ನವದೆಹಲಿ: ಮಹಾರಾಷ್ಟ್ರ ನವನಿರ್ಮಾನ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ  ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಬಹುದು ಆದರೆ ನರೇಂದ್ರ ಮೋದಿ ಮತ್ತು ಅವರ ಪಕ್ಷದ ಮೇಲಿನ ದಾಳಿ ಮಾತ್ರ ತೀಕ್ಷ್ಣವಾಗಿದೆ. 


COMMERCIAL BREAK
SCROLL TO CONTINUE READING

ಶುಕ್ರವಾರದಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ ಠಾಕ್ರೆ " ನೀವು (ಮೋದಿ) ನೆಹರು ಮತ್ತು ಇಂದಿರಾ ಗಾಂಧಿಯವರನ್ನು ನಿಂದಿಸುತ್ತಲೇ ಇರಿ..ಆದರೆ ಅವರನ್ನೇ ಮತ್ತೆ ಕಾಪಿ ಮಾಡುತ್ತಿರಿ ..ಕಳೆದ ಐದು ವರ್ಷಗಳಲ್ಲಿ ದೇಶಕ್ಕೆ ಎಲ್ಲ ವಿಷಯಗಳ ಕುರಿತಾಗಿ ಬರಿ ಸುಳ್ಳು ಹೇಳುತ್ತಲೇ ಬಂದಿದ್ದಿರಿ " ಎಂದು ಕಿಡಿ ಕಾರಿದ್ದಾರೆ.


"ನಾನು ಈ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿಲ್ಲವಾದರೂ ಮಹಾರಾಷ್ಟ್ರದಲ್ಲಿ ಎಂಟುರಿಂದ ಹತ್ತು ಮೆರವಣಿಗೆಗಳಲ್ಲಿ ನಾನು ಭಾಗವಹಿಸುತ್ತೇನೆ, ಕೆಲವರು ನಾನು ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆ ಸೇರಿದ್ದೇನೆ ಎಂದು ಗೊಣಗುತ್ತಿದ್ದಾರೆ. ಆದರೆ ನಾನು ಅವರ ಜೊತೆ ಸೇರಿಕೊಳ್ಳುತ್ತಿಲ್ಲ. ಈ ದೇಶಕ್ಕೆ ಅಮಿತ್ ಷಾ ಮತ್ತು ನರೇಂದ್ರ ಮೋದಿ ಇಬ್ಬರು ವ್ಯಕ್ತಿಗಳು ಅಪಾಯಕಾರಿ. ಆದ್ದರಿಂದ ನಾನು ಅವರ ವಿರುದ್ಧ ಹೋರಾಡುತ್ತೇನೆ. ಇದರಿಂದ ಕಾಂಗ್ರೆಸ್-ಎನ್ಸಿಪಿಗೆ ಲಾಭವಾದರೋ ಚಿಂತೆಯಿಲ್ಲ ಎಂದು ಅವರು ರ್ಯಾಲಿಯೊಂದರಲ್ಲಿ ಹೇಳಿಕೆ ನೀಡಿದ್ದರು.  


ರಾಜ್ ಠಾಕ್ರೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಸೋದರ ಸಂಬಂಧಿಯಾಗಿದ್ದು, ಅವರು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಜತೆ ಮೈತ್ರಿಯಾಗಬೇಕೆಂದು ಬಯಸಿದ್ದರು. ಆದರೆ ರಾಹುಲ್ ಗಾಂಧಿ ನೇತೃತ್ವದ ಪಕ್ಷವು ಇದಕ್ಕೆ ಅನುಮತಿ ನೀಡದ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಮಾತ್ರ ಪ್ರಚಾರ ಮಾಡಲು ನಿರ್ಧರಿಸಿದರು.