ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ

ಪೆಪ್ಸಿಕೋ ಕಂಪನಿಯ ಮಾಜಿ ಸಿಇಓ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ ಎಂದು ತಿಳಿದುಬಂದಿದೆ.ನ್ಯೂಯಾರ್ಕ್ ಟೈಮ್ಸ್ ನ ಪ್ರಕಾರ ನೂಯಿ ಹೆಸರನ್ನು ಅಮೆರಿಕಾದ ಶ್ವೇತ ಭವನ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪತ್ರಿಕೆ ವರದಿ ಮಾಡಿದೆ.

Last Updated : Jan 16, 2019, 12:24 PM IST
ಭಾರತೀಯ ಮೂಲದ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ -ವರದಿ  title=

ನವದೆಹಲಿ: ಪೆಪ್ಸಿಕೋ ಕಂಪನಿಯ ಮಾಜಿ ಸಿಇಓ ಇಂದ್ರಾ ನೂಯಿ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಪ್ರಮುಖ ಸ್ಪರ್ಧಿ ಎಂದು ತಿಳಿದುಬಂದಿದೆ.ನ್ಯೂಯಾರ್ಕ್ ಟೈಮ್ಸ್ ನ ಪ್ರಕಾರ ನೂಯಿ ಹೆಸರನ್ನು ಅಮೆರಿಕಾದ ಶ್ವೇತ ಭವನ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪತ್ರಿಕೆ ವರದಿ ಮಾಡಿದೆ.

ಮೂಲಗಳ ಪ್ರಕಾರ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಅವರು ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗುತ್ತಿದೆ. 2018ರ ಅಗಸ್ಟ್ ತಿಂಗಳಲ್ಲಿ ಇಂದ್ರಾ ನೂಯಿಯವರು ಪೆಪ್ಸಿಕೋ ಕಂಪನಿಯ ಸಿಇಓ ಹುದ್ದೆಯಿಂದ ನಿವೃತ್ತರಾಗಿದ್ದರು.

ವಿಶೇಷವೆಂದರೆ ಅವರು ನಿವೃತ್ತರಾದ ನಂತರ ಇಂದ್ರಾ ನೂಯಿಯವರನ್ನು ಮೆಂಟರ್ ಮತ್ತು ಸ್ಪೂರ್ತಿದಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಸಂದರ್ಭದಲ್ಲಿ ನೀಡಿದ ನೂಯಿ ಹೇಳಿಕೆಗಳು ಒಂದೆಡೆ ಕ್ಷಣ ಮುಳುವಾಗಬಹುದು ಎಂದು ತಿಳಿದುಬಂದಿದೆ.  

Trending News