Azamgarh bypoll win : ಅಜಂಗಢ (ಲೋಕಸಭೆ) ಮತ್ತು ರಾಂಪುರ (ವಿಧಾನಸಭೆ) ನಲ್ಲಿ ಬಿಜೆಪಿ ಭರ್ಜರಿ ಗೆಲುವು 'ಡಬಲ್ ಇಂಜಿನ್ ಬಿಜೆಪಿ ಸರ್ಕಾರದ' ಕಲ್ಯಾಣ ನೀತಿಗಳ ಪರಿಣಾಮ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಆಜಂಗಢ ಸದರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಐತಿಹಾಸಿಕ ಗೆಲುವು ಗೌರವಾನ್ವಿತ ಪ್ರಧಾನಿಯವರ ನಾಯಕತ್ವದ 'ಡಬಲ್ ಇಂಜಿನ್ ಬಿಜೆಪಿ ಸರ್ಕಾರದ' ಕಲ್ಯಾಣ ನೀತಿಗಳ ಫಲಿತಾಂಶವಾಗಿದೆ. ಈ ಗೆಲುವು ಬಿಜೆಪಿಯ ಎಲ್ಲಾ ಶ್ರಮಶೀಲ ಕಾರ್ಯಕರ್ತರಿಗೆ ಸಮರ್ಪಿಸಲಾಗಿದೆ. . ಅಜಂಗಢದ ಜನರಿಗೆ ಧನ್ಯವಾದಗಳು!" ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ : Maharashtra Political crisis : ಉದ್ಧವ್ ಠಾಕ್ರೆಗೆ ಬಿಗ್ ಶಾಕ್ : ಶಿಂಧೆ ಬಣ ಸೇರಲು ಗುವಾಹಟಿ ತಲುಪಿದ ಮತ್ತೆ 4 ಜನ ಶಾಸಕರು!


ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಆದಿತ್ಯನಾಥ್, "ಜನರು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ರಾಜವಂಶ ಮತ್ತು ಜಾತಿವಾದಿ ಪಕ್ಷಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸಂದೇಶವನ್ನು ಕಳುಹಿಸಿದ್ದಾರೆ". ರಾಂಪುರದಿಂದ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ ಮತ್ತು ಅಜಂಗಢದಿಂದ ದಿನೇಶ್ ಲಾಲ್ ಯಾದವ್ 'ನಿರ್ಹೌ' ಗೆದ್ದಿದ್ದಾರೆ ಎಂದು ಘೋಷಿಸಿದರು. ಆದರೆ, ಅಜಂಗಢ ಉಪಚುನಾವಣೆ ಫಲಿತಾಂಶದ ಅಧಿಕೃತ ಘೋಷಣೆವರೆಗೂ ಕಾಯಬೇಕು.


"ಉಪಚುನಾವಣೆಗಳ ಫಲಿತಾಂಶಗಳು 2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಗ್ಗೆ ಮುನ್ಸೂಚನೆಯನ್ನು ನೀಡಿವೆ". ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಕ್ಷದ ನಾಯಕ ಅಜಂ ಖಾನ್ ಅವರು ಕ್ರಮವಾಗಿ ಅಜಂಗಢ ಮತ್ತು ರಾಂಪುರ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕಾರಣ ಉತ್ತರ ಪ್ರದೇಶದಲ್ಲಿ ಉಪಚುನಾವಣೆ ನಡೆಸಲಾಯಿತು.


ಇದನ್ನೂ ಓದಿ : "ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಹೋರಾಡಿ"


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.