎಲ್ಲಾ ವಿಭಾಗಗಳಲ್ಲಿಯೂ ಶ್ರೇಯಸ್ ಅಯ್ಯರ್ ಪಡೆ ಬಲಿಷ್ಠವಾಗಿದೆ. ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಟಿಮ್ ಸೌಥಿ, ಮೊಹಮ್ಮದ್ ನಬಿ, ಶಿವಂ ಮಾವಿ, ಆರೋನ್ ಫಿಂಚ್ ಅವರು ಉತ್ತಮ ಪಾರ್ಮ್‍ನಲ್ಲಿದ್ದು ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಹೈದರಾಬಾದ್ ನೀಡುವ ಸವಾಲಿನ ಮೇಲೆ ಇಂದಿನ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.
ಇದನ್ನೂ ಓದಿ: Viral Video:: ‘ರಾಕೆಟ್ ಥ್ರೋ’ ಮೂಲಕ ಸ್ಟಂಪ್ ಮುರಿದ ಹಾರ್ದಿಕ್ ಪಾಂಡ್ಯ..!
See you all tomorrow 💜🧡@SunRisers #KKRHaiTaiyaar #SRHvKKR #IPL2022 pic.twitter.com/GODTJOlrbZ
— KolkataKnightRiders (@KKRiders) April 14, 2022
ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮರ್ಕ್ರಂ, ಅಬ್ದುಲ್ ಸಮದ್, ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಜಿ.ಶಶಾಂಕ್ ಸಿಂಗ್, ರವಿಕುಮಾರ್ ಸಮರ್ಥ್, ವಿಷ್ಣು ವಿನೋದ್, ಪ್ರಿಯಂ ಗರ್ಗ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ, ಮಾರ್ಕೊ ಜಾನ್ಸೆನ್, ಸೌರಭ್ ದುಬೆ
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಮೊಹಮ್ಮದ್ ನಬಿ, ಪ್ಯಾಟ್ ಕಮಿನ್ಸ್, ಪ್ಯಾಟ್ ಜಮಿನ್ಸ್ , ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ರಸಿಖ್ ಸಲಾಂ, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್
ಐಪಿಎಲ್ ಪಂದ್ಯ: 25
ಸನ್‍ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್
ದಿನಾಂಕ: ಏಪ್ರಿಲ್ 15, ಶುಕ್ರವಾರ
ಸ್ಥಳ: ಮುಂಬೈನ ಬ್ರಾಬೌರ್ನೆ ಸ್ಟೇಡಿಯಂ
ಸಮಯ: ಸಂಜೆ 7.30ಕ್ಕೆ
===================================================================
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.