ನಾನೂ ಹನುಮನ ಭಕ್ತ, ಬರೀ ಬಿಜೆಪಿಗರಷ್ಟೇ ಅಲ್ಲ..!
Karnataka Election 2023 : ನಾವು ಹನುಮಂತ ಭಕ್ತರು, ನಾವು ಆಂಜನೇಯ ಪ್ರವೃತ್ತಿ ಹೊಂದಿದ್ದೇವೆ. ಹನುಮ ಚಾಲಿಸನ್ನು ನಾವು ದಿನಾ ಪಠಣ ಮಾಡ್ತೀವಿ, ಅವರೊಬ್ಬರೇನಾ ಮಾಡೋದು.? ಎಂದು ಕಮಲಪಾಳಯದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದರು.
ಬೆಂಗಳೂರು : ಭಜರಂಗದಳ ಬ್ಯಾನ್ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಶಾಂತಿ ತೋಟ ಕದಲಬಾರದು. ಸೌಹಾರ್ದತೆ ಇರಬೇಕು. ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯಗೂ ಭಜರಂಗದಳ ಕ್ಕೂ ಏನ್ ಸಂಬಂಧ. ಬಿಜೆಪಿ ಅವರು ಬಹಳ ಪ್ರವೋಕ್ ಮಾಡ್ತಿದ್ದಾರೆ. ಜನಕ್ಕೆ ಇದು ಅರ್ಥ ಅಗಿದೆ. ನಾವು ಹನುಮಂತ ಭಕ್ತರು, ನಾವು ಆಂಜನೇಯ ಪ್ರವೃತ್ತಿ ಹೊಂದಿದ್ದೇವೆ. ಆಂಜನೇಯ ಬೇರೆ ಭಜರಂಗದಳ ಬೇರೆ. ಬಿಜೆಪಿ ಅವರು ಭಜರಂಗಿ ಅಂತ ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಹೇಳಿ ಎಂದು ಡಿಕೆಶಿ ಗುಡುಗಿದರು.
ನಾಳೆ ಹನುಮ ಚಾಲಿಸ ಪಠಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹನುಮ ಚಾಲಿಸನ್ನು ನಾವು ದಿನಾ ಪಠಣ ಮಾಡ್ತೀವಿ, ಅವರೊಬ್ಬರೇನಾ ಮಾಡೋದು.. ? ಹಿಂದಿನ RSS ಬೇರೆ ಈಗಿನ RSS ಬೇರೆ. ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ. ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ..? ಮೊದಲು ನೀವು ದೇಶ ಉಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಬಿಜೆಪಿ ವಿರುದ್ಧ ಗುಡುಗಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ
ಮೋದಿಯವರೇ ಡಬಲ್ ಇಂಜಿನ್ ಸರ್ಕಾರ ಏನ್ ಮಾಡಿದೆ ಅಂತ ಹೇಳಿ : ಕಾಂಗ್ರೆಸ್ ATM ಎಂಬ ಪಿಎಂ ಮೋದಿ ಟೀಕೆ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ. ಕಾಂಗ್ರೆಸ್‌ನವರು ATM ಮಾಡಿದ್ದಾರೋ ಬಿಜೆಪಿ ಅವರು ಮಾಡಿದ್ದಾರೆ ಗೊತ್ತಿದೆ. ಮೋದಿ ಅವರು ನಮ್ಮನ್ನ ಟೀಕೆ ಮಾಡೋದು ಬೇಡ. ಮೊದಲು ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಏನ್ ಕೊಡ್ತು ಅಂತ ಹೇಳಲಿ ಎಂದು ಸವಾಲು ಹಾಕಿದರು.
ಮೇಕೆದಾಟು, ಮಹದಾಯಿ, ಉದ್ಯೋಗ ಸೃಷ್ಟಿ ಎಷ್ಟು ಕೊಟ್ರು ಅಂತ ಹೇಳಲಿ. ಬಿಜೆಪಿ ಅವರು ಉದ್ಯೋಗ ಕೊಟ್ರಾ, ಬಂಡವಾಳ ಹೂಡಿಕೆ ಮಾಡೋರು ಬಂದ್ರಾ.. 15 ಲಕ್ಷ ಕೊಟ್ರಾ..? 1 ಲಕ್ಷ ಸಾಲಮನ್ನಾ ಮಾಡ್ತೀನಿ ಅಂದ್ರು ಮಾಡಿದ್ರಾ..? ಭ್ರಷ್ಟಾಚಾರ ಬಗ್ಗೆ ಮಾತಾಡಿದ್ರಾ.. 40% ಆರೋಪದ ಬಗ್ಗೆ ಮಾತಾಡಿದ್ರಾ.. ಅವರ ಮಂತ್ರಿಗಳ ವಿರುದ್ದ ಏನ್ ಆಕ್ಷನ್ ತಗೊಂಡ್ರು.. ಎಲ್ಲದಕ್ಕೂ ಮೋದಿ ಮೌನಂ ಲಕ್ಷ್ಮಣಂ ತೋರಿಸಿದ್ದಾರೆ.. ಎಂದು ಡಿಕೆ ಶಿವಕುಮಾರ್ ಅವರು ಕಿಡಿಕಾರಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.