ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಯೋಗಿ ಸರ್ಕಾರ ರಾಜ್ಯದ ರೈತರಿಗೆ ಭರ್ಜರಿ ಗಿಫ್ಟ್ ನೀಡಿದೆ. ಉತ್ತರ  ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ರೈತರಿಗೆ ವಿದ್ಯುತ್ ಬೆಲೆಯನ್ನು ಅರ್ಧದಷ್ಟು ಇಳಿಸುವುದಾಗಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ರೈತರ ಆದಾಯವನ್ನು  (Farmers Income) ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ, ಖಾಸಗಿ ಕೊಳವೆ ಬಾವಿ ಸಂಪರ್ಕಗಳ ವಿದ್ಯುತ್ ದರವನ್ನು (Electricity Price) ಶೇಕಡಾ 50 ರಷ್ಟು ಕಡಿಮೆ ಮಾಡುವ ಮೂಲಕ ದೊಡ್ಡ ಪರಿಹಾರ ನೀಡಿದ ಸಿಎಂ ಯೋಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಟ್ವೀಟ್ ಮಾಡಿದ್ದಾರೆ.


ದೆಹಲಿಯಲ್ಲಿನ ಕೊರೊನಾ ಪ್ರಕರಣಗಳಲ್ಲಿ ಭಾರಿ ಹೆಚ್ಚಳ...!


ಈ ಕುರಿತಂತೆ ಸರಣಿ  ಟ್ವೀಟ್ ಮಾಡಿರುವ ಇಂಧನ ಸಚಿವ ಶ್ರೀಕಾಂತ್ ಶರ್ಮಾ (Shrikant Sharma) ತಮ್ಮ ಮುಂದಿನ ಟ್ವೀಟ್‌ನಲ್ಲಿ, 'ಖಾಸಗಿ ಕೊಳವೆ ಬಾವಿಗಳ ಹೊಸ ಬಿಲ್‌ಗಳಲ್ಲಿ, ಗ್ರಾಮೀಣ ಮೀಟರ್ ಸಂಪರ್ಕಗಳಲ್ಲಿನ ವಿದ್ಯುತ್ ದರವನ್ನು ರೂ. 2/ಯುನಿಟ್‌ನಿಂದ ರೂ 1/ಯುನಿಟ್‌ಗೆ ಮತ್ತು ಸ್ಥಿರ ಶುಲ್ಕವನ್ನು ರೂ. 70 ರಿಂದ ಪ್ರತಿ ಗಂಟೆಗೆ ರೂ. 35/ಗಂಟೆ ಇಳಿಸಲಾಗುವುದು. ಮೀಟರ್ ಇಲ್ಲದ ಸಂಪರ್ಕದಲ್ಲಿ, ಸ್ಥಿರ ಶುಲ್ಕವು ರೂ 170/ಗಂಟೆ ಬದಲಿಗೆ ರೂ. 85/ಗಂಟೆಯಾಗಿರುತ್ತದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.


EPS ಬಿಗ್ ಅಪ್‌ಡೇಟ್! ನಿಮ್ಮ ನಿವೃತ್ತಿಯ ನಂತರ ಪಿಂಚಣಿ ಡಬಲ್ ಆಗುವ ಸಾಧ್ಯತೆ!


ಯುಪಿ (Uttar Pradesh) ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ಮತ್ತೊಂದು ಟ್ವೀಟ್‌ನಲ್ಲಿ ನಗರ ಮೀಟರ್ ಸಂಪರ್ಕಗಳಲ್ಲಿ ವಿದ್ಯುತ್ ದರವನ್ನು ರೂ. 6/ಯೂನಿಟ್‌ನಿಂದ ರೂ 3/ಯೂನಿಟ್‌ಗೆ ಇಳಿಸಲಾಗುವುದು ಮತ್ತು ಸ್ಥಿರ ಶುಲ್ಕವನ್ನು ರೂ 130/ಗಂಟೆಯಿಂದ ರೂ. 65/ಗಂಟೆಗೆ ಇಳಿಸಲಾಗುವುದು ಎಂದು ಬರೆದಿದ್ದಾರೆ. ಎನರ್ಜಿ ಎಫಿಶಿಯಂಟ್ ಪಂಪ್‌ನಲ್ಲಿ, ದರವನ್ನು ರೂ 1.65/ಯೂನಿಟ್‌ನಿಂದ 83 ಪೈಸೆ/ಯೂನಿಟ್‌ಗೆ ಇಳಿಸಲಾಗುತ್ತದೆ ಮತ್ತು ಸ್ಥಿರ ಶುಲ್ಕ ರೂ 70/ಗಂಟೆ ಬದಲಿಗೆ ರೂ 35/ಗಂಟೆಯಾಗಿರುತ್ತದೆ ಎಂದವರು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.