ಮುಜಾಫಾರನಗರ: ತಾಯಿಯ ಎದುರಿಗೇ 22 ವರ್ಷದ ಮಗಳ ಮೇಲೆ ಯುವರಿಬ್ಬರು ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಮುಜಾಫರನಗರ ಜಿಲ್ಲೆಯ ಕಕರೌಲಿಯ ಗನ್ನೇ ಗ್ರಾಮದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ತನ್ನ ತಾಯಿಯೊಂದಿಗೆ ಔಷಧಿ ತರಲು ಕಕರೌಲಿ ಠಾಣೆ ವ್ಯಾಪ್ತಿಯ ಮೆಡಿಕಲ್ ಸ್ಟೋರ್ ಗೆ ಹೋಗಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ದಿಲ್ಷಾ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿ ಜಿತೇಂದ್ರ ಕುಮಾರ್ ಹೇಳಿದ್ದಾರೆ. ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.


ಸಂತ್ರಸ್ತೆ ತಂದೆ ನೀಡಿರುವ ದೂರಿನ ಅನ್ವಯ, ತಮ್ಮ ಮಗಳು, ತಾಯಿಯೊಂದಿಗೆ ಔಷಧಿ ತರಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಗಳನ್ನು ಕಬ್ಭಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.