ನವದೆಹಲಿ: ನಿಮ್ಮ ಸುತ್ತಮುತ್ತಲಿನ ಜನ ಶ್ರೀಮಂತರಾಗುವುದನ್ನು ಕಂಡು ನೀವೂ ಕೂಡ ನಮಗೆ ಯಾವಾಗ ಇದು ಸಾಧ್ಯವಾಗುತ್ತದೆ ಎಂದು ಯೋಚಿಸುತ್ತಿದ್ದೀರಾ? ಶ್ರೀಮಂತರು ಅಥವಾ ಕೋಟ್ಯಾಧಿಪತಿಗಳಾಗುವ ಜನರ ವಿಶೇಷ ವಿಷಯವೆಂದರೆ ಅವರು ತಮ್ಮ ಗಳಿಕೆಯ ಕೆಲವು ಭಾಗವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುತ್ತಾರೆ. ಆದ್ದರಿಂದ ಇಂತಹ ಸರ್ಕಾರಿ ಯೋಜನೆ ಕೇವಲ 100 ರೂಪಾಯಿಗಳನ್ನು ಮಾತ್ರ ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಈ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ.


ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಈ 8 ಕೆಲಸಗಳನ್ನು ಜೂನ್ 30ರ ಮೊದಲು ಪೂರ್ಣಗೊಳಿಸಿ


COMMERCIAL BREAK
SCROLL TO CONTINUE READING

ಪಿಪಿಎಫ್ ಯೋಜನೆ ಬಹಳ ಪ್ರಯೋಜನಕಾರಿ:
ಪಿಪಿಎಫ್ (PPF) ಎಂದರೆ ಸಾರ್ವಜನಿಕ ಭವಿಷ್ಯ ನಿಧಿ ಒಂದು ಪ್ರಮುಖ ಉಳಿತಾಯ ಯೋಜನೆಯಾಗಿದೆ. ಸರ್ಕಾರಿ ಯೋಜನೆಯಿಂದ ಮಿಲಿಯನೇರ್ ಆಗಿರುವುದನ್ನು ನಂಬಲು ಕಷ್ಟ. ಆದರೆ ನೀವು ಈ ಯೋಜನೆಯಲ್ಲಿ ಸರಿಯಾದ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಕೇವಲ 100 ರೂ. ಮಾತ್ರ ಹೂಡಿಕೆ ಮಾಡುವ ಮೂಲಕ ನೀವು ಸುಮಾರು 54.47 ಲಕ್ಷ ರೂ. ಗಳಿಸಬಹುದು.


ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಿ:
25 ವರ್ಷದ ವ್ಯಕ್ತಿಯು ತನ್ನ ಮಾಸಿಕ ವೇತನದಿಂದ 3,000 ರೂ (ದೈನಂದಿನ 100 ರೂ) ಉಳಿಸಿ ಪಿಪಿಎಫ್ ಖಾತೆಗೆ ಜಮಾ ಮಾಡಿದರೆ. ಆದ್ದರಿಂದ, ಅವರ 35 ವರ್ಷಗಳ ಪಿಪಿಎಫ್ ಕೊಡುಗೆ ಮತ್ತು ಶೇಕಡಾ 7.1 ರಷ್ಟು ಬಡ್ಡಿದರದ ಪ್ರಕಾರ, ಅವರು ಒಟ್ಟು 54.47 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಅಂದರೆ, ಆ ವ್ಯಕ್ತಿಯು ನಿವೃತ್ತಿಯಾಗುವವರೆಗೂ ಮಿಲಿಯನೇರ್ ಆಗುತ್ತಾನೆ.


ನಿಮ್ಮ ಮಗಳ ಕನಸುಗಳಿಗೆ ರೆಕ್ಕೆ ನೀಡಲು ಉತ್ತಮ ರಿಟರ್ನ್ಸ್ ನೀಡಲಿವೆ ಈ ಯೋಜನೆಗಳು


ಈ ಯೋಜನೆ ತುಂಬಾ ಒಳ್ಳೆಯದು:
ಪಿಪಿಎಫ್ ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು ಸರ್ಕಾರದಿಂದ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿವರ್ಷ 1.5 ಲಕ್ಷ ರೂ.ಗಳ ಆದಾಯ ತೆರಿಗೆಯನ್ನು ಉಳಿಸಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ, ಹಳೆಯ ತೆರಿಗೆ ಸ್ಲ್ಯಾಬ್ ಅನ್ನು ಆರಿಸುವ ಮೂಲಕ ಈ ತೆರಿಗೆ ವಿನಾಯಿತಿ ಪಡೆಯಬಹುದು.