Karnataka Assembly Elections: ರಾಜ್ಯ ವಿಧಾನಸಭಾ ಚುನಾವಣೆಗೆ 30 ದಿನಗಳಷ್ಟೇ ಬಾಕಿ ಇದೆ. ಇನ್ನೇನು ಮೂರು ದಿನದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.  ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಅನ್ನೊದನ್ನ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಹೆಸರು ಘೋಷಣೆ ಮಾಡದೆ ಬಾಕಿ ಇಟ್ಟಿದೆ. ಪಕ್ಷದ ಈ ನಡೆಗೆ ಕಾರ್ಯಕರ್ತರು ಹಾಗೂ ಮುಖಂಡರು ಅಸಮಾಧಾನ ಹೊರ ಹಾಕುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ಅದರಲ್ಲಿ ಈಗಾಗಲೇ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ, ಒಂದು ಕಾಲದಲ್ಲಿ ಕಾಂಗ್ರೆಸ್ ‌ನ ಭದ್ರ ಕೋಟೆಯಾಗಿದ್ದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ ಒಂದರಲ್ಲಿ ಮಾತ್ರ ಕಾಂಗ್ರೆಸ್ ಇದುವರೆಗೂ ತನ್ನ ಅಭ್ಯರ್ಥಿ ಯಾರು ಅನ್ನೋದನ್ನ ಘೋಷಣೆ‌ ಮಾಡಿಲ್ಲ. 


ಈ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಸೇರಿ 10ಕ್ಕೂ ಹೆಚ್ಚು ಮಂದಿ ಟಿಕೆಟ್ ಗಾಗಿ ಅರ್ಜಿಯನ್ನ ಸಲ್ಲಿಸಿದರು. ಆದರೆ ಕಳೆದ ಬಾರಿ ಹೊನ್ನಾವರದಲ್ಲಿ ನಡೆದ ಪರೇಶ ಮೇಸ್ತಾ ಸಾವಿನ ಕಾರಣದಿಂದಾಗಿ ಹಿಂದೂತ್ವದ ಅಲೆಯಲ್ಲಿ ಜಿಲ್ಲೆಯ ಕರಾವಳಿಯಲ್ಲಿ ಕಾಂಗ್ರೆಸ್ ನ ಕುಮಟಾ ಕ್ಷೇತ್ರ ಅಲ್ಲದೇ ನಾಲ್ಕು ಕ್ಷೇತ್ರಗಳಲ್ಲಿ ಸಹ ಸೋಲು ಕಾಣುವಂತಾಯಿತು. ಹೀಗಾಗಿ ಕಳೆದ ಬಾರಿ ಸೋಲುಕಂಡಿದ್ದ ಎಲ್ಲಾ ಮಾಜಿ ಶಾಸಕರಿಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆ ಸಹ ಮಾಡಲಾಗಿತ್ತು. ಅದರಂತೆ ಕುಮಟಾ ಕ್ಷೇತ್ರದ ಅಕ್ಕ-ಪಕ್ಕದ ಕ್ಷೇತ್ರವಾಗಿರುವ ಕಾರವಾರ ಹಾಗೂ ಭಟ್ಕಳ‌ ಕ್ಷೇತ್ರದಲ್ಲಿ ಕಳೆದ ಬಾರಿ ಸೋತ ಸತೀಶ ಸೈಲ್ ಹಾಗೂ ಮಂಕಾಳು ವೈದ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಕುಮಟಾ ಕ್ಷೇತ್ರ ಮಾತ್ರ ಇನ್ನೂ‌ ನಿಗೂಢವಾಗಿದೆ.


ಇದನ್ನೂ ಓದಿ- ಚುನಾವಣಾ ಪ್ರಚಾರದಲ್ಲಿ ಭಾಗಿ,ವಾರ್ಡನ್ ಅಮಾನತು


ಇನ್ನೂ ಕುಮಟಾ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ ಟಿಕೆಟ್  ಘೋಷಣೆ ಮಾಡದೆ ಇರುವ ಕಾರಣಕ್ಕೆ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ನೂರಾರು ಅಭಿಮಾನಿಗಳು ಇಂದು ಸಭೆ ನಡೆಸಿದ್ದು, ಪಕ್ಷದ ಹೈಕಮಾಂಡ್ ಪಕ್ಷದಲ್ಲಿ ಕುಮಟಾ ಕ್ಷೇತ್ರದ‌ ಅಭ್ಯರ್ಥಿಯನ್ನಾಗಿ ಶಾರದಾ ಮೋಹನ ಶೆಟ್ಟಿ ಅವರ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡಬೇಕು. ಕಳೆದ ಬಾರಿ ಸೋಲಾಗಿದೆ ಎಂದು ಶಾರದಾ ಶೆಟ್ಟಿ ಅವರು ಪಕ್ಷ ಸಂಘಟನೆ ಮಾಡುವ ವಿಚಾರವಾಗಲಿ ಹಾಗೂ ಕ್ಷೇತ್ರದಲ್ಲಿ ಪ್ರವಾಹ, ಕರೋನಾ ಬಂದ ಸಂದರ್ಭದಲ್ಲಿ ಜನರ ಜೊತೆಗೆ ನಿಂತು ಕೆಲಸ ಮಾಡಿದ್ದಾರೆ. ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರಿನ ಸಮಸ್ಯೆ, ನಡೆಗಡ್ಡೆಯಾಗಿದ್ದ ಗ್ರಾಮಗಳಿಗೆ ಸೇತು ನಿರ್ಮಾಣ ಸೇರಿದಂತೆ ಅನೇಕ ಜನರಪ‌ ಕೆಲಸದ ಜೊತಗೆ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ದುಡಿದಿದ್ದಾರೆ. ಇಷ್ಟಾದ್ರೂ ಸಹ ಟಿಕೆಟ್ ಘೋಷಣೆ ಮಾಡಿಲ್ಲ. ಶೀಘ್ರದಲ್ಲಿ ಕುಮಟಾ ಕ್ಷೇತ್ರದ ಟಿಕೆಟ್ ಮಾಜಿ ಶಾಸಕಿ ಆಗಿರುವ ಶಾರದಾ ಶೆಟ್ಟಿ ಅವರಿಗೆ ನೀಡಬೇಕು ಆಗ್ರಹಿಸಿದ್ದಾರೆ. 


ಇದನ್ನೂ ಓದಿ- Karnataka elections: ‘ಕೇಸರಿ’ ಕಲಿಗಳನ್ನು ಅಂತಿಮಗೊಳಿಸಲು ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆ


ಒಟ್ಟಾರೆ ನಾಮಪತ್ರ ಸಲ್ಲಿಕೆ ದಿನ ಹತ್ತಿರವಾಗ್ತಾ ಇದ್ರೂ ಕುಮಟಾ ಕ್ಷೇತ್ರದ ಅಭ್ಯರ್ಥಿ ಯಾರು ಅನ್ನೋದನ್ನ ಘೋಷಣೆ ಮಾಡದೆ ಇರೋದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಶಾರದಾ ಶೆಟ್ಟಿ ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ‌ಹೈಕಮಾಂಡ್ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರೋ ಮುನ್ನವೆ ಟಿಕೆಟ್ ಘೋಷಣೆ ಮಾಡುತ್ತಾ, ಇಲ್ಲವೇ ಹೊಸಬರಿಗೆ ಮಣೆ‌ ಹಾಕತ್ತಾ ಅನ್ನೊದನ್ನ ಕಾದು ನೋಡಬೇಕಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.