Summer Health Tips: ಬೇಸಿಗೆ ಕಾಲದಲ್ಲಿ ಮ್ಯಾಂಗೋ ಶೇಕ್ ಕುಡಿಯುವುದರಿಂದಾಗುವ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?

Mango Shake: ಬೇಸಿಗೆ ಕಾಲ ನಡೆಯುತ್ತಿದೆ. ಈ ಋತುವಿನಲ್ಲಿ ಮಾರುಕಟ್ಟೆಗೆ ಹೇರಳ ಪ್ರಮಾಣದಲ್ಲಿ ಮಾವಿನ ಹಣ್ಣುಗಳ ಆಗಮನವಾಗುತ್ತದೆ. ಮತ್ತೊಂದೆಡೆ, ನೀವು ತೂಕವನ್ನು ಪಡೆದುಕೊಳ್ಳಲು ಬಯಸಿದರೆ, ನೀವು ಪ್ರತಿದಿನ ಮ್ಯಾಂಗೋ ಶೇಕ್ ಅನ್ನು ಕುಡಿಯಬಹುದು. ಮ್ಯಾಂಗೋ ಶೇಕ್ ಕುಡಿಯುವುದರಿಂದ ಆಗುವ ಲಾಭಗಳೇನು ತಿಳಿದುಕೊಳ್ಳೋನ ಬನ್ನಿ,  

Written by - Nitin Tabib | Last Updated : May 1, 2023, 11:21 PM IST
  • ಮಾವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
  • ಅಂತಹ ಪರಿಸ್ಥಿತಿಯಲ್ಲಿ, ನೀವು ಬೇಸಿಗೆಯಲ್ಲಿ ಪ್ರತಿದಿನ ಮಾವಿನ ಶೇಕ್ ಸೇವಿಸಿದರೆ,
  • ಕಣ್ಣುಗಳು ಆರೋಗ್ಯಕರವಾಗಿರುತ್ತವೆ. ಇದೆ ವೇಳೆ ಇದನ್ನು ಸೇವಿಸುವುದರಿಂದ,
  • ಕಣ್ಣಿನಲ್ಲಿ ಉಂಟಾಗುವ ದೋಷಗಳನ್ನು ಕಡಿಮೆ ಮಾಡಬಹುದು.
Summer Health Tips: ಬೇಸಿಗೆ ಕಾಲದಲ್ಲಿ ಮ್ಯಾಂಗೋ ಶೇಕ್ ಕುಡಿಯುವುದರಿಂದಾಗುವ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ? title=
ಮ್ಯಾಂಗೋ ಷೇಕ್ ಆರೋಗ್ಯ ಲಾಭಗಳು!

Mango Shake Health Benefits: ಬೇಸಿಗೆ ಕಾಲ ನಡೆಯುತ್ತಿದೆ. ಈ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಮಾವಿನ ಹಣ್ಣು ಬರುತ್ತವೆ. ಇದೇ ವೇಳೆ, ಹೆಚ್ಚಿನ ಜನರು ಮಾವಿನ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಮಾವಿನ ಹಣ್ಣನ್ನು ತಿನ್ನುವುದರ ಜೊತೆಗೆ ಜನರು ಬೇಸಿಗೆಯಲ್ಲಿ ಮ್ಯಾಂಗೋ ಶೇಕ್ ಮಾಡಿ ಕುಡಿಯುತ್ತಾರೆ. ಹೌದು, ಮ್ಯಾಂಗೋ ಶೇಕ್ ಕುಡಿಯಲು ತುಂಬಾ ರುಚಿಯಾಗಿರುತ್ತದೆ. ನೀವು ಇದನ್ನು ಪ್ರತಿದಿನ ಸೇವಿಸಿದರೆ ನಿಮ್ಮ ದೇಹವು ಹಲವಾರು ಪ್ರಯೋಜನಗಳನ್ನು ಪಡೆಯುತ್ತದೆ. ಏಕೆಂದರೆ ಇದರಲ್ಲಿ ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಸಿ ಯಂತಹ ಅಂಶಗಳಿವೆ. ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಇದು  ಬಲಪಡಿಸುವ ಕೆಲಸ ಮಾಡುತ್ತದೆ. ಮತ್ತೊಂದೆಡೆ, ನೀವು ತೂಕವನ್ನು ಪಡೆಯಲು ಬಯಸಿದರೆ, ನೀವು ಪ್ರತಿದಿನ ಮ್ಯಾಂಗೋ ಶೇಕ್ ಅನ್ನು ಕುಡಿಯಬಹುದು. ಮ್ಯಾಂಗೋ ಶೇಕ್ ಕುಡಿಯುವುದರಿಂದ ಆಗುವ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ,

ಮ್ಯಾಂಗೋ ಶೇಕ್ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು
ಜೀರ್ಣಾಂಗ ವ್ಯವಸ್ಥೆ ಬಲವಾಗುತ್ತದೆ

ಬೇಸಿಗೆಯಲ್ಲಿ ಮಾವಿನ ಹಣ್ಣಿನ ಶೇಕ್ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುತ್ತದೆ. ಇದರೊಂದಿಗೆ ನಿಮ್ಮ ಹೊಟ್ಟೆ ಕೂಡ ತಂಪಾಗುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ಫೈಬರ್ ಇದ್ದು, ಇದು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ತೂಕ ಹೆಚ್ಚಳಕ್ಕೆ ಸಹಕಾರಿ
ಅನೇಕ ಜನರು ತೆಳ್ಳಗೆ ಇರುವುದರಿಂದ ಸಾಕಷ್ಟು ಟ್ರೋಲ್ ಗೆ ಒಳಗಾಗುತ್ತಾರೆ, ಹೌದು, ಅವರು ಏನೇ ಸೇವಿಸಿದರೆ ಅದು ಅವರ ದೇಹಕ್ಕೆ ತಗಲುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಮಾವಿನ ಶೇಕ್ ಅನ್ನು ಸೇವಿಸಬಹುದು. ಮಾವು ನೈಸರ್ಗಿಕ ಗ್ಲೂಕೋಸ್ ಅನ್ನು ಹೊಂದಿರುತ್ತದೆ, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ, ಹೀಗಾಗಿ ನೀವು ತೂಕವನ್ನು ಪಡೆದುಕೊಳ್ಳಲು, ಹಾಲಿನೊಂದಿಗೆ ಮಾವಿನ ಹಣ್ಣಿನ ರಸವನ್ನು ಬೆರೆಸಿ ಕುಡಿಯಿರಿ.

ಇದನ್ನೂ ಓದಿ-Deadly Disease: ಈ ಒಂದೇ ಒಂದು ಟೆಸ್ಟ್ ಮಾಡಿಸಿ ಹಲವು ಮಾರಣಾಂತಿಕ ಕಾಯಿಲೆಗಳ ಅಪಾಯಗಳಿಂದ ಪಾರಾಗಿ!

ಇದು ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ
ಮಾವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬೇಸಿಗೆಯಲ್ಲಿ ಪ್ರತಿದಿನ ಮಾವಿನ ಶೇಕ್ ಸೇವಿಸಿದರೆ, ಕಣ್ಣುಗಳು ಆರೋಗ್ಯಕರವಾಗಿರುತ್ತವೆ. ಇದೆ ವೇಳೆ ಇದನ್ನು ಸೇವಿಸುವುದರಿಂದ, ಕಣ್ಣಿನಲ್ಲಿ ಉಂಟಾಗುವ ದೋಷಗಳನ್ನು ಕಡಿಮೆ ಮಾಡಬಹುದು. ಏಕೆಂದರೆ ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಇದು ದೃಷ್ಟಿಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ-Fat Reducing Tips: ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ, ಹೊಟ್ಟೆ ಬೊಜ್ಜು ಕರಗಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News