ಬೆಂಗಳೂರು: ಪಂಚಮಸಾಲಿ ಮುಖಾಂಡರ ಸಭೆಯಲ್ಲಿ ಭಾಗವಹಿಸಿ ಪಂಚಮಸಾಲಿ ಸಮಾಜ ನನ್ನ ಜೊತೆ ಇದೆ ಎಂದು ಹೇಳಿಕೆ ನೀಡುತ್ತಿದ್ದಂತೆ ಸವದಿ ವಿರುದ್ದ ಏಕಾಏಕಿ ಪಂಚಮಸಾಲಿ ಮಠಾಧೀಶರು ಮುಗಿಬಿದ್ದಿದ್ದಾರೆ.ಆ ಮೂಲಕ ಈಗ ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸವದಿಗೆ ತೀವ್ರ ಹಿನ್ನೆಡೆಯಾಗಿದೆ.
ಆಲಗೂರ ಪೀಠದ ಸ್ವಾಮೀಜಿ ನೇತೃತ್ವದಲ್ಲಿ 10 ಕ್ಕೂ ಹೆಚ್ಚು ಸ್ವಾಮೀಜಿಗಳು ಸವದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.ಅಷ್ಟೇ ಅಲ್ಲದೆ ಪಂಚಮಸಾಲಿ ಸಮಾವೇಶ ಬೆನ್ನಲ್ಲೇ ಕುಮಟಳ್ಳಿ ಬೆನ್ನಿಗೆ ಪಂಚಮಸಾಲಿ ಸ್ವಾಮೀಜಿಗಳು ನಿಂತಿದ್ದಾರೆ.
ಇದನ್ನೂ ಓದಿ: ಮಾಧ್ಯಮಗಳಲ್ಲಿ ಪ್ರಚಾರದ ಪ್ರಸಾರಕ್ಕೆ ಅನುಮತಿ ಕಡ್ಡಾಯ: ಉಲ್ಲಂಘನೆ ಆದ್ರೆ ಕಾನೂನು ಕ್ರಮ
ನಿನ್ನೆ ಅಥಣಿ ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸವದಿ ಸಭೆಯಲ್ಲಿ ಪಂಚಮಸಾಲಿ ಸಮುದಾಯ ನನ್ನ ಜೊತೆಗೆ ಇದೆ ಎಂದು ಹೇಳಿದ್ದರು.ಈಗ ಇದಾದ ಬೆನ್ನಲ್ಲೇ ಸ್ವಾಮೀಜಿಗಳು ಸವದಿಗೆ ಪ್ರತ್ಯುತ್ತರ ನೀಡಿರುವುದು ಈಗ ಅವರಿಗೆ ಆರಂಭದಲ್ಲಿಯೇ ಹಿನ್ನೆಡೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರ್ಯಾಗರ್ ಹಿಡಿದು ರಸ್ತೆಯಲ್ಲೇ ಬೆದರಿಕೆ ಒಡ್ಡಿದ ಟಾಟಾ ಏಸ್ ಚಾಲಕ
ಜಮಖಂಡಿ ತಾಲೂಕಿನ ಆಲಗೂರ ಹಾಗೂ ಮಹೇಶ್ ಕುಮಟಳ್ಳಿ ಊರು ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ಸ್ವಾಮೀಜಿಗಳ ಸಭೆಯಲ್ಲಿ ಲಕ್ಷ್ಮಣ ಸವದಿ ಹೇಳಿಕೆಯನ್ನ ಖಂಡಿಸಿದ ಆಲಗೂರ ಮಠದ ಸ್ವಾಮೀಜಿ "ಮಹೇಶ್ ಕುಮಟಳ್ಳಿ ನಮ್ಮ ಸಮಾಜದ ಅಭ್ಯರ್ಥಿ, ಕುಮಟಳ್ಳಿ ಪರ ನಮ್ಮ ಸಮಾಜ ಹಾಗೂ ನಮ್ಮ ಪೀಠದ ಬೆಂಬಲ ಇದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.