`ಝೀ ಗ್ರೂಪ್ ದೇಶದ ಅತ್ಯಂತ ದೊಡ್ಡ ಸ್ವದೇಶಿ ನೆಟ್ವರ್ಕ್`
ಕೇವಲ ವ್ಯಾಯಾಮದಿಂದ ಮಾತ್ರ ಉತ್ತಮ ಆರೋಗ್ಯ, ದೀರ್ಘಾಯು, ಶಕ್ತಿ ಹಾಗು ಸುಖ ಪ್ರಾಪ್ತವಾಗುತ್ತದೆ. ನಿರೋಗಿಯಾಗಿರುವುದು ಒಂದು ಪರಮಾನಂದ ಮತ್ತು ಉತ್ತಮ ಆರೋಗ್ಯದಿಂದ ಮಾತ್ರ ಎಲ್ಲ ಕಾರ್ಯಗಳು ಸಿದ್ಧಿಯಾಗುತ್ತವೆ.
ನವದೆಹಲಿ: ಫಿಟ್ನೆಸ್ ಇಂಡಿಯಾ ಅಭಿಯಾನದ ಅಡಿ ಝೀ ಬಿಸನೆಸ್ ಇಟ್ಟ ಹೆಜ್ಜೆಯನ್ನು ಸ್ವಾಮಿ ರಾಮದೇವ್ ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಝೀ ನೆಟ್ವರ್ಕ್ ನಲ್ಲಿ ಮೂಡಿ ಬರುವ ಕಾರ್ಯಕ್ರಮಗಳನ್ನು ಜನರು ಹೆಚ್ಚಿಗೆ ಮೆಚ್ಚಿಕೊಳ್ಳುತ್ತಾರೆ. ಈ ವೇಳೆ ಫಿಟ್ನೆಸ್ ಮಂತ್ರ ಕುರಿತು ಮಾತನಾಡಿರುವ ಅವರು 'ನಾವು ಫಿಟ್ ಆಗಿದ್ದರೆ, ದೇಶ ಫಿಟ್ ಆಗುತ್ತದೆ' ಎಂದಿದ್ದಾರೆ. ಫಿಟ್ನೆಸ್ ಗಿಂತ ದೊಡ್ಡದು ಯಾವುದು ಇಲ್ಲ ಎಂದು ರಾಮದೇವ್ ಹೇಳಿದ್ದಾರೆ. ಝೀ ಬಿಸಿನೆಸ್ ನಲ್ಲಿ ಮೂಡಿಬರುವ ಬುಲ್ ರನ್ ಕಾರ್ಯಕ್ರಮದ ಕುರಿತು ಬಾಬಾ ರಾಮದೇವ್ ಮೆಚ್ಚುಗೆ ವ್ಯಕ್ತಪಡಿಸಿ, ಝೀ ಗ್ರೂಪ್ ದೇಶದ ಅತ್ಯಂತ ದೊಡ್ಡ ಸ್ವದೇಶಿ ನೆಟ್ವರ್ಕ್ ಆಗಿದೆ ಎಂದು ಕೊಂಡಾಡಿದ್ದಾರೆ.
ದೇಶಾದ್ಯಂತ ಇರುವ ಜನರಿಗೆ ಉತ್ತಮ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ 'ಫಿಟ್ ಇಂಡಿಯಾ ಮೂವ್ ಮೆಂಟ್'ನ ಶುಭಾರಂಭ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಕ್ರೀಡೆ ಹಾಗೂ ಫಿಟ್ನೆಸ್ ಜೊತೆ ನೇರ ಸಂಬಂಧ ಹೊಂದಿದೆ ಎಂದಿದ್ದರು. ಆರೋಗ್ಯಕರ ಜೀವನಕ್ಕೆ ಇದು ಕೇವಲ ಒಂದು ಶಬ್ದವಾಗಿರದೆ, ಅತ್ಯಾವಶ್ಯಕ ಷರತ್ತಾಗಿದೆ. ನಮ್ಮ ಸಂಸ್ಕೃತಿಯ ಮೂಲ ಆಧಾರ ಫಿಟ್ನೆಸ್ ಮೇಲೆ ಒತ್ತು ನೀಡುತ್ತದೆ ಮತ್ತು ಫಿಟ್ನೆಸ್ ನಮ್ಮ ಜೀವನ ಶೈಲಿಯ ಸಹಜ ಅಂಗವಾಗಿದೆ ಎಂದಿದ್ದರು.
ಕೇವಲ ವ್ಯಾಯಾಮದಿಂದ ಮಾತ್ರ ಉತ್ತಮ ಆರೋಗ್ಯ, ದೀರ್ಘಾಯು, ಶಕ್ತಿ ಹಾಗು ಸುಖ ಪ್ರಾಪ್ತವಾಗುತ್ತದೆ. ನಿರೋಗಿಯಾಗಿರುವುದು ಒಂದು ಪರಮಾನಂದ ಮತ್ತು ಉತ್ತಮ ಆರೋಗ್ಯದಿಂದ ಮಾತ್ರ ಎಲ್ಲ ಕಾರ್ಯಗಳು ಸಿದ್ಧಿಯಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಈ ಪರಿಭಾಷೆ ಬದಲಾಗಿದ್ದು, ಸ್ವಾರ್ಥದಿಂದ ಮಾತ್ರ ಸಕಲ ಕಾರ್ಯಗಳು ಸಿದ್ಧಿಯಾಗುತ್ತವೆ ಎನ್ನಲಾಗುತ್ತಿದ್ದು, ನಾವು ಉತ್ತಮ ಆರೋಗ್ಯದ ನಮ್ಮ ಹಳೆ ಪರಂಪರೆ ಹಾಗೂ ಪರಿಭಾಷೆಯನ್ನು ಮತ್ತೆ ಚರಿತಾರ್ಥಗೊಳಿಸುವ ಅಗ್ಯತ್ಯತೆ ಇದೆ ಎಂದು ಪ್ರಧಾನಿಗಳು ಹೇಳಿದ್ದರು.
ಕಾಲಕ್ಕೆ ತಕ್ಕಂತೆ ಇದೀಗ ಪರಿಸ್ಥಿತಿಗಳು ಬದಲಾಗುತ್ತಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲಿ ಜಾಗತಿಕವಾಗಿಯೂ ಕೂಡ ಉತ್ತಮ ಆರೋಗ್ಯದ ಅವಶ್ಯಕತೆ ಇದೆ ಎಂಬುದು ಇಂದಿನ ವಾಸ್ತವ. ಹೆಲ್ದಿ ಚೀನಾ ಅಭಿಯಾನವನ್ನು ಆರಂಭಿಸಿರುವ ಚೀನಾ 2030ನ್ನು ತನ್ನ ಗುರಿಯಾಗಿರಿಸಿದ್ದರೆ, ಆಸ್ಟ್ರೇಲಿಯಾ ಕೂಡ ತನ್ನ ನಾಗರಿಕರನ್ನು ಸಕ್ರೀಯಗೊಳಿಸಲು ಗುರಿ ನಿಗದಿಪಡಿಸಿದೆ ಎಂದು ಪ್ರಧಾನಿ ಹೇಳಿದ್ದರು.