Yogi Adityanath On Pran Pratishtha : 500 ವರ್ಷಗಳ ಕಾಯುವಿಕೆಯ ನಂತರ, ಭಗವಾನ್ ಶ್ರೀರಾಮನು ತನ್ನ ದೇವಾಲಯದಲ್ಲಿ ನೆಲೆಸಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದಾರೆ. ಇದರೊಂದಿಗೆ ಸುಮಾರು 25 ತಲೆಮಾರುಗಳ ನಿರೀಕ್ಷೆ ಕೊನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ದೇಶದ ಬಹುಸಂಖ್ಯಾತ ಸಮುದಾಯವು ತಮ್ಮ ಆರಾಧ್ಯ ದೈವದ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕಾಗಿ ಹಲವು ವರ್ಷಗಳವರೆಗೆ ಕಾಯಬೇಕಾಗಿ ಬಂದಿರುವ ವಿಶ್ವದ ಮೊದಲ ಮತ್ತು ವಿಶಿಷ್ಟ ಪ್ರಕರಣ ಇದು ಎಂದು ಹೇಳಿದರು.  ಯಾವ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಬೇಕು ಎನ್ನುವ ಸಂಕಲ್ಪ ಮಾಡಲಾಗಿತ್ತೋ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಅಯೋಧ್ಯೆಯ ಬೀದಿಗಳಲ್ಲಿ ಗುಂಡು ಹಾರುವುದಿಲ್ಲ : 
ಇನ್ನು ಅಯೋಧ್ಯೆ ಪ್ರದಕ್ಷಿಣೆಯಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕ ಉಂಟಾಗುವುದಿಲ್ಲ ಎಲ್ಲರೂ ನಿಶ್ಚಿಂತೆಯಿಂದ ಇರಿ ಎಂದಿದ್ದಾರೆ. ಅಯೋಧ್ಯೆಯ ಬೀದಿಗಳಲ್ಲಿ ಇನ್ನು ಗುಂಡು ಹಾರುವುದಿಲ್ಲ, ಕರ್ಫ್ಯೂ ಹೇರುವುದಿಲ್ಲ. ಇನ್ನೇನಿದ್ದರೂ ಬರೀಯ ದಿಪೋತ್ಸವ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಟಾಪನೆ ಮೂಲಕ ರಾಮರಾಜ್ಯ ಸ್ಥಾಪನೆಯ ಘೋಷಣೆಯಾಗಿರುವುದರಿಂದ ಇನ್ನು ರಾಮೋತ್ಸವ ನಡೆಯಲಿದೆ ಎಂದಿದ್ದಾರೆ. 


ಇದನ್ನೂ ಓದಿ : PM Modi In Ram Mandir: ರಾಮನ ಎದುರು ಭಾವುಕರಾಗಿ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಧಾನಿ ಮೋದಿ‌


ಶ್ರೀರಾಮನ ಆದರ್ಶಗಳನ್ನು ಪಾಲಿಸಿದ ಭಾರತೀಯ ಸಮಾಜ : 
ನಾವೀಗ ತ್ರೇತಾಯುಗಕ್ಕೆ ಕಾಲಿಟ್ಟಂತೆ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿದರು. ಅಯೋಧ್ಯೆಯನ್ನು ಭೂಮಿಯ ವೈಕುಂಠ ಎಂದು ಕರೆಯಲಾಗುತ್ತದೆ. ಆದರೆ ಈ ಪುಣ್ಯ ಭೂಮಿ ಶತಮಾನಗಳವರೆಗೆ ನಿರ್ಲಕ್ಷಿಸಲ್ಪಟ್ಟಿತ್ತು. ಆದರೆ ರಾಮನ ಜೀವನವು ಸಂಯಮವನ್ನು ಕಲಿಸುತ್ತದೆ. ಭಾರತೀಯ ಸಮಾಜ ಆ ಸಂಯಮವನ್ನು ಕಾಪಾಡಿಕೊಂಡಿದೆ. ಇಂದು ಇಡೀ ಜಗತ್ತು ಅಯೋಧ್ಯೆಯ ವೈಭವವನ್ನು ಮೆಚ್ಚಿ, ಕೊಂಡಾಡುತ್ತಿದೆ ಎಂದು ಹೇಳಿದ್ದಾರೆ. 


ಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ನಮನಗಳು
 ಈ ಸುಸಂದರ್ಭಕ್ಕಾಗಿ ಲಕ್ಷಾಂತರ ಭಕ್ತರ ತ್ಯಾಗ ಬಲಿದಾನವಾಗಿದೆ. ಇಂದು ಅಲ್ಲಿ ಮಂದಿರ ನಿರ್ಮಾಣವಾಗಿರುವುದು ಅಗಲಿದ ಆ ಆತ್ಮಗಳ ಸಂತಸಕ್ಕೂ ಕಾರಣವಾಗಿದೆ ಎಂದು ಹೇಳಿದ್ದಾರೆ. ಇಂದು ರಾಮ್ ಲಲ್ಲಾ ಭವ್ಯವಾದ ಮಂದಿರದಲ್ಲಿ ಪ್ರತಿಷ್ಟಾಪನೆಗೊಂಡಿರುವುದಕ್ಕೆ ಎಲ್ಲರಿಗೂ ಅಭಿನಂದನೆಗಳನ್ನು ಹೇಳಿದ್ದಾರೆ.ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತದ ಪ್ರತಿ ನಗರ, ಪ್ರತಿ ಹಳ್ಳಿಯೂ ಅಯೋಧ್ಯಾ ಧಾಮವಾಗಿದೆ. ಎಲ್ಲರ ಮನದಲ್ಲೂ ರಾಮನ ಹೆಸರಿದೆ.ಪ್ರತಿಯೊಂದು ನಾಲಿಗೆಯೂ ರಾಮನ ನಾಮವನ್ನು ಜಪಿಸುತ್ತಿದೆ ಎಂದು ಹೇಳಿದರು.


ಇದನ್ನೂ ಓದಿ :   ರಾಮ ಜನ್ಮ ಭೂಮಿಯಲ್ಲಿ ಕ್ರಿಕೆಟರ್ ಗಳು !ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸ್ಟಾರ್ ಆಟಗಾರರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.