ಪೆಂಡಿಂಗ್​​ ಫೈನ್​​ ವಸೂಲಿಗೆ ಬೆಂಗಳೂರು ಸಂಚಾರಿ ಪೊಲೀಸ್‌ ಮಾಸ್ಟರ್​ ಪ್ಲಾನ್​..! ಏನದು ಗೊತ್ತೆ..?

ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಾಹನಗಳ ದಂಡವಸೂಲಿ ಮಾಡುವುದು ಬೆಂಗಳೂರು ಸಂಚಾರಿ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವ ವಾಹನಗಳ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಟ್ರಾಫಿಕ್‌ ಪೋಲಿಸ್‌ ಪಡೆ, ಟೋಲ್​ಗೇಟ್​​ನಲ್ಲಿಯೇ ಕೇಸ್​ ಕ್ಲಿಯರ್​ ಮಾಡಲು ಭರ್ಜರಿ ಪ್ಲಾನ್​ ರೂಪಿಸಿದೆ.

Written by - Bhavya Sunil Bangera | Edited by - Krishna N K | Last Updated : May 17, 2023, 06:25 PM IST
  • ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಾಹನಗಳ ದಂಡವಸೂಲಿ ಮಾಡುವುದು ಬೆಂಗಳೂರು ಸಂಚಾರಿ ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿದೆ.
  • ಬೇರೆ ಜಿಲ್ಲೆಯಿಂದ ಬರುವ ವಾಹನಗಳ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಟ್ರಾಫಿಕ್‌ ಪೋಲಿಸ್‌ ಪಡೆ ಮುಂದಾಗಿದೆ.
  • ಟೋಲ್​ಗೇಟ್​​ನಲ್ಲಿಯೇ ಕೇಸ್​ ಕ್ಲಿಯರ್​ ಮಾಡಲು ಭರ್ಜರಿ ಪ್ಲಾನ್​ ಮಾಡಿದೆ.
ಪೆಂಡಿಂಗ್​​ ಫೈನ್​​ ವಸೂಲಿಗೆ ಬೆಂಗಳೂರು ಸಂಚಾರಿ ಪೊಲೀಸ್‌ ಮಾಸ್ಟರ್​ ಪ್ಲಾನ್​..! ಏನದು ಗೊತ್ತೆ..? title=

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್​ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಡಬ್ಬಲ್​​ ಆಗ್ತಿದೆ. ಈ ಕೇಸ್​​​​​​ಗಳ ದಂಡ ವಸೂಲಿ ಮಾಡುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. 50 ಪರ್ಸೆಂಟ್​​ ಡಿಸ್ಕೌಂಟ ನೀಡಿದ್ರು, ಬರೊಬ್ಬರಿ 2 ಕೋಟಿ ಕೇಸ್​​ಗಳು ಇನ್ನೂ ಬಾಕಿಯಿದೆ. ರಿಯಾಯಿತಿ ವೇಳೆ 52 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. ಬಾಕಿ ಉಳಿದ ಕೇಸ್​​​ಗಳ ಕ್ಲಿಯರ್​ ಮಾಡುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಪೆಂಡಿಂಗ್​​ ಫೈನ್​​ ವಸೂಲಿಗೆ ಬೆಂಗಳೂರು ಸಂಚಾರಿ ಪೊಲೀಸರು ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ. 

ಬೆಂಗಳೂರಿನ ಸಂಚಾರಿ ಪೊಲೀಸರಿಗೆ ಹೊರ ಜಿಲ್ಲೆಯ ವಾಹನಗಳೇ ಟೆನ್ಷನ್​ ನೀಡ್ತಿದೆ. 2 ಕೋಟಿ ಕೇಸ್​ಗಳ ಫೈಕಿ ಹೊರ ಜಿಲ್ಲೆಯ ನೋಂದಣಿ ವಾಹನಗಳದ್ದೇ ಸಿಂಹಪಾಲಿದೆ. ಡಿಸ್ಕೌಂಟ್ ನೀಡಿದ ವೇಳೆ ಬೆಂಗಳೂರಿನ 52 ಲಕ್ಷ ಕೇಸ್​ಗಳು ಕ್ಲಿಯರ್​ ಆಗಿವೆ. ಆದ್ರೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಾಹನಗಳ ದಂಡವಸೂಲಿ ಸಂಚಾರಿ ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ ಬೇರೆ ಜಿಲ್ಲೆಯಿಂದ ಬರುವ ವಾಹನಗಳ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಟೋಲ್​ಗೇಟ್​​ನಲ್ಲಿಯೇ ಕೇಸ್​ ಕ್ಲಿಯರ್​ ಮಾಡಲು ಭರ್ಜರಿ ಪ್ಲಾನ್​ ಮಾಡಿದೆ. 

ಇದನ್ನೂ ಓದಿ: ʼಸುಧಾಕರ್‌ ಸೋತು ಭ್ರಮನಿರಸನರಾಗಿʼ ಏನೇನೋ ಹೇಳ್ತಾರೆ : ಸಿದ್ದು ಪರ ಎಂಟಿಬಿ ಬ್ಯಾಟ್‌

ಬೇರೆ ರಾಜ್ಯಗಳಿಂದ ಬರುವ ವಾಹನಗಳ ಮೇಲೆ ನಿಗಾ ಇಡಲು ಸಜ್ಜಾದ ಬೆಂಗಳೂರು ಟ್ರಾಫಿಕ್ ಪೊಲೀಸರು, ಟೋಲ್ ಗಳಲ್ಲಿ ANPR ಕ್ಯಾಮರಾ ಅಳವಡಿಕೆ ಪ್ಲಾನ್ ಮಾಡಿದೆ. ದಂಡ ಬಾಕಿಯಿರುವ ವಾಹನಗಳು ಈ  ಕ್ಯಾಮೆರಾ ಪತ್ತೆ ಮಾಡುತ್ತೆ. ವಾಹನದ ವಿವರ ತಕ್ಷಣ ಹತ್ತಿರದ ಪೊಲೀಸರಿಗೆ ವರ್ಗಾಯಿಸುತ್ತೆ, ಅಲ್ಲಿರುವ ಸಂಚಾರಿ ಪೊಲೀಸರು ಆ ವಾಹನ ತಡೆದು ದಂಡ ವಸೂಲಿ ಮಾಡುತ್ತಾರೆ. 

ಎಎನ್‌ಪಿಆರ್‌ ಕ್ಯಾಮೆರಾ ವಿಶೇಷತೆ..? : ಇನ್ನೂ ಈ ಎಎನ್‌ಪಿಆರ್‌ ಕ್ಯಾಮೆರಾ ವಿಶೇಷತೆ ಏನು ಅಂದ್ರೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿಯಿರುವ ವಾಹನಗಳು ಎಎನ್‌ಪಿಆರ್‌ ಕ್ಯಾಮೆರಾ ಪತ್ತೆ ಮಾಡುತ್ತೆ. ಕ್ಯಾಮಾರ ಅಳವಡಿಕೆಯಾಗಿರುವ ಕಡೆ ವಾಹನ ಹಾದು ಹೋದಾಗ ಕ್ಯಾಮೆರಾ ಸ್ವಯಂಚಾಲಿತವಾಗಿ ಅಲರ್ಟ್​​ ಆಗುತ್ತೆ. ಸಾಫ್ಟ್‌ವೇರ್‌ ಬಳಸಿಕೊಂಡು ವಾಹನ ಹಾಗೂ ವಾಹನ ಸವಾರನ ಸಂಪೂರ್ಣ ವಿವರ ತಕ್ಷಣವೇ ಹತ್ತಿರದಲ್ಲಿರುವ ಪೊಲೀಸರಿಗೆ ವರ್ಗಾಯಿಸುತ್ತೆ. ಆಗ ಪೊಲೀಸರು ಕೂಡಲೇ ಆ ವಾಹನ ಸವಾರನನ್ನು ತಡೆದು ದಂಡ ವಸೂಲಿ ಮಾಡುತ್ತಾರೆ. ಎಎನ್‌ಪಿಆರ್‌ ಕ್ಯಾಮೆರಾ ಸವಾರ 25ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದರೂ ಆ ವ್ಯಕ್ತಿಯ ಸಂಪೂರ್ಣ ವಿವರ ತಕ್ಷಣದಲ್ಲೇ ಪತ್ತೆ ಹಚ್ಚುತ್ತೆ)

ಇದನ್ನೂ ಓದಿ: Karnataka CM Decision: ಸಿದ್ದರಾಮಯ್ಯ ಸಿಎಂ ಆಗೋದು ನನಗೆ ಒಪ್ಪಿಗೆ ಇಲ್ಲ- ಡಿಕೆಶಿ

ಇದರ ಜೊತೆಗೆ ಬಾಕಿ ಕೇಸ್​​ ಕ್ಲಿಯರ್ ಮಾಡಲು ಈಗಾಗಲೇ ಇನ್ಶೂರೆನ್ಸ್‌ ಕಂಪನಿ ಜೊತೆಗೂ ಸಂಚಾರ ವಿಭಾಗದ ಪೊಲೀಸರು ಸಭೆ ನಡೆಸಿ ಚರ್ಚಿಸಿದ್ದಾರೆ. ಅದರಂತೆ ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ವಸೂಲಿ ಮಾಡಲು ಚಿಂತನೆ ನಡೆಸಲಾಗಿದೆ. ಎನ್‌ಒಸಿ ಪಡೆಯದ ವಾಹನಗಳ ಇನ್ಶೂರೆನ್ಸ್‌ ನವೀಕರಣವಾಗದಂತೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಇದರ ಜೊತೆ ತಲೆನೋವಾದ ಹೊರಗಿನ ವಾಹನಗಳಿಗೂ ಮಾಸ್ಟರ್​ ಸ್ಟ್ರೋಕ್​ ನೀಡಲು ಸಂಚಾರ ಪೊಲೀಸರು ಸಜ್ಜಾಗಿದ್ದಾರೆ.  ಸದ್ಯ ಈ ಪ್ಲಾನ್ ಜಾರಿಗೆ ಬಂದ್ರೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News