Liquor Sale prohibited in Karnataka: ವಿಧಾನಸಭಾ ಚುನಾವಣೆ‌ ಹಿನ್ನೆಲೆ ಮದ್ಯ ಪ್ರಿಯರಿಗೆ ಶಾಕಿಂಗ್‌ ಸುದ್ದಿಯೊಂದಿ ಬಂದಿದೆ. ಮತದಾನದ ದಿನ ಹಾಗೂ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮ ವಹಿಸಿರುವ ಹಿನ್ನೆಲೆಯಲ್ಲಿ ಅಂದು ಮದ್ಯ ಮಾರಾಟವನ್ನು ನಿಷೇಧ ಮಾಡಿ ಘೋಷಣೆ ಹೊರಡಿಸಲಾಗಿದೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಈ ಮೂರು ದಿನ ಎಣ್ಣೆ ಸಿಗೋದಿಲ್ಲ!


ಈ ಹಿಂದೆ ಕೊರೊನಾ ಲಾಕ್​ಡೌನ್​ ನಿಂದ ಎಣ್ಣೆ ಸಿಗದೇ ಮದ್ಯಪ್ರಿಯರು ಪರದಾಡಿದ್ದರು. ಈಗ ಅದೇ ರೀತಿ ಆಗಬಾರದು ಅಂದ್ರೆ ಈ ಮೂರು ದಿನಾಂಕಗಳನ್ನು ನಿಮ್ಮ ತಲೆಯಲ್ಲಿಟ್ಟುಕೊಂಡಿರಿ. ಮೂರು ದಿನ ಎಣ್ಣೆ ಸಿಗದೇ ಇರೋದಕ್ಕೂ ಒಂದು ಕಾರಣವಿದೆ. ಅದು ಬೇರೆ ಯಾವುದು ಅಲ್ಲ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆ ದಿನಗಳಲ್ಲಿ ಎಣ್ಣೆ ಸಿಗೋದಿಲ್ಲ.


ಇದನ್ನೂ ಓದಿ: Karnataka Assembly Election: ಬಿಜೆಪಿ ಪ್ರಜಾ ಪ್ರಣಾಳಿಕೆಯ ಮುಖ್ಯಾಂಶಗಳು


ಇದೇ ತಿಂಗಳ 10 ರಂದು ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಎಣ್ಣೆ ಅಂಗಡಿ ಬಂದ್ ಮಾಡೋದಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೇ 8 ರ ಸಂಜೆ 5 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ, ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಈ ಕ್ರಮ ಕೈಗೊಂಡಿದ್ದು, ಮುಂದುವರೆದಂತೆ ಮತ ಎಣಿಕೆಯ ದಿನದಂದು ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ 14 ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಅಬಕಾರಿ ಇಲಾಖೆ ಆದೇಶ ನೀಡಿದೆ


ಇನ್ನು ಗಡಿ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ಗೋವಾ, ತಮಿಳುನಾಡಿಗೂ ಈಗಾಗಲೇ ಡ್ರೈ ಡೇಗೆ ಸೂಚನೆ ನೀಡಲಾಗಿದೆ. ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್, ರಿಟೇಲ್ ಮಾರಾಟ ಮಳಿಗೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್, ಪಬ್‌ ಗಳಿಗೆ, ಫೈವ್‌ ಸ್ಟಾರ್ ಹೋಟೆಲ್‌ ನಲ್ಲೂ‌ ಮದ್ಯ ಮಾರಾಟ ನಿಷೇಧಕ್ಕೆ ಸೂಚನೆ ನೀಡಲಾಗಿದೆ. ನಿಯಮ‌ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ.


ಸೋಶಿಯಲ್ ಮೀಡಿಯಾಗಳ ಮೇಲೂ ನಿಗಾ:


ಇನ್ನೊಂದೆಡೆ ಚುನಾವಣೆ ಹತ್ರ ಬರ್ತಿದ್ದಂತೆ ಬಿಬಿಎಂಪಿ ಕಂಟ್ರೋಲ್ ರೂಂ ಮತ್ತಷ್ಟು ಹೈ ಅಲರ್ಟ್ ಆಗಿದೆ. ಸೋಶಿಯಲ್  ಮೀಡಿಯಾಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾ ಚುನಾವಣಾಧಿಕಾರಿಗಳ ಟೀಂ, ವಿವಾದಾತ್ಮಕ ಹಾಗೂ ಅಪಪ್ರಚಾರಗಳ ಪೋಸ್ಟರ್ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.


ಇದನ್ನೂ ಓದಿ: Summer Health Tips: ಬೇಸಿಗೆ ಕಾಲದಲ್ಲಿ ಮ್ಯಾಂಗೋ ಶೇಕ್ ಕುಡಿಯುವುದರಿಂದಾಗುವ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?


ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಆರೇ ದಿನ ಬಾಕಿಯಿದೆ. ಬಿಬಿಎಂಪಿ ವ್ಯಾಪ್ತಿಯ, ಜಿಲ್ಲಾ ಚುನಾವಣಾಧಿಕಾರಿಗಳ ಟೀಂ, ಈ ಬಾರಿ ಸಾಮಾಜಿಕ ಜಾಲತಾಣ ಬಳಕೆದಾರರ ಮೇಲೆ ವಿಶೇಷ ನಿಗಾ ಇಟ್ಟಿದ್ದು, ಹೆಚ್ಚು ಬಳಕೆ ಆಗುವ ವಾಟ್ಸಾಪ್ ಗ್ರೂಪ್, ಫೇಸ್ ಬುಕ್, ಟ್ರೋಲ್ ಪೇಜ್‌ ಗಳ ಆಡ್ಮಿನ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅನುಮತಿಯಿಲ್ಲದೇ ಡಿಜಿಟಲ್ ಪ್ರಚಾರ, ಪಕ್ಷ-ಅಭ್ಯರ್ಥಿಗಳ ಅಪಪ್ರಚಾರ, ಧರ್ಮ ಹಾಗೂ ಗಲಭೆಗೆ ಪ್ರಚೋದನೆ ಕೊಡುವ ಪೋಸ್ಟ್ ಗಳನ್ನ ಹಾಕಿದರೆ ಕೂಡಲೇ ದೂರು ದಾಖಲಿಸಿಕೊಳ್ಳಲಾಗುತ್ತಿದೆ. ಇವರೆಗೆ 30 ಕ್ಕೂ ಹೆಚ್ಚು ದೂರುಗಳು, ಜಿಲ್ಲಾ ಚುನಾವಣಾಧಿಕಾರಿಗಳ ಕಂಟ್ರೋಲ್ ರೂಂಗೆ ಬಂದಿದ್ದು, ಈ ದೂರುಗಳನ್ನ ವಲಯವಾರು ಆರ್ ಓಗಳ ಗಮನಕ್ಕೆ ತಂದು, ಇತ್ಯರ್ಥ ಮಾಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.