ನವದೆಹಲಿ: ಯುವ ಲೇಖಕರಿಗೆ ತರಬೇತಿ ನೀಡುವ ಮಾರ್ಗದರ್ಶನ ಕಾರ್ಯಕ್ರಮವಾದ ‘Young, Upcoming and Versatile Authors’ (YUVA’ (ಯುವ) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.


COMMERCIAL BREAK
SCROLL TO CONTINUE READING

30 ವರ್ಷಕ್ಕಿಂತ ಕಡಿಮೆ ವಯಸ್ಸಿನ 75 ಮಹತ್ವಾಕಾಂಕ್ಷಿ ಬರಹಗಾರರಿಗೆ ತರಬೇತಿ ನೀಡಲು ಈ ಯೋಜನೆ ಉದ್ದೇಶಿಸಿದೆ,ಇದರ ಮುಖ್ಯ ಉದ್ದೇಶ ಭಾರತ ಮತ್ತು ಅದರ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡುವುದಾಗಿದೆ.ಈ ಯೋಜನೆಯಡಿ ಪ್ರತಿ ಲೇಖಕರಿಗೆ ಆರು ತಿಂಗಳ ಅವಧಿಗೆ 50 ಸಾವಿರ ರೂಗಳು ದೊರೆಯಲಿವೆ.


ಇದನ್ನೂ ಓದಿ: ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ


ಈ ಕಾರ್ಯಕ್ರಮದ ಅಧಿಕೃತ ವೆಬ್‌ಪುಟದ ಲಿಂಕ್ ಹಂಚಿಕೊಂಡ ಪಿಎಂ ಮೋದಿ (PM Modi),“ಯುವಕರಿಗೆ ತಮ್ಮ ಬರವಣಿಗೆಯ ಕೌಶಲ್ಯವನ್ನು ಬಳಸಿಕೊಳ್ಳಲು ಮತ್ತು ಭಾರತದ ಬೌದ್ಧಿಕ ಪ್ರವಚನೆಗೆ ಸಹಕಾರಿಯಾಗಲು ಇಲ್ಲಿ ಒಂದು ಆಸಕ್ತಿದಾಯಕ ಅವಕಾಶವಿದೆ” ಎಂದು ಟ್ವೀಟ್ ಮಾಡಿದ್ದಾರೆ.ಕೋವಿಡ್ -19 ಸಾಂಕ್ರಾಮಿಕವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮದ ನಡುವೆ ಯುವ ಮನಸ್ಸುಗಳಿಗೆ ಸಕಾರಾತ್ಮಕ ಮಾನಸಿಕ ಆಲೋಚನೆಗೆ ಇದು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.


ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ?


ಎರಡನೇ ಹಂತದ ತರಬೇತಿಯ ಮುಂದಿನ ಮೂರು ತಿಂಗಳಲ್ಲಿ, ಆಯ್ದ ಅಭ್ಯರ್ಥಿಗಳು ಸಾಹಿತ್ಯೋತ್ಸವಗಳು, ಪುಸ್ತಕ ಮೇಳಗಳು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮುಂತಾದ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಂವಾದದ ಮೂಲಕ ತಮ್ಮ ತಿಳುವಳಿಕೆಯನ್ನು ವಿಸ್ತರಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.


ಅಲ್ಲದೆ, ಈ ಯುವ ಲೇಖಕರು ಬರೆದ ಪುಸ್ತಕ ಅಥವಾ ಸರಣಿಯ ಪುಸ್ತಕಗಳನ್ನು ಎನ್‌ಬಿಟಿ ಪ್ರಕಟಿಸುತ್ತದೆ ಮತ್ತು ಶೇಕಡಾ 10 ರಷ್ಟು ರಾಯಧನವನ್ನು ಲೇಖಕರಿಗೆ ನೀಡಲಾಗುತ್ತದೆ.ವಿವಿಧ ರಾಜ್ಯಗಳ ನಡುವೆ ಸಂಸ್ಕೃತಿ ಮತ್ತು ಸಾಹಿತ್ಯದ ವಿನಿಮಯವನ್ನು ಖಚಿತಪಡಿಸಿಕೊಳ್ಳಲು ಅವರ ಪ್ರಕಟಿತ ಪುಸ್ತಕಗಳನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.