ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಸಾಕಷ್ಟು ನೂತನ ಸುದ್ದಿ ವಾಹಿನಿಗಳು, ಪತ್ರಿಕೆಗಳು ಆರಂಭವಾಗುತ್ತಿವೆ. ಅಂತೆಯೇ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದವರು ಸಾಕಷ್ಟು ಮಂದಿ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಪದವೀಧರರಿಗೆ ಉತ್ತಮ ತರಬೇತಿ ನೀಡಿ, ಭವಿಷ್ಯ ರೂಪಿಸುವ ಉದ್ದೇಶದಿಂದ ಜೀ ಮೀಡಿಯಾ ಸಂಸ್ಥೆ ಪತ್ರಿಕೋದ್ಯಮ ವಿಷಯದಲ್ಲಿ 9 ತಿಂಗಳ ವಿಶೇಷ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಭಾರತದ ಅತಿ ದೊಡ್ಡ ಸುದ್ದಿ ಜಾಲವಾದ ಜೀ ಮೀಡಿಯಾ ಕಾರ್ಪೊರೇಶನ್ ಲಿಮಿಟೆಡ್ ಹಾಗೂ ಡಿಎನ್ಎ ಸಹಯೋಗದಲ್ಲಿ ಝೀ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಆರ್ಟ್ಸ್(ZIMA) ನೋಯ್ಡಾದಲ್ಲಿ 9 ತಿಂಗಳ ಅವಧಿಯ ವಿಶೇಷ ಪತ್ರಿಕೋದ್ಯಮ ಕೋರ್ಸ್ ಪ್ರಾರಂಭಿಸಿದೆ. ಈ 9 ತಿಂಗಳ ಕೋರ್ಸ್ನಲ್ಲಿ 3 ತಿಂಗಳ ನ್ಯೂಸ್ ರೂಂ ಇಂಟರ್ನ್ಷಿಪ್ ಅನ್ನು ಸಹ ಒಳಗೊಂಡಿದೆ. ಈ ಅವಧಿಯಲ್ಲಿ ವಿದ್ಯಾರ್ಥಿವೇತನ ಸಹ ನೀಡಲಾಗುತ್ತದೆ. ಅಲ್ಲದೆ, ಈ ಕೋರ್ಸ್ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಎಸ್ಸೆಲ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಸೌಲಭ್ಯವನ್ನೂ ಸಹ ಒದಗಿಸಲಾಗುತ್ತದೆ. 


ಕೋರ್ಸ್'ಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಈ 9 ತಿಂಗಳ ವಿಶೇಷ ಕೋರ್ಸ್'ಗೆ ಸೇರಬಯಸುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಎದುರಿಸಬೇಕಾಗುತ್ತದೆ. ಇಂಗ್ಲಿಷ್, ಹಿಂದಿ ಮತ್ತು ಇತರ ಯಾವುದೇ ಒಂದು ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಲಿಖಿತ ಪರೀಕ್ಷೆ, ಕ್ಯಾಮರಾದಲ್ಲಿ ಚಿತ್ರೀಕರಿಸಲಾದ ಲೈವ್ ವೀಡಿಯೊ ಪರೀಕ್ಷೆಯೊಂದಿಗೆ ಜೀ ವಾಹಿನಿ ಮತ್ತು ಡಿಎನ್ಎ ಹಿರಿಯ ಸಂಪಾದಕರು ನೇರ ಸಂದರ್ಶನ ನಡೆಸುತ್ತಾರೆ. ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಮಾತ್ರ ಕೋರ್ಸ್'ಗೆ ಪ್ರವೇಶ ಪಡೆಯಬಹುದು. 9 ತಿಂಗಳ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ, ಜೀ ಮೀಡಿಯಾ/ಡಿಎನ್ಎ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶ ನೀಡಲಾಗುತ್ತದೆ. 
 
ಕೋರ್ಸ್'ನಲ್ಲಿ ಏನನ್ನು ಕಲಿಸಲಾಗುತ್ತದೆ?
ಈ 9 ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬಹುಭಾಷೆ, ಲೇಟೆಸ್ಟ್ ಟ್ರೆಂಡ್ಸ್, ಮಾಧ್ಯಮ ತಂತ್ರಜ್ಞಾನ, ವರ್ಧಿತ ರಿಯಾಲಿಟಿ, ಸುದ್ದಿ ಬರವಣಿಗೆ, ಸಂಪಾದನೆ ಮೊದಲಾದ ಪತ್ರಿಕೋದ್ಯಮ ಸಂಬಂಧಿತ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಶಿಕ್ಷಣ ಮತ್ತು ಮಾಧ್ಯಮ ಕ್ಷೇತ್ರದ ನುರಿತ ತಜ್ಞರು ತರಗತಿಗಳನ್ನು ತೆಗೆದುಕೊಳ್ಳಲಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ದೊರೆತಂತಾಗುತ್ತದೆ. 


ಯಾರನ್ನು ಸಂಪರ್ಕಿಸಬೇಕು?
ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಈ 9 ತಿಂಗಳ ತರಬೇತಿ ಕಾರ್ಯಕ್ರಮವನ್ನು ನೋಯ್ಡಾ, ಮುಂಬೈ ಮತ್ತು ಜೈಪುರ ಕೇಂದ್ರಗಳಲ್ಲಿ ಆರಂಭಿಸಲಾಗುತ್ತಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಇಮೇಲ್ ವಿಳಾಸ yogesh.lad@zeemedia.esselgroup.com ಅಥವಾ diana.chettiar@dnaindia.net ಅನ್ನು ಸಂಪರ್ಕಿಸಬಹುದು. 
 
ZIMA ಪತ್ರಿಕೋದ್ಯಮ ತರಬೇತಿ ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.