ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರ ಮುಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಕಟ್ಟಿ ಕುಳಿತಿರುವ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ವ್ಯಂಗ್ಯವಾಡಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಯಸ್ಸಿನಲ್ಲೂ, ಪಕ್ಷದಲ್ಲೂ, ರಾಜಕೀಯದಲ್ಲೂ ಅಮಿತ್ ಶಾಗಿಂತಲೂ ಹಿರಿಯರಾಗಿರುವ ಬಿ.ಎಸ್.ಯಡಿಯೂರಪ್ಪನವರಿಗೆ ಹೆಡ್ ಮಾಸ್ಟರ್ ಎದುರು ಕೈಕಟ್ಟಿ ನಿಲ್ಲುವ ಮಗುವಿನಂತಹ ಪರಿಸ್ಥಿತಿ ಬರಬಾರದಿತ್ತು. BSY ಹಾಗೂ ಅಮಿತ್ ಶಾರ ದೇಹಭಾಷೆಯೇ BSY ಅವರ ದುಃಸ್ಥಿತಿಯ ಕತೆ ಹೇಳುತ್ತಿದೆ. ಮಗನಿಗೆ "ಜಾಗ" ಮಾಡಿಕೊಡುವ ಒಂದೇ ಉದ್ದೇಶಕ್ಕೆ ಸ್ವಾಭಿಮಾನ ಅಡ ಇಡಬಾರದಿತ್ತು’ ಎಂದು ಟೀಕಿಸಿದೆ.


ಇದನ್ನೂ ಓದಿ: "ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ": ಡಿ.ಕೆ. ಶಿವಕುಮಾರ್


ಮುಸ್ಲಿಂ ಮೀಸಲಾತಿ ರದ್ದು ಕ್ರಮ ಸಮರ್ಥಿಸಿಕೊಂಡ ಅಮಿತ್ ಶಾ 


ಕ್ಷೀರ ಭಾಗ್ಯಕ್ಕೂ ಕಲ್ಲು!


‘ಬಿಜೆಪಿಯ ಹತಭಾಗ್ಯದ ಸರ್ಕಾರ ಕ್ಷೀರ ಭಾಗ್ಯಕ್ಕೂ ಕಲ್ಲು ಹಾಕಿದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಕಾಂಗ್ರೆಸ್ ಜಾರಿಗೊಳಿಸಿದ್ದ ಕ್ಷೀರಭಾಗ್ಯ ಯೋಜನೆಯನ್ನೂ ಹಳ್ಳ ಹಿಡಿಸಿದೆ ಬಿಜೆಪಿ ಸರ್ಕಾರ. ಕಳೆದ ಜನವರಿಯಿಂದ ಮಕ್ಕಳಿಗೆ ಹಾಲು ಪೂರೈಕೆ ಸ್ಥಗಿತವಾಗಿದೆ. ಸಿಎಂ ಬೊಮ್ಮಾಯಿಯವರೇ, ಮಕ್ಕಳಿಗೆ ಹಾಲು ನೀಡದಷ್ಟು ದಿವಾಳಿ ಆಗಿಯೇ ನಿಮ್ಮ ಸರ್ಕಾರ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.