Psychologist Love Tips: ಈ 4 ವಿಧಾನಗಳು ನಿಮಗೆ ತಿಳಿದಿದ್ದರೆ, ಯಾರನ್ನು ಬೇಕಾದರೂ ನೀವು ನಿಮ್ಮ ಪ್ರೀತಿಗೆ ಬೀಳಿಸಬಹುದು!

Psychologist Love Tips - ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರೂ ನಿಮ್ಮನ್ನು ಇಷ್ಟಪಡಬೇಕೆಂದು ನೀವು ಬಯಸುತ್ತೀರಿ. ಒಂದು ವೇಳೆ ಅದು  ಸಂಭವಿಸದೆ ಹೋದಲ್ಲಿ, ರಿಲೇಶನ್ ಶಿಪ್ ತಜ್ಞ ಕಿಂಬರ್ಲಿ ಮೊಫಿಟ್ ಅವರ ನಾಲ್ಕು ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ಇದನ್ನು ಸಾಧಿಸಬಹುದು.  

Written by - Nitin Tabib | Last Updated : Mar 16, 2022, 07:21 PM IST
  • ರಿಲೇಶನ್ ಶಿಪ್ ತಜ್ಞರ ಹಕ್ಕು ಮಂಡನೆ
  • ಯಾರನ್ನು ಬೇಕಾದರೂ ನೀವು ನಿಮ್ಮ ಪ್ರೀತಿಯಲ್ಲಿ ಬೀಳಿಸಬಹುದು
  • ಇದಕ್ಕಾಗಿ ತಜ್ಞ ಹೇಳಿದ್ದು ಕೇವಲ ನಾಲ್ಕೇ ಟ್ರಿಕ್ಸ್
Psychologist Love Tips: ಈ 4 ವಿಧಾನಗಳು ನಿಮಗೆ ತಿಳಿದಿದ್ದರೆ, ಯಾರನ್ನು ಬೇಕಾದರೂ ನೀವು ನಿಮ್ಮ ಪ್ರೀತಿಗೆ ಬೀಳಿಸಬಹುದು! title=
Psychologist Love Tips (Representational Image)

Pshychologist Love Tips: ರಿಲೇಶನ್ ಶಿಪ್ ತಜ್ಞ ಕಿಂಬರ್ಲಿ ಮೊಫಿಟ್ (Kimberly Moffit) ಅವರು ಕೆಲವು ಸುಲಭ ಸಲಹೆಗಳನ್ನು ನೀಡಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಪ್ರೀತಿಪಾತ್ರರನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡಬಹುದು. ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರು ನಿಮ್ಮನ್ನು ಇಷ್ಟಪಡಬೇಕೆಂದು ನೀವು ಬಯಸುತ್ತಿದ್ದು, ಅದು ಸಾಧ್ಯವಾಗದಿದ್ದರೆ, ಕಿಂಬರ್ಲಿ ಮೊಫಿಟ್ ಅವರ ನಾಲ್ಕು ಸುಲಭ ತಂತ್ರಗಳನ್ನು ಅನುಸರಿಸಿ (Love Tips), ನೀವು ಅದನ್ನು ಸಾಧಿಸಬಹುದು.

ವೈಜ್ಞಾನಿಕ ಕಾರಣಗಳನ್ನು ಹೇಳಿದ ತಜ್ಞರು
'ದಿ ಸನ್'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕಿಂಬರ್ಲೇ ಮಾಫಿಟ್ ತಮ್ಮ ಅಧಿಕೃತ ಟಿಕ್ ಟಾಕ್ ಖಾತೆಯಾಗಿರುವ @ask_kimberly ಮೂಲಕ ವಿಡಿಯೋವನ್ನು (Viral On Internet) ಹಂಚಿಕೊಂಡು, ಈ ಸುಲಭ ವಿಧಾನಗಳ ಕುರಿತು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಈ ಸಲಹೆಗಳ ಹಿಂದೆ ವೈಜ್ಞಾನಿಕ ಕಾರಣವಿದ್ದು, ಈ ಕಾರಣಗಳು ನಿಮ್ಮ ಎದುರಿಗೆ ಇರುವ ವ್ಯಕ್ತಿಯ ಮನದಲ್ಲಿ ನಿಮಗಾಗಿ ಭಾವನೆಗಳನ್ನು ಮೇಲೆತ್ತುವ ಕೆಲಸ ಮಾಡಲಿವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಕಿಂಬರ್ಲೇ ಮಾಫಿಟ್ ಓರ್ವ ವೃತ್ತಿಪರ ರಿಲೇಶನ್ಶಿಪ್ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಾರೆ. ತಮ್ಮ ಈ ಸಲಹೆಗಳು ಅತ್ಯಂತ ಅದ್ಭುತವಾಗಿವೆ ಎಂಬ ವಿಶ್ವಾಸವನ್ನು ಕೂಡ ಅವರು ವ್ಯಕ್ತಪಡಿಸುತ್ತಾರೆ.

ಅಧ್ಯಯನದಲ್ಲಿ (Interesting News) ತಾವು ಮಾನವರ ಮನಸ್ಸನ್ನು ಓದುವ ಪ್ರಯತ್ನ ನಡೆಸಿರುವುದಾಗಿ ಕಿಂಬರ್ಲಿ ಹೇಳುತ್ತಾರೆ. ತಾವು ನಡೆಸಿರುವ ಅಧ್ಯಯನದ ಮೂಲಕ 4 ಸಲಹೆಗಳನ್ನು ಸಿದ್ಧಪಡಿಸಿರುವುದಾಗಿ ಕಿಂಬರ್ಲಿ ಹೇಳಿದ್ದಾರೆ. ಇವುಗಳಿಗೆ ಅವರು ರೇಸಿಪ್ರೋಕಲ್ ಲೈಕಿಂಗ್ ಕಾನ್ಸೆಪ್ಟ್' ಎಂದು ಹೆಸರಿಟ್ಟಿದ್ದಾರೆ. ಕಿಂಬರ್ಲಿ ಹೇಳಿರುವ ನಾಲ್ಕು ಸಲಹೆಗಳು (Tips For Love) ಕೆಳಗಿನಂತಿವೆ.

ಮೊದಲನೇ ಸಲಹೆ - ನೀವು ಯಾರನ್ನಾದರು ಇಷ್ಟಪಡುತ್ತಿದ್ದರೆ, ಮೊದಲು ಅದನ್ನು ಅವರಿಗೆ ತಿಳಿಸಿ. ಆ ವ್ಯಕ್ತಿಗೆ ನೀವು ನಿಮ್ಮ ವಿಶೇಷ ಕನೆಕ್ಷನ್ ಅನ್ನು ಅನುಭವಿಸುವಂತೆ ಮಾಡಿ.

ಎರಡನೇ ಸಲಹೆ - ಸಮಯ ಸಿಕ್ಕಾಗಲೆಲ್ಲಾ ನೀವು ಇಷ್ಟಪಡುವ ವ್ಯಕ್ತಿಯಲ್ಲಿ ಮತ್ತು ನಿಮ್ಮಲ್ಲಿ ಇರುವ ಸಮಾನತೆಗಳ ಕುರಿತು ಚರ್ಚಿಸಿ. ಇದರಿಂದ ಎದುರಿಗೆ ಇರುವ ವ್ಯಕ್ತಿ ನಿಮ್ಮನ್ನು ತನ್ನಂತೆಯೇ ಎಂದು ಭಾವಿಸುತ್ತಾರೆ.

ಇದನ್ನೂ ಓದಿ-Shukra Gochar : ಕುಂಭ ರಾಶಿಗೆ ಶುಕ್ರನ ಪ್ರವೇಶ, ಇದರಿಂದ ಈ 4 ರಾಶಿಯವರಿಗೆ ಅದೃಷ್ಟ ಜೊತೆಗೆ ಭಾರಿ ಲಾಭ

ಮೂರನೇ ಸಲಹೆ - ಪ್ರತಿ ಬಾರಿ  ನೀವು ಮೇಕ್ ಅಪ್ ಹಾಕಿಕೊಂಡು ಅವರನ್ನು ಭೇಟಿಯಾಗುತ್ತಿದ್ದರೆ, ಕೆಲವೊಮ್ಮೆ ನೀವು ಅವರನ್ನು ನಿಮ್ಮ ನೈಸರ್ಗಿಕ ಲುಕ್ ನಲ್ಲಿಯೂ ಕೂಡ ಭೇಟಿಯಾಗಿ. ನೀವು ಮೆಚ್ಚುವ ನಿಮ್ಮ ಹುಡುಗನಿಗೆ ನಿಮ್ಮ ನೈಸರ್ಗಿಕ ಸ್ಕಿನ್ ಕೂಡ ತೋರಿಸಿ. ಇದರಿಂದ ಆತ ನಿಮ್ಮೊಂದಿಗೆ ಕಂಫರ್ಟ್ ಆಗಿ ವ್ಯವಹರಿಸುತ್ತಾನೆ.

ಇದನ್ನೂ ಓದಿ-Atma Ratna Stone: ನಿಮಗೆ ಈ ಕಲ್ಲು ಸಿಕ್ಕರೆ ಅದೃಷ್ಟದ ಜೊತೆಗೆ ಧನಲಾಭವಾಗಲಿದೆ

ನಾಲ್ಕನೇ ಸಲಹೆ - ಇತರ ಯುವಕರಲ್ಲಿಯೂ  ಕೂಡ ನೀವು ಆಸಕ್ತಿ ಹೊಂದಿರುವುದಾಗಿ ಆತನಿಗೆ ಹೇಳಿ. ಇದರಿಂದ ಆತನ 'ಪ್ರೋಟೆಕ್ಟಿವ್ ಇನ್ಸ್ ಟಿಂಗ್ಟ್ ಎಚ್ಚೆತ್ತುಕೊಳ್ಳುತ್ತದೆ ಮತ್ತು ಆತ ನಿಮ್ಮೊಂದಿಗೆ ರಿಲೇಶನ್ ಶಿಪ್ ಬೆಳೆಸಲು ಯತ್ನಿಸುತ್ತಾನೆ.  

ಇದನ್ನೂ ಓದಿ-Palmistry : ಅಂಗೈಯಲ್ಲಿ ಈ ರೇಖೆ ಇದ್ದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News