Karnataka Assembly Election 2023: ಹನೂರು ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ನಾಲ್ಕನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ನಾಮಿನೇಷನ್ ನಲ್ಲಿ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದು  ಸ್ವಯಾರ್ಜಿತವಾಗಿ 13,46,49,000 ಕೋಟಿ ಸಂಪಾದನೆ ಮಾಡಿದ್ದು ಪಿತ್ರಾರ್ಜಿತವಾಗಿ 3.64 ಕೋಟಿ ರೂ‌. ಆಸ್ತಿ ಇದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ- Karnataka Assembly Election: ಶತ ಕೋಟ್ಯಾಧಿಪತಿ ಬಳಿ ಕಾರಿಲ್ಲ- ಹಾಲಿ ಶಾಸಕಗೆ 8 ಕೋಟಿ ಸಾಲ


ಇನ್ನು, ಪತ್ನಿ ಸ್ವಯಾರ್ಜಿತವಾಗಿ 2.6 ಕೋಟಿ ಸಂಪಾದಿಸಿದ್ದು ಪುತ್ರ ನವನೀತ್ ಗೌಡ 3.8 ಕೋಟಿ ಆದಾಯ ಮಾಡಿದ್ದು 1.7 ಲಕ್ಷ ಸಾಲವನ್ನು ಪಡೆದಿದ್ದಾರೆ.  ಶಾಸಕ ಆರ್.ನರೇಂದ್ರ 2 ಕಾರು, 1 ಟ್ರಾಕ್ಟರ್ ಹೊಂದಿದ್ದು ಪುತ್ರ 2 ಬೈಕ್, 1 ಕಾರನ್ನು ಹೊಂದಿದ್ದಾರೆ.  


ಇದನ್ನೂ ಓದಿ- Karnataka Assembly Election: ಶೆಟ್ಟರ್ ಟಿಕೆಟ್ ತಪ್ಪಿಸಲು ನಡೆದಿತ್ತಾ ಷಡ್ಯಂತ್ರ


ಚಿನ್ನಾಭರಣ ವಿಚಾರ ಗಮನಿಸಿದರೇ ನರೇಂದ್ರ ಬಳಿ 16 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಇದ್ದರೇ ಪತ್ನಿ 580 ಗ್ರಾಂ ಚಿನ್ನ, 2.4 ಕೆಜಿ ಬೆಳ್ಳಿ ಹೊಂದಿದ್ದಾರೆ. ಮಗನ ಬಳಿಯೂ 20 ಗ್ರಾಂ ಚಿನ್ನ ಇದೆ.
 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.