ಬೆಂಗಳೂರು: ಬಿಜೆಪಿಗೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕೊಲ್ಲುವಷ್ಟು ದ್ವೇಷ ಏಕೆ? ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಮುನ್ನುಡಿ ಬರೆದಿದ್ದಕ್ಕಾ? ಆರ್ಟಿಕಲ್ 371ಜೆ ಜಾರಿಗೋಸ್ಕರ ಹೋರಾಡಿ ಯಶಸ್ವಿಯಾಗಿದ್ದಕ್ಕಾ? ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಕ್ಕಾ? ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದಕ್ಕಾ? ದುರಾಡಳಿತವನ್ನು ಪ್ರಶ್ನಿಸಿದ್ದಕ್ಕಾ? ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Adipurush Trailer: 70 ದೇಶಗಳಲ್ಲಿ ಏಕಕಾಲಕ್ಕೆ ಆದಿಪುರುಷ ಟ್ರೇಲರ್ ಬಿಡುಗಡೆ.. ರಿಲೀಸ್‌ ಡೇಟ್‌ ಫಿಕ್ಸ್‌!


ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷವು "ವಿರೋಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಬ್ಬರನ್ನು ಕೊಲೆ ಮಾಡುವ ಸಂಚನ್ನು ಬಿಜೆಪಿಯ ಅಭ್ಯರ್ಥಿಯೇ ಮಾಡಿದ ಸಂಗತಿ ಹೊರಬಂದರೂ ಪ್ರಧಾನಿ ಮೋದಿ ಮೌನ ವಹಿಸಿರುವುದೇಕೆ? ರಕ್ಷಣೆಯ ಹೊಣೆ ಹೊತ್ತ ಗೃಹಸಚಿವ  ಅಮಿತ್ ಶಾ ಮೌನವಾಗಿರುವುದೇಕೆ? ಬಿಜೆಪಿಯ ಈ ಮೌನ ಸಮ್ಮತಿಯ ಲಕ್ಷಣವೇ? ಅಥವಾ ಷಡ್ಯಂತ್ರದ ಜಾಣ ಮೌನವೇ?" ಎಂದು ಪ್ರಶ್ನಿಸಿದೆ.


ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಂತಹ ನಮ್ಮ ಅತ್ಯಮೂಲ್ಯ ನಾಯಕರನ್ನು ಕಳೆದುಕೊಂಡಿದ್ದೇವೆ.ಅಪ್ಪಿ ತಪ್ಪಿಯೂ ಮಲ್ಲಿಕಾರ್ಜುನ್ ಖರ್ಗೆ ಅವರ ಒಂದು ಹನಿ ರಕ್ತ ನೆಲಕ್ಕೆ ಚೆಲ್ಲಿದ್ದೇ ಆದರೆ ಬಿಜೆಪಿ ಅತಿ ಘೋರವಾದ ಪರಿಣಾಮ ಎದುರಿಸಬೇಕಾಗುತ್ತದೆ, ಎಚ್ಚರವಿರಲಿ.ಇದು "ಭೀಮ"ನ ನೆಲ ಎಂಬುದು ನೆನಪಿರಲಿ ಎಂದು ಅದು ಎಚ್ಚರಿಕೆ ನೀಡಿದೆ.


ಕಾಂಗ್ರೆಸ್ ಗೆದ್ದರೆ ಗಲಭೆಯಾಗುತ್ತದೆ" ಎಂದು ಅಮಿತ್ ಶಾ ಹೇಳಿದ್ದಕ್ಕೂ,ರೌಡಿಯೊಬ್ಬನಿಗೆ ಟಿಕೆಟ್ ನೀಡಿರುವುದಕ್ಕೂ,#BJPRowdyMorcha ವನ್ನು ಕಟ್ಟಿ ಪಾತಕಿಗಳನ್ನು ಮೋದಿ ಪಕ್ಕ ನಿಲ್ಲಿಸುತ್ತಿರುವುದಕ್ಕೂ,ಮಲ್ಲಿಕಾರ್ಜುನ್ ಅವರ ಕುಟುಂಬವನ್ನು ಕೊಲ್ಲಲು ಷಡ್ಯಂತ್ರ ರೂಪಿಸಿರುವುದಕ್ಕೂ ಖಂಡಿತಾ ಸಂಬಂಧವಿದೆ.ಇದು ಬಿಜೆಪಿಯ ಅತೀ ಕೀಳು ಮಟ್ಟದ ಸಂಚು ಎಂದು ಕಿಡಿ ಕಾರಿದೆ.


ಇದನ್ನೂ ಓದಿ:  Shakuntalam OTT Release: ಈ ದಿನದಂದು OTT ನಲ್ಲಿ ಶಾಕುಂತಲಂ ಸ್ಟ್ರೀಮಿಂಗ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.