Adipurush Trailer: 70 ದೇಶಗಳಲ್ಲಿ ಏಕಕಾಲಕ್ಕೆ ಆದಿಪುರುಷ ಟ್ರೇಲರ್ ಬಿಡುಗಡೆ.. ರಿಲೀಸ್‌ ಡೇಟ್‌ ಫಿಕ್ಸ್‌!

Adipurush Film Trailer : ಆದಿಪುರುಷನ ಬಗ್ಗೆ ಜನರಲ್ಲಿ ಭಾರೀ ನಿರೀಕ್ಷೆಯಿದೆ. ಆದಿಪುರುಷ ಚಿತ್ರ ಮೊದಲು ವಿವಾದದಿಂದ ಗಮನ ಸೆಳೆದಿತ್ತು.  70 ದೇಶಗಳಲ್ಲಿ ಏಕಕಾಲಕ್ಕೆ ಆದಿಪುರುಷ ಟ್ರೇಲರ್ ಬಿಡುಗಡೆ ಆಗಲಿದೆ. 

Written by - Chetana Devarmani | Last Updated : May 6, 2023, 05:33 PM IST
  • ಆದಿಪುರುಷ ಟ್ರೇಲರ್ ರಿಲೀಸ್‌ ಡೇಟ್‌ ಫಿಕ್ಸ್‌
  • 70 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ
  • ಪ್ರಭಾಸ್ ಅಭಿನಯದ ಸಿನಿಮಾ ಆದಿಪುರುಷ
Adipurush Trailer: 70 ದೇಶಗಳಲ್ಲಿ ಏಕಕಾಲಕ್ಕೆ ಆದಿಪುರುಷ ಟ್ರೇಲರ್ ಬಿಡುಗಡೆ.. ರಿಲೀಸ್‌ ಡೇಟ್‌ ಫಿಕ್ಸ್‌!   title=
Adipurush

Adipurush Film Trailer Release Date: ಬಹು ನಿರೀಕ್ಷಿತ ಚಿತ್ರ ಆದಿಪುರುಷ 16 ಜೂನ್ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಆದಿಪುರುಷನ ಬಗ್ಗೆ ಜನರಲ್ಲಿ ಭಾರೀ ಉತ್ಸಾಹ ಕಂಡು ಬರುತ್ತಿದೆ. ಚಿತ್ರದ ಟ್ರೇಲರ್ ಇನ್ನೂ ಬಿಡುಗಡೆಯಾಗಿಲ್ಲ, ಆದರೆ ಮೇ 9 ರಂದು ಈ ಕಾಯುವಿಕೆ ಕೂಡ ಕೊನೆಗೊಳ್ಳುತ್ತದೆ. ಮೇ 9 ರಂದು ಆದಿಪುರುಷ ಚಿತ್ರದ ಟ್ರೇಲರ್‌ನ ದೊಡ್ಡ ಮಟ್ಟದಲ್ಲಿ ಲಾಂಚ್ ಆಗಲಿದ್ದು, ಈ ದಿನ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಮತ್ತು ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ಝಲಕ್‌ ಕಾಣುವ ನಿರೀಕ್ಷೆಯಿದೆ. 

ಇದನ್ನೂ ಓದಿ: ʼಲವ್‌ ಜಿಹಾದ್‌ʼ ಚಿತ್ರ ʼದಿ ಕೇರಳ ಸ್ಟೋರಿʼಗೆ ತೆರಿಗೆ ವಿನಾಯಿತಿ..!

70 ದೇಶಗಳಲ್ಲಿ ಏಕಕಾಲದಲ್ಲಿ ಆದಿಪುರುಷ ಚಿತ್ರದ ಟ್ರೈಲರ್ ರಿಲೀಸ್‌

ಆದಿಪುರುಷ ಚಿತ್ರ ಮೊದಲು ವಿವಾದದಿಂದ ಗಮನ ಸೆಳೆದಿತ್ತು. ನಂತರ ಶ್ರೀರಾಮ, ಮಾತೆ ಸೀತೆ, ಹನುಮಂತನ ಪಾತ್ರದಲ್ಲಿ ನಟಿಸಿರುವ ನಟರ ಲುಕ್ ಪೋಸ್ಟರ್ ಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿ ಅಭಿಮಾನಿಗಳ ಮನದಲ್ಲಿ ಸ್ಥಾನ ಪಡೆದಿತ್ತು. ಈಗ ಅಭಿಮಾನಿಗಳ ಉತ್ಸಾಹ ಹೆಚ್ಚಾದ ನಂತರ, ಆದಿಪುರುಷ ಚಿತ್ರದ ನಿರ್ಮಾಪಕರು ಮೆಗಾ ಲಾಂಚ್ ಕಾರ್ಯಕ್ರಮದೊಂದಿಗೆ ಜಾಗತಿಕವಾಗಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಚಿತ್ರದಲ್ಲಿ ಶ್ರೀರಾಮ್ ಆಗಿ ಕಾಣಿಸಿಕೊಳ್ಳಲಿರುವ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಟ್ರೇಲರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಆದಿಪುರುಷನ ಟ್ರೈಲರ್ ಭಾರತದಲ್ಲಿ ಮಾತ್ರವಲ್ಲದೆ 70 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.

 

 
 
 
 

 
 
 
 
 
 
 
 
 
 
 

A post shared by Om Raut (@omraut)

 

ಇದನ್ನೂ ಓದಿ:  ಮೊದಲ ದಿನವೇ ದಾಖಲೆ ಬರೆದ 'ದಿ ಕೇರಳ ಸ್ಟೋರಿ' ಕಲೆಕ್ಷನ್‌

ಬಿಡುಗಡೆಗೂ ಮುನ್ನವೇ ಅದ್ಧೂರಿ ಯಶಸ್ಸು ಗಳಿಸಿದ ಆದಿಪುರುಷ!

ಓಂ ರೌತ್ ನಿರ್ದೇಶನದ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ ಆದಿಪುರುಷ, ಬಿಡುಗಡೆಗೆ ಮುಂಚೆಯೇ ನ್ಯೂಯಾರ್ಕ್‌ನಲ್ಲಿನ ಟ್ರಿಬೆಕಾ ಉತ್ಸವದಲ್ಲಿ ಅದರ ಅಂತರರಾಷ್ಟ್ರೀಯ ಪ್ರಥಮ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈಗ ಈ ಚಿತ್ರ ಭಾರತ ಮಾತ್ರವಲ್ಲದೆ ಅಮೆರಿಕ, ಕೆನಡಾ, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಪ್ರದರ್ಶನಗೊಳ್ಳಲಿದೆ. 2022 ರ ನವೆಂಬರ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾದಾಗ, ಸಾಕಷ್ಟು ಗದ್ದಲವಿತ್ತು. ಶ್ರೀರಾಮನ ನೋಟದಿಂದ ರಾವಣನ ಗಡ್ಡ ಮತ್ತು ಮೀಸೆಯವರೆಗೆ ಜನರು ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದರು. ವಿವಾದಗಳ ಹಿನ್ನೆಲೆಯಲ್ಲಿ ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ. ಈ ಮೊದಲು ಈ ಚಿತ್ರ 2023ರ ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು.

ಇದನ್ನೂ ಓದಿ:  Shakuntalam OTT Release: ಈ ದಿನದಂದು OTT ನಲ್ಲಿ ಶಾಕುಂತಲಂ ಸ್ಟ್ರೀಮಿಂಗ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News