ಬೆಂಗಳೂರು: ಚುನಾವಣಾ ಪ್ರಚಾರದ ಜೊತೆಗೆ ಸಾರ್ವಜನಿಕರ ಆರೋಗ್ಯ ತಪಾಸಣೆ. ಚುನಾವಣಾ ಪ್ರಚಾರದ ಕಾರವಾನ್ ಗಳಲ್ಲಿ ಹೋಗಿ ರೋಗಿಗಳ ಪರೀಕ್ಷೆ. ಇಂತಹ ಒಂದು ವಿಶಿಷ್ಟ ಪ್ರಯೋಗಕ್ಕೆ ನಗರ ಸಾಕ್ಷಿಯಾಗುತ್ತಿದೆ.


COMMERCIAL BREAK
SCROLL TO CONTINUE READING

ಡಾ. ಎಚ್.ಎಸ್. ಶಶಿಧರ್ ಕುಮಾರ್ ಎಂದರೆ ಗೌರಿಬಿದನೂರು ಭಾಗದಲ್ಲಿ ಎಲ್ಲರಿಗೂ ಗೌರವ ಭಾವನೆ ಮೂಡಿಸುವ ವ್ಯಕ್ತಿತ್ವ. ಗೌರಿಬಿದನೂರಿನಲ್ಲಿ ಹಲವಾರು ಉಚಿತ ವೈದ್ಯಕೀಯ ಶಿಬಿರಗಳು ಮತ್ತು ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಇವರು ಮನೆಮಾತಾಗಿದ್ದಾರೆ.ಅವರು ವೈದ್ಯರೇ ಆಗಿರುವ ತಮ್ಮ  ಪತ್ನಿ ಕೆ.ಎಸ್. ರತ್ನರೊಂದಿಗೆ ಕಳೆದ ಮೂರು ದಶಕಗಳಲ್ಲಿ ಉಚಿತ 850+ ಶಿಬಿರಗಳಲ್ಲಿ 50,000+ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. 


ಈಗ ಈ ಜನ ಮೆಚ್ಚಿದ ವೈದ್ಯರು ತಮ್ಮ ಸಮಾಜ ಸೇವೆಯನ್ನು ಅರೋಗ್ಯ - ಔಷಧ ಸೇವೆಯನ್ನು ಮೀರಿ ಸಮಾಜದ ಎಲ್ಲಾ ಸ್ತರಗಳಿಗೆ ವಿಸ್ತರಿಸಲು ನಿರ್ಧರಿಸಿದ್ದಾರೆ. ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಅವರು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ಆಂತರಿಕ ವಲಯದ ಪ್ರಕಾರ, ಅವರು ಕಾಂಗ್ರೇಸ್ನಿಂದ ಐದು ಅವಧಿಗೆ  ಶಾಸಕರಾಗಿರುವ  ಎನ್.ಎಚ್. ಶಿವಶಂಕರ ರೆಡ್ಡಿ ಅವರನ್ನು  ಸೋಲಿಸಲು ಅತ್ಯಂತ ಸಮರ್ಥ  ಅಭ್ಯರ್ಥಿಯಾಗಿದ್ದಾರೆ.


ಇದನ್ನೂ ಓದಿ : ಈ ಅರಮನೆಯಲ್ಲಿದ್ದ ರಾಣಿಯರಿಗೆಂದೇ ಕಾಯುತ್ತಿದ್ದರು ಬ್ರಿಟಿಷರು; ಇವರನ್ನು ಆ ರೀತಿ ತೃಪ್ತಿಪಡಿಸಲು 20 ನಿಮಿಷ ಬೇಕಿತ್ತಂತೆ…!


ಉಚಿತ ವೈದ್ಯಕೀಯ ಶಿಬಿರ ಮತ್ತು ಚುನಾವಣಾ ವೆಚ್ಚಕ್ಕಾಗಿ ಕ್ರೌಡ್ ಫಂಡಿಂಗ್ 


ಡಾ. ಶಶಿಧರ್ ಕುಮಾರ್ ಅವರ ಹಿತೈಷಿಗಳು [ವೈದ್ಯರು, ರೋಗಿಗಳು, ಇಂಜಿನಿಯರ್ಗಳು ಮತ್ತು ಇತರರು] ಈಗಾಗಲೇ ಅವರ ಪರ ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರವನ್ನು ವಿಭಿನ್ನವಾಗಿ ಆಯೋಜಿಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹಿಸಲು ಅವರು ಕ್ರೌಡ್ಫಂಡಿಂಗ್ ಅನ್ನು ಪ್ರಾರಂಭಿಸಿದ್ದಾರೆ.


ಡಾ. ಶಶಿಧರ್ ಕುಮಾರ್ ಮತ್ತು ಡಾ. ಕೆ.ಎಸ್. ರತ್ನ ಅವರ ನೇತೃತ್ವದಲ್ಲಿ ವೈದ್ಯರ ತಂಡವು ಅಭಿಯಾನದ ಭಾಗವಾಗಿದೆ. ಈ ತಂಡದ  ವೈದ್ಯರು ಮತದಾರರೊಂದಿಗೆ ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ತ್ವರಿತ ವೈದ್ಯಕೀಯ ಮತ್ತು ಇತರ ಸಂಬಂಧಿತ ಸಹಾಯವನ್ನು ಒದಗಿಸುತ್ತಾರೆ.


ಈ ವೈದ್ಯ ದಂಪತಿ ಗೌರಿಬಿದನೂರು ಕ್ಷೇತ್ರದಲ್ಲಿ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಸುಮಾರು ಮೂರು ದಶಕಗಳಿಂದ ಹಣಕಾಸಿನ ಲಾಭದ ಅಪೇಕ್ಷೆ ಇಲ್ಲದೆ, ಸೇವಾ ಮನೋಭಾವದಿಂದ  ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಮಾನಸ ಆಸ್ಪತ್ರೆಗಳ ಹೆಸರಿನಲ್ಲಿ ಎರಡನೇ ಹಾಗು ಮೂರನೇ ಹಂತದ ಪಟ್ಟಣಗಳಲ್ಲಿ ಇವರು ಆಸ್ಪತ್ರೆಗಳ ಸರಣಿಯನ್ನು ಉತ್ತಮ ಸೇವೆ ಒದಗಿಸುವ ಏಕೈಕ ಗುರಿಯೊಂದಿಗೆ ನಡೆಸುತ್ತಿದ್ದಾರೆ.Bollywood Actress: ಮದುವೆ ಬಳಿಕ ಕುಟುಂಬಕ್ಕಾಗಿ ಸಿನಿರಂಗವನ್ನೇ ತ್ಯಜಿಸಿದ ನಟಿಯರು; ಈಗ ವಿದೇಶದಲ್ಲಿ ಸೆಟಲ್!


ಡಾ. ಎಚ್.ಎಸ್. ಶಶಿಧರ್ ಕುಮಾರ್ ಅವರು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಬೆಂಗಳೂರಿನಲ್ಲಿ ಮಾನಸ ಹೆಸರಿನಲ್ಲಿ 14 ಆಸ್ಪತ್ರೆಗಳ ಸರಣಿಯನ್ನು ನಡೆಸುತ್ತಿದ್ದಾರೆ. ಈ ವೈದ್ಯರ ಕುಟುಂಬವು ವೃದ್ಧಾಶ್ರಮವನ್ನು ಸಹ ನಡೆಸುತ್ತಿದೆ. ಅಲ್ಲಿ ವೃದ್ಧರಿಗೆ ಉಚಿತ ಸೇವೆಗಳನ್ನು ನೀಡಲಾಗುತ್ತಿದೆ.  ಡಾ. ಎಚ್.ಎಸ್ ಶಶಿಧರ್ ಕುಮಾರ್ ಅವರ ಸಮುದಾಯ ಸೇವೆಯನ್ನು ಗುರುತಿಸಿ ಹತ್ತಾರು ಪ್ರಶಸ್ತಿಗಳು - ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಈ ಪ್ರಶಸ್ತಿಗಳ ಜೊತೆಗೆ 2018 ರಲ್ಲಿ ಡಾ. ಬಿ.ಸಿ. ರಾಯ್ ಪ್ರಶಸ್ತಿಯನ್ನು ಕೂಡಾ ಇವರ ಅನುಪಮ ಸೇವೆಯನ್ನು ಗುರುತಿಸಿ ನೀಡಿ ಗೌರವಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.