ನವದೆಹಲಿ: ಪಾಸ್ವರ್ಡ್ (Password) ಅನ್ನು ನೆನಪಿಟ್ಟುಕೊಳ್ಳುವುದು ಬಹುಶಃ ಈ ಸಮಯದಲ್ಲಿ ಎಲ್ಲರಿಗೂ ದೊಡ್ಡ ಸವಾಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಬಳಸುವ ಪಾಸ್‌ವರ್ಡ್‌ಗಳು ಫೇಸ್‌ಬುಕ್, ಜಿಮೇಲ್, ಇನ್‌ಸ್ಟಾಗ್ರಾಮ್, ಟ್ವಿಟರ್ ಇತ್ಯಾದಿಗಳಲ್ಲಿ ಬಳಸುವ ಪಾಸ್ವರ್ಡ್ ಗಳು ಒಂದಕ್ಕೊಂದು ಭಿನ್ನವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಖಾತೆಗಳ ಪಾಸ್‌ವರ್ಡ್‌ಗಳನ್ನು ನೀವು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಸಮಸ್ಯೆಯನ್ನು ಪರಿಹರಿಸಬಲ್ಲ ಕೆಲವು ಅಪ್ಲಿಕೇಶನ್‌ಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ತಮ್ಮ ಎಲ್ಲಾ ರೀತಿಯ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳಲು ಯಾವುದೇ ಮನುಷ್ಯನಿದನ ಸಾಧ್ಯವಿಲ್ಲ. ನಿಯಮಿತ ಕಾಲಾಂತರದಲ್ಲಿ  ಪಾಸ್‌ವರ್ಡ್ ಅನ್ನು ಬದಲಾಯಿಸಬೇಕಾದಾಗ ಈ ಸವಾಲು ಇನ್ನಷ್ಟು ಕಠಿಣವಾಗುತ್ತದೆ. ಇಂತಹ  ಪರಿಸ್ಥಿತಿಯಲ್ಲಿ, ಈ ದಿನಗಳಲ್ಲಿ ಅನೇಕ ಅಪ್ಲಿಕೇಶನ್‌ಗಳು ಲಭ್ಯವಿದ್ದು ಅವು ನಿಮ್ಮ ನಿಮ್ಮ ಈ ಸಮಸ್ಯೆಯನ್ನು ಪರಿಹರಿಸುತ್ತವೆ. ಇವುಗಳಲ್ಲಿ  ಕೆಲವು ಅಪ್ಲಿಕೇಶನ್‌ಗಳು ಉಚಿತವಾಗಿದ್ದರೆ, ಉಳಿಕ ಕೆಲವು ಅಪ್ಲಿಕೇಶನ್‌ಗಳು ಇದಕ್ಕಾಗಿ ಹಣವನ್ನು ವಿಧಿಸುತ್ತವೆ.ಹಾಗಾದರೆ ಬನ್ನಿ ಇವುಗಳ ಬಗ್ಗೆ ತಿಳಿದುಕೊಳ್ಳೋಣ.


ಇಲ್ಲಿವೆ ಉಚಿತ ಅಪ್ಲಿಕೇಶನ್ಗಳು
ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಅಲ್ಲಿ ಪಾಸ್ವರ್ಡ್ ಮ್ಯಾನೇಜರ್ ಸರ್ಚ್ ಮಾಡಿದಾಗ ಮೇಲೆ Password Manager-Keeper ಕಾಣಿಸಿಕೊಳ್ಳಲಿದೆ. ಡೌನ್ಲೋಡ್ ಲೆಕ್ಕಾಚಾರದಲ್ಲಿ ಇದಕ್ಕೆ ತುಂಬಾ ಉತ್ತಮ ರೇಟಿಂಗ್ ನೀಡಲಾಗಿದೆ. ಇದು ಸಂಪೂರ್ಣ ಇನ್ಕ್ರಿಪ್ಟ್ ವಾಲ್ಟ್ ಮೇಲೆ ಆಧರಿಸಿದೆ. ಅಂದರೆ, ಇದನ್ನು ಅಷ್ಟೊಂದು ಸುಲಭವಾಗಿ ಹ್ಯಾಕ್ ಮಾಡಲು ಅಸಾಧ್ಯ. ಈ ಆಪ್ ನಲ್ಲಿಯೇ ನಿಮಗೆ ಎಲ್ಲ ಖಾತೆಗಳಿಗೆ ಲಾಗಿನ್ ಮಾಡುವ ಆಪ್ಸನ್ ಸಿಗಲಿದೆ. ನಿಮ್ಮ ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಒಂದು ವೇಳೆ ಉಚಿತ ವರ್ಶನ್ ನಲ್ಲಿ ನಿಮಗೆ ಜಾಹಿರಾತುಗಳು ಬೇಡವಾಗಿದ್ದರೆ, ನೀವು ಇದರ ಪೇಡ್ ವರ್ಶನ್ ಕೂಡ ಖರೀದಿಸಬಹುದು.


ಕೇವಲ ರೂ.99 ನೀಡಿ ನೀವು ಈ ಆಪ್ ಅನ್ನು ಖರೀದಿಸಬಹುದು
ಪಾಸ್ವರ್ಡ್ ಮ್ಯಾನೇಜರ್ ಮೂಲಕ ಪೇಡ್ ಆಪ್ ಕೂಡ ಖರೀದಿಸಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವು ಪೇಡ್ ಆಪ್ ಗಳು ಕೂಡ ಲಭ್ಯವಿದೆ. ಆದರೆ, ಶ್ರೇಯಾಂಕದ ಆಧಾರದ ಮೇಲೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪಾಸ್ವರ್ಡ್ ಸೇಫ್ (Password Safe) ಹೆಸರು ಮೇಲಿದೆ. ಇದಕ್ಕೆ ನೀವು ರೂ.99 ಪಾವತಿಸಬೇಕು. ಹ್ಯಾಕಿಂಗ್ ನಿಂದ ಪಾರಾಗಲು ಇದು 256bit AES ಅಲ್ಗೊರಿಥಂ ಭದ್ರತೆಯಯಿಂದ ಇನ್ಕ್ರಿಪ್ಟ್ ಆಗಿದೆ. ಅಂದರೆ ಈ ಆಪ್ ಅನ್ನು ಅಷ್ಟೊಂದು ಸುಲಭವಾಗಿ ಹ್ಯಾಕ್ ಮಾಡುವುದು ಸಾಧ್ಯವಿಲ್ಲ. ಈ ಆಪ್ ನಲ್ಲಿ ನಿಮಗೆ ಆಟೋ ಲಾಕ್ ಸೌಲಭ್ಯ ಕೂಡ ಸಿಗುತ್ತದೆ. ಅಂದರೆ, ಕೆಲ ಕಾಲ ಇದನ್ನು ನೀವು ಬಳಸಲು ಬಯಸದಿದ್ದರೆ ಇದನ್ನು ನೀವು ಬಂದ್ ಕೂಡ ಮಾಡಬಹುದು.