Karnataka Assembly Election: ಪಡಿತರದಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ, ಜೊತೆಗೆ ಅರ್ಧ ಲೀಟರ್ ನಂದಿನಿ ಹಾಲು ಸೇರಿಸಿ ನಾವು ಸಂಪೂರ್ಣ ಆರೋಗ್ಯ ಕಿಟ್ ಕೊಡುತ್ತಿದ್ದೇವೆ. ಆರ್ಥಿಕ ದುರ್ಬಲರಿಗೆ ಒಳ್ಳೆಯ ಆಹಾರ ಸಿಗುವ ಸಲುವಾಗಿ ಈ ಪ್ಯಾಕೇಜ್ ಕೊಡುತ್ತಿದ್ದೀವಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. 


COMMERCIAL BREAK
SCROLL TO CONTINUE READING

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಾರ್ವಜನಿಕ ರೋಡ್ ಶೋಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರೈತರು ಬೆಳೆಯುವ ಜೋಳ, ರಾಗಿ ಸೇರಿದಂತೆ ಎಲ್ಲ ಸಿರಿಧಾನ್ಯಗಳನ್ನು ಅವರಿಂದ ಖರೀದಿ ಮಾಡಿ ಅವರಿಗೆ ಬೆಂಬಲ ನೀಡುವ ಯೋಜನೆ ನಮ್ಮದು. ಇದರಿಂದ ಪೌಷ್ಠಿಕ ಆಹಾರ ಕೂಡ ಸಿಗುತ್ತದೆ. ಹಾಲು ಕೊಡುವುದರಿಂದ ರೈತರಿಂದ ದೊಡ್ಡ ಪ್ರಮಾಣದ ಖರೀದಿ ಆಗುತ್ತದೆ ಮತ್ತು ಅವರಿಗೆ ಉತ್ಪಾದನೆ ಮಾಡಲು ಬೆಂಬಲ ಸಿಗುತ್ತದೆ. ಈ ಬಗ್ಗೆ ಸಮಗ್ರ ಚಿಂತನೆ ಮಾಡಿ ಈ ಯೋಜನೆ ಮಾಡಿದ್ದೇವೆ. ಸಿರಿಧಾನ್ಯ ಉತ್ಪಾದನೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಬೆಲೆ ಕಡಿಮೆ ಇದ್ದ ರಾಗಿ ಪಡಿತರದಲ್ಲಿ ಕೊಟ್ಟ ಮೇಲೆ ಹೆಚ್ಚಿನ ಉತ್ಪಾದನೆ ಆಗ್ತಿದೆ ಮತ್ತು ಉತ್ತಮ ಬೆಲೆ ಕೂಡ ಸಿಗ್ತಿದೆ. ನಮ್ಮ ಪೋಷಣ್ ಅಭಿಯಾನದಲ್ಲಿ ಇದೆಲ್ಲವೂ ಸೇರುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.


ಇದನ್ನೂ ಓದಿ- Karnataka Assembly Election: ಬಿಜೆಪಿ ಪ್ರಜಾ ಪ್ರಣಾಳಿಕೆಯ ಮುಖ್ಯಾಂಶಗಳು


ಕಾಂಗ್ರೆಸ್ ಅವರ ರಿಪೋರ್ಟ್ ಕಾರ್ಡ್ ಕೊಡಲಿ: 
ಕಾಂಗ್ರೆಸ್ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ 65% ಅವರೇ ಮಾಡಿಲ್ಲ. ಮೊದಲು ಅವರು ರಿಪೋರ್ಟ್ ಕಾರ್ಡ್ ಕೊಡಲಿ. ನಮ್ಮ ಕಾಲದಲ್ಲಿ ಕೋವಿಡ್ ಬಂದಿದ್ದರಿಂದ ಸ್ವಲ್ಪ ಮಾರ್ಪಾಡು ಮಾಡಿಕೊಂಡು ಹೊಸ ಸ್ಕೀಂಗಳನ್ನು ಕೊಟ್ಟಿದ್ದೇವೆ. ಇದನ್ನು ವಿಧಾನಸಭೆಯಲ್ಲೂ ಹೇಳಿದ್ದೇನೆ. ನಾನು ಬಜೆಟ್ ನಲ್ಲೇ ವಿದ್ಯಾರ್ಥಿನಿಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆ. ಎಸ್ಸಿ ಎಸ್ಟಿ ಕುಟುಂಬಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದೆ, ಅದನ್ನೇ ಕಾಂಗ್ರೆಸ್ ಅವರು ಕಾಪಿ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಮೋದಿ, ಅಮಿತ್ ಶಾ ರಿಂದ ನಮಗೆ ಆನೆ ಬಲ: 
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪ್ರಚಾರಕ್ಕೆ ಬಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತೆ. ಪ್ರಧಾನಿ ಮೋದಿ ನೆನ್ನೆ ಮೈಸೂರಿಗೆ ಬಂದು ಹೋದ ಮೇಲೆ ಜನರಲ್ಲಿ ಬಹಳ ದೊಡ್ಡ ಉತ್ಸಾಹ ಕಾಣುತ್ತಿದೆ. ಇದರಿಂದ ಹೆಚ್ಚಿನ ಪರ್ಸೆಂಟೇಜ್ ಓಟಿಂಗ್ ಕೂಡ ಆಗುತ್ತದೆ. ಸೋಲುವ ಹತಾಶೆಯಲ್ಲಿ ವಿರೋಧ ಪಕ್ಷಗಳು ತಮ್ಮ ಸ್ಥಿಮಿತವನ್ನು ಕಳೆದುಕೊಂಡು ಪ್ರಧಾನಿ ವಿರುದ್ಧ ಮಾತನಾಡುತ್ತಿದ್ದಾರೆ.  ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಈಗ ಅವರ ಮಗನ ಸರದಿ. ಅವರಿಗೂ ಸಹ ಜನ ತಕ್ಕಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು. 


ಇದನ್ನೂ ಓದಿ- "ಮೋದಿ ಅವರೇ ನೀವು ನಮ್ಮ ಯೋಜನೆಗಳನ್ನು ಟೀಕಿಸುವುದಾದರೆ, ನೀವು ರಾಜ್ಯಕ್ಕಾಗಿ ಏನು ಮಾಡಲು ಹೊರಟಿದ್ದೀರಿ ಎಂದು ಹೇಳಿ"


ಇದೇ  ಸಂದರ್ಭದಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಅವರು ಸೋಲುತ್ತೇವೆಂದು ಹತಾಶರಾಗಿ ಗಲಾಟೆ ಮಾಡಿಸುತ್ತಿದ್ದಾರೆ. ಬಹಳ ಸುಲಭವಾಗಿ ಗೆಲ್ಲುತ್ತೀವಿ ಎಂಬ ಭ್ರಮೆ ಅವರಲ್ಲಿತ್ತು. ಕಾಂಗ್ರೆಸ್ ಓಟ್ ಬ್ಯಾಂಕ್ ಅವರಿಂದ ಸರಿಯುತ್ತಿದೆ. ಗಲಾಟೆ ಮಾಡಿದ್ರೆ ನಾವು ಗೆಲ್ಲಬಹುದು ಮತ್ತು ನಮ್ಮ ಪ್ರಚಾರವನ್ನು ತಡೆಯಬಹುದು ಎಂದು ಅವರು ಗಲಾಟೆ ಮಾಡುತ್ತಿದ್ದಾರೆ. ತಳಮಟ್ಟದಲ್ಲಿ ಬಹಳ ಬದಲಾವಣೆ ಆಗ್ತಿದೆ. ನಾವು ಗೆಲುವಿನ ಕಡೆಗೆ ಸಾಗುತ್ತಿದ್ದೇವೆ. ಜನ ಜಾಗೃತರಾಗಿದ್ದಾರೆ. ಹಳೇ ಪದ್ಧತಿ ಈಗ ನಡೆಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.