ಹೆಚ್ಚಾಯ್ತು ಚುನಾವಣಾ ರಂಗು... ಪ್ರಚಾರ ಆರಂಭಿಸುತ್ತಿದ್ದಾರೆ ಹುರಿಯಾಳುಗಳು
Karnataka Assembly Election: ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವನಾರಾಯಣ ಅವರ ಅಕಾಲಿಕ ಮರಣದಿಂದಾಗಿ ಪುತ್ರ ದರ್ಶನ್ ಗೆ ಟಿಕೆಟ್ ಕೊಟ್ಟಿದ್ದು ಅಧಿಕೃತವಾಗಿ ಇಂದಿನಿಂದ ಧ್ರುವ ಪುತ್ರ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
Karnataka Assembly Election 2023: ಚುನಾವಣಾ ಕಾವು ಬಿಸಿಲಿನ ತಾಪದಂತೆ ಹೆಚ್ಚಾಗುತ್ತಿದ್ದು ಎಲೆಕ್ಷನ್ ಗೂ ಮೊದಲ ಭಾಗವಾದ ಪ್ರಚಾರಕ್ಕೆ ಹುರಿಯಾಳುಗಳು ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ. ಟೆಂಪಲ್ ರನ್ ಮೂಲಕ ಮತಬೇಟೆ ಆರಂಭಿಸುತ್ತಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರಿಂದು ತಂದೆ ಹಾಗೂ ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಬಂದ ದರ್ಶನ್ ತಂದೆ ಧ್ರುವನಾರಾಯಣ ಹಾಗೂ ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ, ಗ್ರಾಮದಲ್ಲಿರುವ ಗ್ರಾಮದೇವತೆ ಬೆಳ್ಳಿ ಕಾಣಮ್ಮ ದೇಗುಲ ಮತ್ತು ಚರ್ಚ್ ಗೆ ಗ್ರಾಮಸ್ಥರ ಜೊತೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ- ಚುನಾವಣೆಗೆ ಹಂಚಲು ಫುಡ್ ಕಿಟ್ ಸಂಗ್ರಹ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಫ್ಐಆರ್
ಇನ್ನು, ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಕೈ ಅಭ್ಯರ್ಥಿ, ಶಾಸಕ ಆರ್.ನರೇಂದ್ರ ಕೂಡ ಮಲೆಮಹದೇಶ್ಚರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದು ಗೋಪಿನಾಥಂ, ಪುದೂರು, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ಲಗ್ಗೆ ಇಟ್ಟು ಮತಬೇಟೆ ಆರಂಭಿಸಿದ್ದಾರೆ.
ಇದನ್ನೂ ಓದಿ- ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ: ಎಚ್‍ಡಿಕೆ
ಕೈ-ಕಮಲ ಫೈಟ್ ಜೋರು:
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಕೈ- ಕಮಲ ಅಭ್ಯರ್ಥಿಗಳು ಇಂದಿನಿಂದಲೇ ಪ್ರಚಾರ ಆರಂಭಿಸಿದ್ದು ಜಿದ್ದಾಜಿದ್ದಿನ ಕ್ಷೇತ್ರ ಇಂದಿನಿಂದ ರಂಗಾಗಿದೆ.
ಕಮಲ ಅಭ್ಯರ್ಥಿ, ಶಾಸಕ ನಿರಂಜನಕುಮಾರ್ ಅವರಿಂದು ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಪಾರ್ವತಿ ಬೆಟ್ಟದಿಂದ ಪ್ರಚಾರ ಆರಂಭಿಸಿದ್ದರೇ ಕೈ ಅಭ್ಯರ್ಥಿ ಗಣೇಶ್ ಪ್ರಸಾದ್ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಓಂಕಾರ ಸಿದ್ಧೇಶ್ವರನಿಗೆ ಪೂಜೆ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.