PINEWZ Launch: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೊಸ ಆಪ್ ಬಿಡುಗಡೆ ಮಾಡಿದ ಡಾ.ಸುಭಾಷ್ ಚಂದ್ರ

PINEWZ Launch: ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ ಅವರು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಹೈಪರ್ ಲೋಕಲ್ ಆಪ್ PINEWZ ಅನ್ನು ಬಿಡುಗಡೆ ಮಾಡಿದರು. 

Written by - Chetana Devarmani | Last Updated : Jan 22, 2024, 02:25 PM IST
  • ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೊಸ ಆಪ್ ಬಿಡುಗಡೆ
  • ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ
  • ನಿಮ್ಮ ಊರಿನ ಸುದ್ದಿಯನ್ನು ನೀವೇ ಇಡೀ ಜಗತ್ತಿಗೆ ತಲುಪಿಸುವ PINEWZ ಆಪ್‌ ಬಿಡುಗಡೆ
PINEWZ Launch: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹೊಸ ಆಪ್ ಬಿಡುಗಡೆ ಮಾಡಿದ ಡಾ.ಸುಭಾಷ್ ಚಂದ್ರ title=

PINEWZ Launch: ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ ಅವರು ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಹೈಪರ್ ಲೋಕಲ್ ಆಪ್ PINEWZ ಅನ್ನು ಬಿಡುಗಡೆ ಮಾಡಿದರು. ದೇಶದ ಪ್ರತಿಯೊಂದು ಭಾಗದ ಸುದ್ದಿಗಳು, ಹಳ್ಳಿಯಿಂದ ದೇಶದ ಆಗು ಹೋಗಗಳ ವಿಚಾರಗಳು ಈ ಅಪ್ಲಿಕೇಶನ್‌ನಲ್ಲಿ ನೀವು ನೋಡಬಹುದು. ಈ ಆ್ಯಪ್ ಅನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಬಹಳ ವಿಶೇಷವಾದ ದಿನವಾಗಿದೆ ಎಂದು ಹೇಳಿದರು. 

ಭಾರತ ಮತ್ತು ವಿಶ್ವದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಕೆಲವು ಜನರು ಅಯೋಧ್ಯೆಯಲ್ಲಿದ್ದಾರೆ ಮತ್ತು ಉಳಿದವರು ತಮ್ಮ ಮನೆಗಳಿಂದಲೇ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ನಗರ ಅಥವಾ ಪ್ರದೇಶದ ಸುದ್ದಿ ಮತ್ತು ವಿಡಿಯೋಗಳನ್ನು ನೀವು ಅಪ್‌ಲೋಡ್‌ ಮಾಡಬಹುದು. ಇಂದು PINEWZ ಆರಂಭಿಸಲಾಗುತ್ತಿದ್ದು, ಡಿಜಿಟಲ್ ಕ್ಷೇತ್ರದಲ್ಲಿ ಇದೊಂದು ದೊಡ್ಡ ಕ್ರಾಂತಿಯಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: Ayodhya Ram Mandir: ರಾಮಮಂದಿರ ನಿರ್ಮಾಣಕ್ಕೆ ಸಿನಿಮಾ ತಾರೆಯರು ನೀಡಿದ ದೇಣಿಗೆ ಎಷ್ಟು ಗೊತ್ತೇ? 

ಅಯೋಧ್ಯೆಯಿಂದ ಅಪ್ಲಿಕೇಶನ್ (PINEWZ) ಬಿಡುಗಡೆ ಮಾಡಲಾಯಿತು. ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ ಅವರು ಇಂದಿನ ಐತಿಹಾಸಿಕ ದಿನದಂದು ದೇಶವಾಸಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಆ್ಯಪ್ ಮೂಲಕ ದೇಶದ ಲಕ್ಷ ಕೋಟಿ ಜನ ಪತ್ರಕರ್ತರಾಗಲು ಸಾಧ್ಯವಾಗುತ್ತದೆ ಎಂದರು. ಈ ಅಪ್ಲಿಕೇಶನ್ ಮೂಲಕ, ನೀವು ನಿಮ್ಮ ನಗರ ಮತ್ತು ಪ್ರದೇಶದ ಸುದ್ದಿ ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಅದನ್ನು ಇಡೀ ಜಗತ್ತಿಗೆ ಕಳುಹಿಸಬಹುದು. ನಿಮ್ಮ ನಗರ ಮತ್ತು ಹಳ್ಳಿಯ ಸುದ್ದಿ ಇಡೀ ಜಗತ್ತಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಡಾ.ಸುಭಾಷ್ ಚಂದ್ರ ಅಯೋಧ್ಯೆಗೆ ತಲುಪಿದ್ದಾರೆ. ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರೊಂದಿಗೆ ರಾಮಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ನೃಪೇಂದ್ರ ಮಿಶ್ರಾ ಅವರಿಂದ ದೇವಸ್ಥಾನ ಮತ್ತು ಅದರ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಪಡೆದರು. 45 ವರ್ಷಗಳ ನಂತರ ಅಯೋಧ್ಯೆ ತಲುಪಿದ ಡಾ.ಸುಭಾಷ್ ಚಂದ್ರ ಇದು ಧರ್ಮದ ವಿಜಯ ಎಂದರು. 45 ವರ್ಷಗಳ ಹಿಂದೆ ನಾನು ನೋವಿನಿಂದ ದೇವಸ್ಥಾನಕ್ಕೆ ಹೋಗಿದ್ದೆ, ಆದರೆ ಇಂದು ನಾನು ಸಂತೋಷವಾಗಿದ್ದೇನೆ ಎಂದರು.

ಇದನ್ನೂ ಓದಿ: Ayodhya Ram Mandir Free Prasad: ಅಯೋಧ್ಯೆ ರಾಮಮಂದಿರ ಪ್ರಸಾದವನ್ನು ಆನ್‌ಲೈನ್‌ನಲ್ಲಿ ಈ ರೀತಿ ಫ್ರೀ ಆಗಿ ಬುಕ್ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News