ಉತ್ತರ ಪ್ರದೇಶ: ಕೆಲ ಯುವಕರಿಗೆ ಉದ್ಯೋಗ ಇದ್ದು, ಜೀವನದಲ್ಲಿ ಸೆಟಲ್ ಆಗಿದ್ದರೂ ಹೆಣ್ಣು ಸಿಗುತ್ತಿಲ್ಲ ಎಂದು ಸ್ಥಳೀಯ ಪಿಡಿಓ , ಸಿಎಂಗಳಿಗೆ ವಧು ಹುಡುಕಿ ಕೊಡಿ ಎಂದು ಪತ್ರ ಬರೆಯುತ್ತಿದ್ದರೇ, ಇತ್ತ ಯುವಕನೊಬ್ಬನಿಗೆ ಸಿಕ್ಕಿರುವ ವಧುವನ್ನು ಮದುವೆ ಆಗಿ ಜೀವನದಲ್ಲಿ ಖುಷಿಯಾಗಿರವ ಬದಲು ವರಧಕ್ಷಿಣೆ ಡಿಮ್ಯಾಂಡ್ ಇಟ್ಟು ಪಜೀತಿಗೆ ಸಿಕ್ಕಾಕೊಂಡಿದ್ದಾನೆ.
ಹೌದು,
ವರನಿಗೆ ವಧು ಜೊತೆಗೆ ವರದಕ್ಷಿಣೆ ಡಿಮ್ಯಾಂಡ್ ಇಟ್ಟು ಪಜೀತಿ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಂಭವಿಸಿದೆ. ಮದುವೆ ಸಂತಸ ವಧು ವರರಲ್ಲಿ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: ಗೃಹಜ್ಯೋತಿ ಗ್ಯಾರಂಟಿ ಖಚಿತ; ಆದ್ರೇ ಸೋಲಾರ್ ಪ್ರೋತ್ಸಹ ಧನ ಕಡಿತ..!
ತಾನು ಇರುವ ಚಂದಕ್ಕೆ ಪಾಲಿಗೆ ಬಂದಿದು ಪಂಚಾಮೃತ ಎಂಬುವುದನ್ನು ಪಾಲಿಸಿ, ಹಾರ ಬದಲಾಯಿಸಿಕೊಂಡು ಸಂತೋಷವಾಗಿ ಮದುವೆಯಾಗುವುದು ಬಿಟ್ಟು ಹಾರ ಬದಲಿಸುವ ಸಮಯದಲ್ಲಿ ವರನಿಗೆ ವರದಕ್ಷಿಣೆಯ ನೆನಪಾಗಿ, ತನ್ನ ಡಿಮ್ಯಾಂಡ್ ಗೆ ಒಪ್ಪಿದ್ದರೇ ಮಾತ್ರ ಮದುವೆ ಆಗುವ ಎಂದು ಹೆಣ್ಣಿನ ಕಡೆಯವರಿಗೆ ಬೆದರಿಸಿದ್ದಾನೆ.
ಈ ಸಮಸ್ಯೆ ಮಾತಿನಲ್ಲಿ ಮುಗಿಯುತ್ತಿತ್ತೊ ಏನೊ ಆದರೆ ಆತನ ಸ್ನೇಹಿತರಿಗೂ ಹೆಣ್ಣಿನ ಕಡೆಯವರಿಗೂ ಮಾತಿನ ಚಕಮಕಿ ನಡುವೆ ವರನ ಕಡೆಯಿಂದ ವರದಕ್ಷಿಣೆ ಡಿಮ್ಯಾಂಡ್ ಮಾತ್ರ ಬಾರಿ ಜೋರಿತ್ತು.
प्रतापगढ की तस्वीरें देखिए
दूल्हे ने किया शादी से इंकार ,दूल्हे को बंधक बनाकर दी गई तालिबानी सज़ा#pratapgarh pic.twitter.com/OtqTdzNj5A
— Rahul Sisodia (@Sisodia19Rahul) June 15, 2023
ಜಗಳ ಜೋರು ಆಗುತ್ತಿದ್ದಂತೆ ವರದಕ್ಷಿಣೆ ಕೇಳಿದ ವರನನ್ನು ಹೆಣ್ಣಿನ ಕಡೆಯವರು ಮರಕ್ಕೆ ಕಟ್ಟಿ ಹಾಕಿ ತಕ್ಕ ಪಾಠ ಕಲಿಸಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಗೆ ಈತನೇ ಸರಿ ಸಾಟಿ ಎನಿಸುತ್ತದೆ ಅಷ್ಟರ ಮಟ್ಟಿಗೆ ಈತನ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.