Z+ Security To Mango: ಮಾವಿನ ಹಣ್ಣಿಗೆ `Z` ಪ್ಲಸ್ ಭದ್ರತೆ, ಏನಿದು ಹೊಸ ವಿಷಯ ಅಂತೀರಾ?
Mango Z+ Security - ಮಾವಿನ ಹಣ್ಣಿನ ತೋಟವನ್ನು ಹೊಂದಿದವರು ಹಣ್ಣು ಸೀಜನ್ ಬಂದ ತಕ್ಷಣ ಅವುಗಳನ್ನು ಯಾರೂ ಕಿತ್ತು ತಿನ್ನಬಾರದು ಎಂಬ ಉದ್ದೇಶದಿಂದ ಅವುಗಳ ರಕ್ಷಣೆ ಮಾಡುವುದನ್ನು ನೀವು ನೋಡಿರಬಹುದು.
Z+ Security Security To Mango: ಬೇಸಿಗೆ ಆರಂಭವಾಗುತ್ತಲೇ ಮಾವುಗಳ ಚರ್ಚೆ ಆರಂಭವಾಗುವುದು ಸಹಜ. ಸಾಮಾನ್ಯವಾಗಿ ಮಾವುಗಳನ್ನು 'ಹಣ್ಣುಗಳ ರಾಜ' ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣಿನ ರುಚಿ ಸವಿಯದೆ ಹೋದರೆ ಬೇಸಿಗೆ ಕೂಡ ಅಪೂರ್ಣ. ಈಗಾಗಲೇ ಬೇಸಿಗೆ ಆರಂಭಗೊಂಡಿದ್ದು, ಮಾರುಕಟ್ಟೆಗೆ ಮಾವು ಬರಲಾರಂಭಿಸಿದೆ. ನಾವೆಲ್ಲಾ ಒಂದಲ್ಲ ಒಂದು ಹಂತದಲ್ಲಿ ಮಾವಿನ ಮರಗಳನ್ನು ನೋಡಿದ್ದೇವೆ. ಅದರಲ್ಲೂ ಬೇಸಿಗೆಯಲ್ಲಿ ಗಿಡದಿಂದ ಮಾವಿನ ಹಣ್ಣನ್ನು ಕಿತ್ತು ತಿನ್ನುವುದು ಎಷ್ಟೊಂದು ಖುಷಿ ಕೊಡುತ್ತದೆ ಎಂಬುದು ಹಳ್ಳಿಗಳಲ್ಲಿ ಇರುವ ಜನರಿಗೆಯೇ ಗೊತ್ತು.
ಮಾವಿನ ಹಣ್ಣಿಗೆ ಸಿಕ್ತು ZED ಪ್ಲಸ್ ಸೆಕ್ಯೂರಿಟಿ
ಹಳ್ಳಿಗಳಲ್ಲಿ ಹಲವು ಜನರ ಬಳಿ ಮಾವಿನ ಹಣ್ಣುಗಳ ತೋಟ ಇರುತ್ತದೆ. ಇದಲ್ಲದೆ ಕೆಲವರು ತಮ್ಮ ಮನೆಯ ಅಂಗಳದಲ್ಲಿಯೂ ಕೂಡ ಒಂದೆರಡು ಮಾವಿನ ಮರಗಳನ್ನು ಬೆಳೆಸಿರುತ್ತಾರೆ. ಈ ಮರಗಳು ಬೆಳೆದ ನಂತರ ರುಚಿ ರುಚಿಯಾದ ಹಣ್ಣುಗಳನ್ನು ಕೊಡುತ್ತವೆ. ಮಾವಿನ ತೋಟ ಹೊಂದಿದವರು, ಗಿಡಗಳ ಮೇಲೆ ಮಾವಿನ ಹಣ್ಣು ಬಂದ ತಕ್ಷಣ ಅವುಗಳ ರಕ್ಷಣೆಯಲ್ಲಿ ತೊಡಗುವುದನ್ನು ನೀವು ನೋಡಿರಬಹುದು. ಮಾವನ್ನು ಯಾರು ಕಿತ್ತು ತಿನ್ನಬಾರದು ಎಂಬ ಉದ್ದೇಶ ಅವರದ್ದಾಗಿರುತ್ತದೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ಭಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ ಮಾವೊಂದಕ್ಕೆ ZED ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ ಎಂದು ಬರೆಯಲಾಗಿದೆ.
ಇದನ್ನೂ ಓದಿ-Viral Video Of Holi: ಹೋಳಿ ಹಬ್ಬದ ದಿನ ನೀರಿನಿಂದ ತುಂಬಿದ ಬಲೂನ್ ತಾಕಿ ಆಟೋ ಪಲ್ಟಿ.. Video ನೋಡಿ
ಕೇಳಿ ಬೆಚ್ಚಿ ಬಿದ್ರಾ? ಹೌದು, ಮಾವಿನ ಹಣ್ಣಿಗೆ 'ZED' ಪ್ಲಸ್ ಸೆಕ್ಯೂರಿಟಿ? ಇದು ಸ್ವಲ್ಪ ಜಾಸ್ತಿಯಾಯ್ತು ಅಂತ ನಿಮಗೂ ಅನಿಸಿರಬಹುದು. ಆದರೆ, ಫೋಟೋದಲ್ಲಿ ತೋರಿಸಲಾಗಿರುವ ಮಾವಿನ ಹಣ್ಣಿಗೆ ಯಾವ ರೀತಿ ಸೆಕ್ಯೂರಿಟಿ ಸಿಗುತ್ತಿದೆ ಎಂದರೆ ಅದನ್ನು ಭೇದಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಮಾವನ್ನು ಕಿತ್ತು ತಿನ್ನುವ ವಿಷಯ ಬಿಟ್ಹಾಕಿ, ಅದಕ್ಕೆ ಕಲ್ಲು ಹೊಡೆಯಲು ಕೂಡ ಜನ ನಡುಗುತ್ತಿದ್ದಾರೆ. ವಾಸ್ತವದಲ್ಲಿ ಜೇನುನೊಣಗಳು ಈ ಮಾವಿನ ರಕ್ಷಣೆಯನ್ನು ಮಾಡುತ್ತಿವೆ.
ಜೇನು ನೊಣಗಳು ಮಾವಿನ ಹಣ್ಣಿನ ರಕ್ಷಣೆಯಾ?
ಜೇನುನೊಣಗಳು ಎಷ್ಟೊಂದು ಅಪಾಯಕಾರಿ ಎಂಬ ಸಂಗತಿ ಎಲ್ಲರಿಗೂ ಗೊತ್ತು. ಜೇನುಗೂಡಿನ ಮೇಲೆ ಕಲ್ಲು ಹೊಡೆಯುವುದು ಎಂದರೆ ನಮಗೆ ನಾವೇ ಅಪಾಯ ಎಳೆದುಕೊಂಡಂತೆ. ಜೇನುನೊಣಗಳು ಕಚ್ಚಿದರೆ ಯಾವ ಪರಿ ನೋವಾಗುತ್ತದೆ ಎಂದರೆ, ಅದನ್ನು ಅನುಭವಿಸಿದವರಿಗೆಯೇ. ಅದೇನೇ ಇರಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ ಜೇನುನೊಣಗಳು ಮಾವಿನ ಹಣ್ಣನ್ನು ರಕ್ಷಿಸುತ್ತಿವೆ. ಮಾವು ಸಾಮಾನ್ಯ ಜೇನುಗೂಡಿನ ಮೇಲೆ ನೇತಾಡುತ್ತಿದೆ ಎಂಬಂತೆ ಕಂಡುಬರುತ್ತಿದೆ. ಈ ಫೋಟೋವನ್ನು @ipsvijrk ಹೆಸರಿನ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ಇದರೊಂದಿಗೆ, 'ಋತುವಿನ ಮೊದಲ ಮಾವು, ಅದೂ Z ಪ್ಲಸ್ ಭದ್ರತೆಯೊಂದಿಗೆ' ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.