ಬೆಂಗಳೂರು: ಮುಖ್ಯಮಂತ್ರಿ ಬೊಮ್ಮಾಯಿ ಅವರು ಹನಿನೀರಾವರಿ ಯೋಜನೆಯಲ್ಲಿ 1500 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಬೊಮ್ಮಾಯಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿಗ್ಗಾಂವ್ ಕ್ಷೇತ್ರದಲ್ಲಿ ಹಣ ಲೂಟಿ ಮಾಡಿದ್ದು, ಯಾವುದೇ ರೈತರು ಈ ಹನಿ ನೀರಾವರಿ ಯೋಜನೆ ಪಡೆದಿಲ್ಲ ಎಂದು ಹೇಳಿದ್ದಾರೆ. ಆಮೂಲಕ ಬೊಮ್ಮಾಯಿ ಅವರು 40% ಕಮಿಷನ್ ಏಜೆಂಟ್ ಆಗಿದ್ದಾರೆ. ಇದೆಲ್ಲವೂ ನಮ್ಮ ಆರೋಪವಲ್ಲ, ಬಿಜೆಪಿ ನಾಯಕರು ಕಾರ್ಯಕರ್ತರ ಆರೋಪವಾಗಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ದೂರಿದ್ದಾರೆ.


COMMERCIAL BREAK
SCROLL TO CONTINUE READING

ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.


ಜಮ್ಮು ಕಾಶ್ಮೀರ, ಗೋವಾ, ಮೇಘಾಲಯದ ರಾಜ್ಯಪಾಲರಾದ ಬಿಜೆಪಿ ನಾಯಕ ಸತ್ಯಪಾಲ್ ಸಿಂಗ್ ಅವರು ಪ್ರಧಾನಮಂತ್ರಿಗಳು ಭ್ರಷ್ಟಾಚಾರವನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕ ನೆಹರೂ ಓಲೇಕರ್ ಅವರು ಬೊಮ್ಮಾಯಿ ಅವರು 40% ಕಮಿಷನ್ ಏಜೆಂಟ್ ಎಂದು ಹೇಳಿದ್ದಾರೆ. ಈ ಎಲರು ಹೇಳಿಕೆಗಳ ವಿಡಿಯೋ ತುಣುಕು ಇಂದು ನಿಮ್ಮ ಮುಂದೆ ಪ್ರಸ್ತುತಪಡಿಸಿದ್ದೇವೆ.


Karnataka election 2023: ಮತ್ತೆ ಐವರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ


ಈ ವಿಚಾರದಲ್ಲಿ ನಾವು ಮೂರು ಪ್ರಶ್ನೆಗಳನ್ನು ಕೇಳಬಯಸುತ್ತೇವೆ.
1.    ಈ ಆರೋಪ ಕೇಳಿಬಂದ ನಂತರವೂ ಬೊಮ್ಮಾಯಿ ಅವರಾಗಲಿ, ಬಿಜೆಪಿ ಪಕ್, ಮೌನವಾಗಿರುವುದೇಕೆ? ಅವರ ಮೌನ ಸಮ್ಮತಿ ಎಂದು ಭಾವಿಸಬಹುದೇ? ಈ ಆರೋಪ ಸುಳ್ಳಾಗಿದ್ದರೆ ಆರೋಪ ಮಾಡಿರುವ ಬಿಜೆಪಿ ಶಾಸಕರ ವಿರುದ್ಧ ಮಾನನಷ್ಟ  ಮೊಕದ್ದಮೆ ಯಾಕಿಲ್ಲ? ಮಾನನಷ್ಟ ಮೊಕದ್ದಮೆ ಕೇಸು ದಾಖಲಿಸಿದರೆ, ಓಲೇಕರ್ ಅವರು ಈ ಆರೋಪದ ಸಾಕ್ಷಿ ಒದಗಿಸುತ್ತಾರೆ ಎಂಬ ಭಯವೇ? 
2.    ಇಡಿ, ಸಿಬಿಐ, ಆದಾಯ ತೆರಿಗೆ ಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ಯಾಕೆ ಆರಂಭಿಸಿಲ್ಲ? ಬೊಮ್ಮಾಯಿ ಅವರನ್ನು ಕರೆದು ವಿಚಾರಣೆ ನಡೆಸುತ್ತಿಲ್ಲ ಯಾಕೆ? ಬಿಜೆಪಿ ಶಾಸಕರೇ ಕನ್ನಡಿಗರ ಹಣ ಲೂಟಿ ಆಗಿದೆ ಎಂದು ಹೇಳಿರುವಾಗ ತನಿಖಾ ಸಂಸ್ಥೆಗಳು ಈ ವಿಚಾರದಲ್ಲಿ ಕಣ್ಣು ತೆರೆದು ಕೂಡಲೇ ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಬೇಕು.
3.    ರಾಜ್ಯ ಚುನಾವಣೆ ಆಯೋಗ ಈ ವಿಚಾರವನ್ನು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ? ಇದು ರಾಜ್ಯದ ಚುನಾವಣೆ ಪ್ರಕ್ರಿಯೆ ಮೇಲೆ ಪರರಿಣಾಮ ಬೀರಲಿದೆ. ಹೀಗಾಗಿ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈ ವಿಚಾರದಲ್ಲಿ ಆಯೋಗ ಕಾರ್ಯಪ್ರವೃತ್ತವಾಗಿ ಪೊಲೀಸರಿಂದ ತನಿಖೆ ಆರಂಭಿಸುವಂತೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ. 


ಸಿಆರ್ ಪಿಎಫ್ ನೇಮಕಾತಿ ಪರೀಕ್ಷೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನಾವು ಪ್ರಶ್ನೆ ಮಾಡಿದ್ದರೂ ಸರ್ಕಾರ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕನ್ನಡದ ಅಭ್ಯರ್ಥಿಗೆ ಇಂಗ್ಲೀಷ್ ಅಥವಾ ಹಿಂದಿ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಆತನ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ನಮ್ಮ ಒಥ್ತಾಯದ ಮೇರೆಗೆ ಕೇಂಗ್ರ ಗೃಹ ಸಚಿವಾಲಯ ತನ್ನ ಆದೇಶ ಹಿಂಪಡೆದಿದೆ. ಸಿಆರ್ ಪಿಎಫ್ ಪರೀಕ್ಷೆ ಕನ್ನಡದಲ್ಲೂ ನಡೆಯಬೇಕು ಎಂಬುದು ನಮ್ಮ ಒತ್ತಾಯ. ಸಿಎಪಿಎ ಪರೀಕ್ಷೆ ಹೇಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶವಿದೆಯೋ ಅದೇ ರೀತಿ ಸಿಆರ್ ಪಿಎಫ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು’ ಎಂದು ತಿಳಿಸಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.