ಪ್ರಯಾಗ್​ರಾಜ್: ಉತ್ತರ ಪ್ರದೇಶದ ಯೋಗಿ ಸರ್ಕಾರ ಗುರುವಾರ ನಾಲ್ಕು ನಿಲ್ದಾಣಗಳ ಹೆಸರನ್ನು ಅಧಿಕೃತವಾಗಿ ಬದಲಾಯಿಸಿದೆ. ಕೇಂದ್ರ ಗೃಹ ಸಚಿವಾಲಯ ನೀಡಿದ ಆಕ್ಷೇಪಣೆಯ ನಂತರ ಈ ಹೆಸರು ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲಹಾಬಾದ್ ಹೆಸರನ್ನು ಈಗಾಗಲೇ ಉತ್ತರಪ್ರದೇಶದ ಯೋಗಿ ಸರ್ಕಾರವು ಪ್ರಯಾಗ್​ರಾಜ್ ಎಂದು ಬದಲಾಯಿಸಿದೆ.



COMMERCIAL BREAK
SCROLL TO CONTINUE READING

ಈಗ ಗುರುವಾರ ಪ್ರಯಾಗರಾಜ್ (ಹಿಂದೆ ಅಲಹಾಬಾದ್) ನ ನಾಲ್ಕು ರೈಲು ನಿಲ್ದಾಣಗಳ ಹೆಸರನ್ನು ಅಧಿಕೃತವಾಗಿ ಬದಲಾಯಿಸಲಾಗಿದೆ ಎಂದು ತಿಳಿಸಲಾಗಿದೆ.


ಪ್ರಯಾಗ್​ರಾಜ್ ಘಾಟ್ ಎಂಬ ಹೆಸರು ಈಗ ಪ್ರಯಾಗರಾಜ್ ಸಂಗಂ:
ಹಿಂದೆ ಅಲಹಾಬಾದ್ ಜಂಕ್ಷನ್, ಅಲಹಾಬಾದ್ ಸಿಟಿ, ಅಲಹಾಬಾದ್ ಚಿವ್ಕಿ ಮತ್ತು ಪ್ರಯಾಗ್​ರಾಜ್ ಎಂದು ಕರೆಯಲಾಗುತ್ತಿದ್ದ ಪ್ರಯಾಗ್​ರಾಜ್‌ನ ನಾಲ್ಕು ನಿಲ್ದಾಣಗಳಿಗೆ ಈಗ ಮರುನಾಮಕರಣ ಮಾಡಲಾಗಿದೆ. ಅಲಹಾಬಾದ್ ಜಂಕ್ಷನ್‌ಗೆ ಪ್ರಯಾಗ್​ರಾಜ್‌ ಜಂಕ್ಷನ್, ಅಲಹಾಬಾದ್ ಸಿಟಿ ಸ್ಟೇಷನ್‌ಗೆ ಪ್ರಯಾಗ್​ರಾಜ್ ರಾಂಬಾಗ್, ಅಲಹಾಬಾದ್ ಚಿವ್ಕಿ ಜಂಕ್ಷನ್‌ಗೆ ಪ್ರಯಾಗ್​ರಾಜ್‌ ಚಿವ್ಕಿ ಮತ್ತು ಪ್ರಯಾಗ್​ರಾಜ್ ಘಾಟ್ ನಿಲ್ದಾಣಕ್ಕೆ ಪ್ರಯಾಗ್​ರಾಜ್ ಸಂಗಂ ಎಂದು ಮರುನಾಮಕರಣ ಮಾಡಲಾಗಿದೆ.


ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಹೆಸರಿಸಲಾಯಿತು!
ಯೋಗಿ ಸರ್ಕಾರ ಕಳೆದ ವರ್ಷ ಮೊಘಲ್ಸರಾಯ್ ರೈಲು ನಿಲ್ದಾಣದ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ಎಂದು ಬದಲಾಯಿಸಿತು. ಅದೇ ಸಮಯದಲ್ಲಿ, ಈ ವರ್ಷದ ಜನವರಿಯಲ್ಲಿ, ಮೊಘಲ್ಸರಾಯ್ ತಹಸಿಲ್ ಹೆಸರನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ತಹಸಿಲ್ ಎಂದು ಬದಲಾಯಿಸುವ ನಿರ್ಧಾರವನ್ನು ಯುಪಿ ಕ್ಯಾಬಿನೆಟ್ ಅಂಗೀಕರಿಸಿತು. ಅಲ್ಲದೆ ಅಲಹಾಬಾದ್‌ಗೆ ಪ್ರಯಾಗ್​ರಾಜ್ ಎಂದು ಮರುನಾಮಕರಣ ಮಾಡಲಾಯಿತು. ಇದಲ್ಲದೆ, ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ.


2017 ರಲ್ಲಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ, ಯೋಗಿ ಸರ್ಕಾರವು ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಮುಂದುವರೆಸಿದೆ. ಮೊಘಲ್ಸರಾಯ್ ನಿಲ್ದಾಣವನ್ನು ಮೊದಲ ಬಾರಿಗೆ ಜನ ಸಂಘದ ಸ್ಥಾಪಕ ಸದಸ್ಯ ದೀನ್ ದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲಾಯಿತು. ಇದರ ನಂತರ ಅಲಹಾಬಾದ್ ಅನ್ನು ಪ್ರಯಾಗ್​ರಾಜ್ ಎಂದು ಮರುನಾಮಕರಣ ಮಾಡಲಾಯಿತು. ಇದಲ್ಲದೆ, ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ.


1968 ರಲ್ಲಿ ಮೊಘಲ್ಸರಾಯ್ ರೈಲ್ವೆ ನಿಲ್ದಾಣದಲ್ಲಿ ದೀನ್ ದಯಾಳ್ ಉಪಾಧ್ಯಾಯ ಶವವಾಗಿ ಪತ್ತೆಯಾಗಿದ್ದರು. ಅದಕ್ಕಾಗಿಯೇ ಈ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲು ಯೋಗಿ ಸರ್ಕಾರ ನಿರ್ಧರಿಸಿತು.