ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರೆಕೋಟೆಯಾಗಿತ್ತು.ಸ್ಥಳೀಯ ಸಂಸ್ಥೆಯಿಂದ ಹಿಡಿದು ವಿಧಾನಸಭೆ, ಲೋಕಸಭೆವರೆಗೂ ಬಿಜೆಪಿ ಜನಪ್ರತಿನಿಧಿಗಳು ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ಶೂನ್ಯ ಸಾಧನೆ ಮೂಲಕ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.


COMMERCIAL BREAK
SCROLL TO CONTINUE READING

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ಐದಕ್ಕೆ ಐದು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಗೆ ಮರುಜೀವ ತಂದುಕೊಟ್ಟಿದ್ದಾರೆ.ಈ ಮೂಲಕ ಶಾಸಕರು, ಜಿಲ್ಲೆಯ ಜನತೆ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದಾರೆ. 


ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಪೋಸ್ಟರ್ ಗೆ ಹಾಲಿನ ಅಭಿಷೇಕ


ಚಿಕ್ಕಮಗಳೂರು ಜಿಲ್ಲೆಗೆ ಧಕ್ಕೀತೆ ಮಂತ್ರಿ ಭಾಗ್ಯ


ಚಿಕ್ಕಮಗಳೂರು ಜಿಲ್ಲೆ ರಾಜಕೀಯಕ್ಕೆ ಹಲವು ನಾಯಕರನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ಕಾಲದಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಎರಡರಿಂದ ಮೂವರು ಮಂತ್ರಿಗಳಾಗಿದ್ರು. ಇದೀಗ ಮತ್ತೆ ಅದೇ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯಿಂದ 5 ವಿಧಾನಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.ಇದು ಸಹಜವಾಗಿ ಜಿಲ್ಲೆಗೆ ಮಂತ್ರಿಗಿರಿ ಭಾಗ್ಯ ದೊರೆಯುಲಿದೆ ಎನ್ನುವ ಚರ್ಚೆ ಆರಂಭವಾಗಿದೆ.


ತರೀಕೆರೆ, ಶೃಂಗೇರಿಯಿಂದ ಜೆ ಹೆಚ್ ಶ್ರೀನಿವಾಸ್, ಟಿ ಡಿ ರಾಜೇಗೌಡ ಸತತವಾಗಿ ಎರಡನೇ ಭಾರೀಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ, ಇನ್ನು ಉಳಿದ ಮೂರು ಕ್ಷೇತ್ರದಿಂದ ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಜಿ ಹೆಚ್ ಶ್ರೀನಿವಾಸ್  ಅಥವಾ ಟಿ ಡಿ ರಾಜೇಗೌಡರಿಗೆ ಮಂತ್ರಿಗಿರಿ ಸಿಗಲಿದೆ ಎನ್ನುವ ರಾಜಕೀಯ ಚರ್ಚೆ ಆರಂಭವಾಗಿದೆ. 


ಇದನ್ನೂ ಓದಿ:200ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಮುಂದಾದ ಬಿಬಿಎಂಪಿ


ಮಂತ್ರಿಗಿರಿ ಚರ್ಚೆ ಜೋರು 


ಚಿಕ್ಕಮಗಳೂರು ಜಿಲ್ಲೆ ಹಲವು ಸಮಸ್ಯೆಗಳನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗಗಳು ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಲವು ಸಮಸ್ಯೆಗಳಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಕಳೆದ ಭಾರೀ ಬಿಜೆಪಿ ಸರ್ಕಾರದಲ್ಲಿ ಇಬ್ಬರ ಹೆಸರು ಪ್ರಬಲವಾಗಿ ಕೇಳಿಬಂದರೂ ಹೊಂದಾಣಿಕೆಯ ಕೊರತೆಯಿಂದ ಮಂತ್ರಿಗಿರಿಯ ಸ್ಥಾನ ಕೈತಪ್ಪಿ ಹೋಗುತಿತ್ತು.


ಆದ್ರೆ ಈ ಭಾರಿ ನೂತನವಾಗಿ ಆಯ್ಕೆ ಆಗಿರುವ ಐವರು ಶಾಸಕರು ಒಗ್ಗೂಡಿ ಮುಂತ್ರಿ ಸ್ಥಾನಕ್ಕೆ ಒತ್ತಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಮಂತ್ರಿ ಸ್ಥಾನದಿಂದ ದೊರಉಳಿದಿದೆ. ಉಸ್ತುವಾರಿ ಸಚಿವರು ಕೂಡ ಪರಜಿಲ್ಲೆಗಳಿಂದ ಬಂದ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.


ಇದನ್ನೂ ಓದಿ:ಪೆಂಡಿಂಗ್​​ ಫೈನ್​​ ವಸೂಲಿಗೆ ಬೆಂಗಳೂರು ಸಂಚಾರಿ ಪೊಲೀಸ್‌ ಮಾಸ್ಟರ್​ ಪ್ಲಾನ್​..! ಏನದು ಗೊತ್ತೆ..?


ಅದರಲ್ಲೂ  ಮೈತ್ರಿ ಸರ್ಕಾರ, ಬಿಜೆಪಿ ನೇತೃತ್ವದಲ್ಲಿ ಬಂದ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ಶಾಸಕರು ವಂಚಿತರಾಗಿದ್ದರು. ಆದ್ರೆ ಈ ಭಾರೀ ಚಿಕ್ಕಮಗಳೂರು ಜಿಲ್ಲೆಯು ಐವರು ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಕಾರಣಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿದ್ಯ ದೊರೆಯುವುದೇ ಎನ್ನುವುದನ್ನು ಕಾದುನೋಡಬೇಕಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.