ಬೆಂಗಳೂರು: ಬಿಜೆಪಿ ಅವರ ಭ್ರಷ್ಟಾಚಾರದ ಲೂಟಿ ಸುಮಾರು 150,000 ಲಕ್ಷ ಕೋಟಿ ಆಗಿದೆ. ಪ್ರತಿಯೊಂದರಲ್ಲೂ 40%, 50%, 60% ಕಮಿಷನ್‌ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ. ಹಾಗಾಗಿ ಇದರಲ್ಲಿ ಶೇ. 50% ರಷ್ಟು ಇಳಿಸಿದರೂ ನಮ್ಮ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು


ರಾಜ್ಯಕ್ಕೆ ಬರುವ ಆದಾಯವನ್ನು ಹೆಚ್ಚಳ ಮಾಡಿಕೊಂಡು, ಅದನ್ನು ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸರ್ಕಾರದ ಖರ್ಚು ವೆಚ್ಚಗಳನ್ನು ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಗ್ಯಾರಂಟಿ ಅನ್ನು ಅನುಷ್ಠಾನ ಮಾಡುತ್ತೇವೆ.ಈ ರಾಜ್ಯದಲ್ಲಿ ಭ್ರಷ್ಟಾಚಾರ  ಎಷ್ಟರವರೆಗೆ ಮೀತಿಮೀರಿದೆ ಅಂದರೆ ದೇಶದ ಮತ್ತು ರಾಜ್ಯದ ಆಸ್ತಿ, ಸಂಪತ್ತುಗಳನ್ನು ಮನಸೋ ಇಚ್ಛೇ, ಕೆಲವೇ ಕೆಲವು ವ್ಯಕ್ತಿಗಳ ಜೇಬಿಗೆ ಹೋಗುತ್ತ ಇದೆ. ಸರ್ಕಾರದ ಹಣ ಅದು ಜನರ ಹಣ,ಅದನ್ನು  ದಾರಿತಪ್ಪಿಸಿ,  ಅದನ್ನು ಖಾಸಗಿಯಾಗಿ ಕೆಲವು ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿ ಮುಖಂಡರಿಗೆ ಮತ್ತು ಬೆಂಬಲಿರಿಗೆ ಹಣ ಸೇರುವ ರೀತಿಯಲ್ಲಿ ಆಗುತ್ತ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 


ಕೆಎಸ್.ಡಿ.ಎಲ್ ನೇಮಕಾತಿಯಲ್ಲಿ 5 ಕೋಟಿ ರಿಂದ 15 ಕೋಟಿ, ಇಂಜಿನಿಯರ್‌ ನೇಮಕಾತಿಯಲ್ಲಿ 1 ಕೋಟಿಯಿಂದ 5 ಕೋಟಿಯವರೆಗೆ, ಸಬ್‌ ರಿಜಿಸ್ಟ್ರಾರ್‌ 50 ಲಕ್ಷದಿಂದ 5 ಕೋಟಿ, ಬೆಸ್ಕಾಂ 1 ಕೋಟಿ, ಪಿಎಸೈ 80 ಲಕ್ಷ, ಕೆಪಿಎಸ್ಸಿ ಅಧ್ಯಕ್ಷ 5 ಕೋಟಿಯಿಂದ 15 ಕೋಟಿ, ಡಿಸಿ ಮತ್ತು ಎಸ್ಪಿ 5 ಕೋಟಿಯಿಂದ 15 ಕೋಟಿ, ಉಪ ಕುಲಪತಿ 5 ಕೋಟಿಯಿಂದ 10 ಕೋಟಿ ಈ ರೀತಿಯ ಹಗರಣದ ಮೂಲಕ ಹೆಚ್ಚು ಹಣ ಲೂಟಿ ಮಾಡಿದೆ. ಮಠದ ಸ್ವಾಮೀಜಿಯೋರ್ವರು ಹೇಳಿದ್ರು, ನಮ್ಮ ಅನುದಾನಕ್ಕೆ ದುಡ್ಡು ಕೊಡಬೇಕು, ಪೊಲೀಸ್‌ ಠಾಣಾಧಿಕಾರಿಯೊರ್ವ ಮೃತಪಟ್ಟಗ ರಾಜ್ಯದ ಸಚಿವರೊಬ್ಬರು ಹೇಳಿದ್ರು ಅವನು ಹಣಕೊಟ್ಟು ಬಂದಿದ್ದಾನೆ ಅಂತ. ಮಂತ್ರಿಗಳೆ ಸ್ವತಃ ಬಿಜೆಪಿ ಶಾಸಕರೇ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.  ಗುತ್ತಿಗೆದಾರರ ಸಂಘದ ಪತ್ರ, ಆತ್ಮಹತ್ಯೆ ಮಾಡಿಕೊಂಡಿರುವವರು ಆರೋಪ, ಸಾರ್ವಜನಿಕವಾಗಿಯೂ ಇಂದು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಠಾಚಾರ, ಕಮಿಷನ್‌ ಬಗ್ಗೆ ಮಾತನಾಡುವಂತಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ರಾಯಚೂರಲ್ಲಿ ಬೃಹತ್ ರೋಡ್ ಶೋ ಮೂಲಕ ಜೆ.ಪಿ.ನಡ್ಡಾ ಮತಬೇಟೆ


ಈ ಸರ್ಕಾರದಲ್ಲಿ ಗುತ್ತಿಗೆದಾರರು ಬೀದಿಪಾಲಾಗಿದ್ದಾರೆ. ಈ ಪರಿಸ್ಥಿತಿ ರಾಜ್ಯದಲ್ಲಿ ಎಂದಿಗೂ ಇರಲ್ಲಿಲ್ಲ. ಇಂತಹ ಪರಿಸ್ಥಿತಿ ರಾಜ್ಯ ಹೊರಬರಬೇಕಾಗುತ್ತದೆ. ನಾವು ಈ ರೀಪೋಟರ್ಟ್‌ ಕಾರ್ಡನ್ನು ಸ್ಪಷ್ಟ ಮಾಹಿತಿಯ ಆಧಾರದಲ್ಲಿ ನಾವು ಹೇಳಿದ್ದೇವೆ. ಇದೇನು ಕಪೋಲಕಲ್ಪಿತ ಸುದ್ದಿ ಅಲ್ಲ. ಮಂತ್ರಿ ಆಗಬೇಕಾದರೂ ದುಡ್ಡು ಕೊಡಬೇಕು. ಇಡೀ ರಾಜ್ಯವನ್ನೇ ಮಾರಾಟಕ್ಕೆ ಇಟ್ಟು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.


ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕೆಂದು ಜನ ಬಯಸುತ್ತಾ ಇದ್ದಾರೆ. ಬೆಂಗಳೂರಿನ 28 ಮತಕ್ಷೇತ್ರದಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ವಾತವರಣವಿದೆ. ಜನರೇ ಬದಲಾವಣೆ ಬಯಸಿ ಕಾಂಗ್ರೆಸ್‌ ಪರ ನಿಂತಿದ್ದಾರೆ. ನಗರದ ಬಹುತೇಕ ಎಲ್ಲ ಮತಕ್ಷೇತ್ರದಲ್ಲೂ ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಪಾಬ್ರಲ್ಯವಿರುವ ಕ್ಷೇತ್ರದಲ್ಲೂ ಕಾಂಗ್ರೆಸ್‌ ಪರ ಸಾರ್ವಜನಿಕರ ಕೂಗು ಕೇಳಿ ಬರುತ್ತಿದೆ. ಹಾಗಾಗಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಇಂದು ಪತ್ರಿಕೆಯಲ್ಲಿ ಬಿಜೆಪಿಯ ರೀಪೋರ್ಟ್‌ ಕಾರ್ಡ್‌ ಅನ್ನು ಪ್ರಕಟಿಸಿದೆ. ಜಾಹೀರಾತು ಮೂಲಕ ಸ್ಪಷ್ಟವಾಗಿ ಇಂದು ಕಾಂಗ್ರೆಸ್‌ ಪಕ್ಷ ರಾಜ್ಯದ ಜನತೆಗೆ ತಿಳಿಸಿದೆ ಎಂದರು.


ಮುಂದೆ ರಾಜ್ಯದಲ್ಲಿ ರಾಜ್ಯದ ಸುಭದ್ರ ಮತ್ತು ನಾಡಿನ ಪ್ರಗತಿಗೆ ಕಾಂಗ್ರೆಸ್‌ ಪಕ್ಷ ಕಟ್ಟಿಬದ್ಧವಾಗಿದ್ದು, ಹಾಗಾಗಿ ಖಂಡಿತವಾಗಿಯೂ ಅಧಿಕಾರಕ್ಕೆ ಬಂದಲ್ಲಿ, ಭ್ರಷ್ಟಾಚಾರ ರಹಿತ,  ಜನಪರ, ಸುಭದ್ರ,ಜನರ ಸರ್ವತೋಮುಖ ಅಭುದ್ಯಯಕ್ಕೆ ಕಾಂಗ್ರೆಸ್‌ ಪಕ್ಷ ಶ್ರಮ ವಹಿಸಲಿದೆ.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಮಾಧ್ಯಮ ಕ್ಷೇತ್ರದಲ್ಲೂ ಭ್ರಷ್ಟಾಚಾರವಿದೆ ಅದು ಒಂದು ಕ್ಯಾನ್ಸರ್‌ ವಿದ್ದಂತೆ. ಅದನ್ನು ನಿವಾರಣೆ ಮಾಡುಬೇಕಲ್ವ. ಅದಕ್ಕಾಗಿ ಯುಪಿಎ ಸರ್ಕಾರವಿದ್ದಾಗ ಮಾಹಿತಿ ಹಕ್ಕು ಕಾಯ್ದೆಯನ್ನು ತಂದಿದ್ದೇವೆ, ಅದಕ್ಕಾಗಿಯೇ ನಾವು ಆಧಾರ್‌ ತಂದಿದ್ದೇವೆ, ಕಾಂಗ್ರೆಸ್‌ ನವರಿಗೆ ಯಾವುದೇ ಭಯಭೀತಿಯಿಲ್ಲ.  ವ್ಯವಸ್ಥೆಯನ್ನು ಸರಿಪಡಿಸಿವುದು ನಮ್ಮ ಬಧ್ಧತೆ. ಆದರೆ ಇಂದು ಬಿಜೆಪಿಯಲ್ಲಿ ಜನರ ಹಣವನ್ನು ಲೂಟಿ ಮಾಡಿ,  ಇಂದು ನಗ್ನರಾಗಿದ್ದಾರೆ. ಒಂದು ಸರ್ಕಾರದಲ್ಲಿ 40% ಕಮಿಷನ್‌ ಹೆಸರು ಇದ್ದ ಮೇಲೆ ಎಲ್ಲರೂ ಈ ಸರ್ಕಾರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಅರ್ಥ ಎಂದು ಅವರು ಟೀಕಾಪ್ರಹಾರ ನಡೆಸಿದರು.


ಇದನ್ನೂ ಓದಿ: ನೀಟ್‌ ಪರೀಕ್ಷೆ ಹಿನ್ನೆಲೆ ಪ್ರಧಾನಿ ಮೋದಿ ರೋಡ್‌ ಶೋ ರೂಟ್‌ ಚೇಂಜ್‌


‘ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್ಗೆ ಅನುಕೂಲವಾಗುತ್ತೆ. ಹಾಗಾಗಿ, ಇಲ್ಲಿಯೇ ಪ್ರಧಾನಿ ಮನೆ ಮಾಡುವುದು ಉತ್ತಮ’ ಪ್ರಧಾನಿ ರಾಜ್ಯಕ್ಕೆ ಬಂದಷ್ಟೂ ಬಿಜೆಪಿಗೆ ಲಾಭವಾಗುತ್ತಿಲ್ಲ. ಬದಲಿಗೆ ಡ್ಯಾಮೇಜ್ ಆಗುತ್ತಿದೆ. ಪ್ರತಿಯಾಗಿ ನಮಗೆ ಪ್ಲಸ್ ಆಗುತ್ತಿದೆ. ಯಾಕೆಂದರೆ, ಅವರು ಹೀಗೆ ಬೀದಿ ಬೀದಿ ಸುತ್ತುತ್ತಿರುವ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವ ಮೂಡುತ್ತಿದೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗಡಿ, ಕೆಲವು ರಾಜ್ಯಗಳಲ್ಲಿನ ಸಂಘರ್ಷ ಸೇರಿದಂತೆ ಅನೇಕ ವಿಚಾರಗಳಿವೆ. ಅವೆಲ್ಲವುಗಳನ್ನು ಬಿಟ್ಟು ಹೀಗೆ ಬೀದಿ ಬೀದಿ ಅಲೆಯುವ ಮೂಲಕ ಸ್ವತಃ ಮೋದಿ ಅವರು ಕೂಡ ಪ್ರಧಾನಿ ಹುದ್ದೆಗೆ ಅಪಮಾನ ಮಾಡುತ್ತಿದ್ದಾರೆ. ಜನ ಕೂಡ ಕೇಳ್ತಾ ಇದ್ದಾರೆ ಯಾಕೆ ಪದೇ ಬರುತ್ತಿದ್ದಾರೆ. ಇವರು ಮತ್ತಷ್ಟು ಬಂದಷು ಕಾಂಗ್ರೆಸ್‌ ಗೆ ಇನ್ನೂ ಬಲ ಬರುತ್ತಿದೆ. ಬಿಜೆಪಿಗೆ ಹತಾಶೆ ಬಂದಿದೆ ಎಂದು ಕಿಡಿ ಕಾರಿದರು.


ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಅಡ್ಡಿಪಡಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಆ್ಯಂಬುಲೆನ್ಸ್ ಗಳನ್ನು ರೋಡ್ ಶೋ ಮಾರ್ಗದಲ್ಲಿ ಓಡಿಸುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಆರೋಪದ ಬಗ್ಗೆ ಉತ್ತರಿಸಿದ ಅವರು, ಬಹುಷಃ ಅವರು ಇದೆಲ್ಲವನ್ನು ಈ ಹಿಂದೆ ಮಾಡಿದ ಅನುಭವವಿರಬೇಕು. ಇದು ಬಿಜೆಪಿ ಮತ್ತು ಆರೆಸ್ಸೆಸ್‌ ಸ್ಟ್ರಾಟ್ರಜಿಯಿರಬೇಕು. ಇ ತರಹ ಮಾಡಿ ಅನುಭವವಿರಬೇಕು ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.