Karnataka New Chief Minister: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ಸಿಎಂ ಹುದ್ದೆ ಕಗ್ಗಂಟು ಮಾತ್ರ ಹಾಗೆ ಇದೆ. ನಾ ಕೊಡೆ ನೀ ಬಿಡೆ ಎನ್ನುಂತಾಗಿದೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಕೋಲ್ಡ್ ವಾರ್. ಈ ಮಧ್ಯೆ ಡಾ. ಜಿ. ಪರಮೇಶ್ವರ್ ಕೂಡ ಪರೋಕ್ಷವಾಗಿ ನಾನು ಸಿಎಂ ಆಕಾಂಕ್ಷಿ ಅಂತ ಹೇಳೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಸಿಎಂ ಗಾಧಿ ಕಾವು ಜೋರಾಗಿದೆ. ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಕೂಡ ಮಾಡಲಾಗಿದೆ. ಯಾರು ಸಿಎಂ ಅನ್ನೋ ಉತ್ತರ ರಾಜ್ಯದ ಜನಕ್ಕೆ ಇನ್ನು ಸಿಗಬೇಕಿದೆ. ಇದರ ಮಧ್ಯೆ ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ. ನಾನು ಸಿಎಂ ಆಕಾಂಕ್ಷಿ, ನನಗೂ ಅವಕಾಶ ಕೊಡಿ ಅಂತ ಹೇಳಿದ್ದಾರೆ.


ಇದನ್ನೂ ಓದಿ- ಸಿಎಂ ಆಯ್ಕೆ ಜೊತೆಗೆ ಕ್ಯಾಬಿನೆಟ್‌ಗೆ ದಶಸೂತ್ರ..!


ಈ ಕುರಿತಂತೆ ಮಾತನಾಡಿದ ಜಿ.ಪರಮೇಶ್ವರ್, ನಾನು ಪಕ್ಷದ ವರಿಷ್ಠರನ್ನ ನಂಬಿದ್ದೇನೆ. ನಾನು 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಹಾಗೆ ಮಾಡೊಲ್ಲ. ನನಗೆ ಪ್ರಿನ್ಸಿಪಲ್ ಇದೆ. ನನಗೆ ಶಿಸ್ತು ಮುಖ್ಯ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಖಂಡಿತ ಮಾಡ್ತೀನಿ. ಅವಕಾಶ ಕೊಟ್ಟರೆ ಮಾಡೊಲ್ಲ ಅಂತ ಹೇಳೊಲ್ಲ. ಹೈಕಮಾಂಡ್ ಗೆ ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಎಲ್ಲವೂ ಗೊತ್ತಿದೆ. ಲಾಬಿ ಮಾಡಬಾರದು ಅಂತ ಸುಮ್ಮನೆ ಇದ್ದೇನೆ. ಸುಮ್ಮನೆ ಇದ್ದೇನೆ ಅಂದರೆ ಅಸಮರ್ಥ ಅಂತ ಅಲ್ಲ. ನಾನು ಸಮರ್ಥನೆ ಎಂದು ಹೇಳುತ್ತಾ ಪರೋಕ್ಷವಾಗಿ ಡಿ.. ಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. 


ಇದನ್ನೂ ಓದಿ- Karnataka CM: ಯಾರಾಗ್ತಾರೆ ಕರುನಾಡ ಮುಂದಿನ ಸಿಎಂ? ಇಂದು ಹೊರಬೀಳಲಿದೆ ಮುಖ್ಯಮಂತ್ರಿ ಹೆಸರು!


ವಾಸ್ತವವಾಗಿ, 2013 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದರೆ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇತ್ತು. ಆದರೆ ಸೋತ ಹಿನ್ನೆಲೆ ಸಿಎಂ ಸ್ಥಾನ ಕೈ ತಪ್ಪಿತ್ತು. ಈ ಬಾರಿ ಫುಲ್ ಮೆಜಾರಿಟಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದಲಿತ ಸಿಎಂ ಕೂಗು ಕೂಡ ಇದೆ. ಅಲ್ಲದೆ ಪರಮೇಶ್ವರ್ ಅವರೇ ಖುದ್ದು ನಾನು ಸಿಎಂ ಆಕಾಂಕ್ಷಿ ಅನ್ನೋ ಮೂಲಕ ದಲಿತ ಸಿಎಂ ಕೂಗಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ