ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿಯವರ ಮಾನಸ ಸರೋವರ ಯಾತ್ರೆಯನ್ನು ಖಂಡಿಸಿರುವ ಬಿಜೆಪಿ ಅವರನ್ನು ನೀವು ರಾಹುಲ್ ಗಾಂಧಿಯಲ್ಲ ಬದಲಾಗಿ  ಚೈನೀಸ್ ಗಾಂಧಿ ಎಂದು  ತಿಳಿಸಿದೆ.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ  ಸಂಬೀತ್ ಪಾತ್ರಾ " ನೀವು ರಾಹುಲ್ ಗಾಂಧಿಯಲ್ಲ ಚೈನೀಸ್ ಗಾಂಧಿ ,ಅದರಲ್ಲಿ ಎನಿದೆ ನೀವು ಯಾವಾಗಲು ನೆರೆಯ ದೇಶದ ಕುರಿತಾಗಿ ಮಾತನಾಡುತ್ತಿರಿ" ಎಂದು ತಿಳಿಸಿದ್ದಾರೆ.



ಪಾತ್ರಾ ಅವರ ಹೇಳಿಕೆ  ರಾಹುಲ್ ಗಾಂಧಿಯವರು  ಮಾನಸ ಸರೋವರಕ್ಕೆ ಪ್ರವಾಸ ಹೊರಟಿರುವ ಹಿನ್ನೆಲೆಯಲ್ಲಿ  ಬಂದಿದೆ. ರಾಹುಲ್ ನೇಪಾಳ ಮಾರ್ಗವಾಗಿ ಮಾನಸ ಸರೋವರಕ್ಕೆ ಪ್ರವಾಸ ಆರಂಭಿಸಲಿದ್ದಾರೆ ಎನ್ನಲಾಗಿದೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸಂಬಿತ್ ಪಾತ್ರಾ " ಯಾಕೆ ರಾಹುಲ್ ಗಾಂಧಿ ಎಲ್ಲವನ್ನು ಚೀನಾದ ದೃಷ್ಟಿಕೋನದ ಮೂಲಕ ನೋಡಲು ಇಚ್ಚಿಸುತ್ತಾರೆ.ಆದರೆ ಏಕೆ ಭಾರತೀಯ ದೃಷ್ಟಿಕೋನದದಿಂದ ನೋಡಲು ಇಚ್ಚಿಸುವುದಿಲ್ಲ? ಅದ್ದರಿಂದ ನಾನು ಕೆಳುವುದಿಷ್ಟೇ ಚೀನಾದಲ್ಲಿ ರಾಹುಲ್ ಯಾವ ರಾಜಕಾರಣಿಯನ್ನು ಭೇಟಿಯಾಗಲಿದ್ದಾರೆ"  ಎಂದು ಪಾತ್ರಾ ಕಿಡಿಕಾರಿದ್ದಾರೆ.