ಯೂತ್ ಐಕಾನ್ ಎನಿಸಿಕೊಂಡಿರುವ ರಾಹುಲ್ ಗಾಂಧಿಗೆ ಇಂದು ಜನ್ಮ ದಿನದ ಸಂಭ್ರಮ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರಾಗಿರುವ ಇಂದಿರಾ ಗಾಂಧಿಯವರ ಮೊಮ್ಮಗ, ರಾಜೀವ್ ಗಾಂಧಿಯವರ ಮಗನಾಗಿ ಗುರುತಿಸಿಕೊಂಡರು.


COMMERCIAL BREAK
SCROLL TO CONTINUE READING

ಇವರ ಕಟುಂಬದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರಿಂದ  ರಾಹುಲ್ ಗಾಂಧಿಯವರ ಶೈಕ್ಷಣಿಕ ಶಿಕ್ಷಣವು ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ಪ್ರಾರಂಭವಾಯಿತು.  1981 ರಿಂದ 1983 ರವರೆಗೆ ಡೂನ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಇಂದಿರಾಗಾಂಧಿ ಸಾವಿನ ಬಳಿಕ 3 ವರ್ಷಗಳ ಕಾಲ ಶಿಕ್ಷಣಕ್ಕೆ ಬ್ರೆಕ್‌ ಹಾಕಿದರು. 


ಇದನ್ನೂ ಓದಿ: Video Viral: ಮೆಟ್ರೋದಲ್ಲಿ ಇದೊಂದು ಬಾಕಿ ಇತ್ತು... ಈ ಯುವತಿ ಮಾಡಿದ್ದೇನು ನೀವೇ ನೋಡಿ!


ಅಂದಿನ ರಾಜಕೀಯ ಒತ್ತಡದಿಂದಾಗಿ ರಾಹುಲ್ ಮತ್ತು ಅವರ ಕುಟುಂಬಕ್ಕೆ ಭದ್ರತೆ ಇಲ್ಲದಿದ್ದರಿಂದ ಕುಟುಂಬ ಸಮೇತ ವಿದೇಶ ಕಡೆ ಮುಖ ಮಾಡಿದರು. ರಾಹುಲ್ ನಂತರ ಯುನೈಟೆಡ್ ಸ್ಟೇಟ್ಸ್‌ನ ಹೆಸರಾಂತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸೇರಿ ಪದವಿ ವ್ಯಾಸಂಗ ಮುಂದುವರಿಸಿದರು. ಪದವಿ ಶಿಕ್ಷಣದ  ವೇಳೆ ಅವರ ತಂದೆ, ರಾಜೀವ್ ಗಾಂಧಿ ಸಾವಿನ ಪ್ರಕರಣದಿಂದ ಇನ್ನಷ್ಟು ಶಿಕ್ಷಣದಿಂದ ಕುಂಠಿತರಾದರು. ಆದರೂ ಛಲ ಬಿಡದೇ ಓದಿನಲ್ಲಿ ತೊಡಗಿದರು.


ರೈಫಲ್ ಶೂಟಿಂಗ್ ಆಟದಲ್ಲಿ ರಾಹುಲ್ ಗಾಂಧಿ ಅದ್ಭುತವಾದ ಅಥ್ಲೆಟಿಕ್ ಸಾಮರ್ಥ್ಯವನ್ನು ಹೊಂದಿದ್ದರು. ತಮ್ಮ ತಂದೆಯ ಸಾವಿನ ಬಳಿಕ ಭ್ರದತೆಗಾಗಿ ರೌಲ್ ವಿನ್ಸಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.


ಶಾಲಾ ಕಾಲೇಜುಗಳಲ್ಲಿ ಅದೇ ಹೆಸರಿನಿಂದ ಇವರನ್ನು ಗುರುತಿಸಲಾಗುತ್ತಿತ್ತು. ತಮ್ಮ ಜೀವನದಲ್ಲಿ ಅಷ್ಟೆಲ್ಲಾ ಅಡೆತಡೆ ಇದ್ದರೂ 1994 ರಲ್ಲಿ, ಅವರು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಸೇರಿ ಅಭಿವೃದ್ಧಿ ಅಧ್ಯಯನದಲ್ಲಿ ಸ್ನಾತಕೋತ್ತರ ತತ್ವಶಾಸ್ತ್ರ (M.Phil) ಪದವಿಯನ್ನು ಪಡೆದರು.


ಇದನ್ನೂ ಓದಿ: ವರದಕ್ಷಿಣೆ ಡಿಮ್ಯಾಂಡ್‌ ಇಟ್ಟ ವರನಿಗೆ ತಕ್ಕ ಪಾಠ ಕಲಿಸಿದ ವಧು ಕುಟುಂಬದವರು; Viral Video


ತತ್ವಶಾಸ್ತ್ರದಲ್ಲಿ ಎರಡೆರಡು ಸ್ನಾತಕೋತ್ತರ  ಪದವಿ ಪಡೆದಿದ್ದರಿಂದ ಉದ್ಯೋದ ಕೊರತೆ ಕಾಡುವಂತಿರಲಿಲ್ಲ. ತನ್ನ ಶಿಕ್ಷಣವನ್ನು ಮುಗಿಸಿದ ನಂತರ ಅವರು ಲಂಡನ್‌ನಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಬಳಿಕ ಉದ್ಯಮದ ಆಸಕ್ತಿ ತೊರೆದು ಮತ್ತೆ ಭಾರತಕ್ಕೆ ಮರಳಿ 2004 ರಲ್ಲಿ  ರಾಜಕೀಯ ಪ್ರವೇಶಿಸಿ  ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ 2009 ರ ಸ್ಪರ್ಧೆಯ ನಂತರ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಇದೀಗ ಯೂತ್ ಐಕಾನ್ ಎನಿಸಿಕೊಂಡಿದ್ದಾರೆ