ನಾನೆಂದೂ ಸೇಡಿನ ರಾಜಕೀಯ ಮಾಡಿಲ್ಲ-ಜಗದೀಶ್ ಶೆಟ್ಟರ್
Jagadish Shetter : 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಕಾಂಗ್ರೆಸ್ನ ಅಭ್ಯರ್ಥಿಗಳು ರಾಜ್ಯಾದ್ಯಂತ ಮುನ್ನಡೆಯಲ್ಲಿದ್ದಾರೆ. ಆದರೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಹಿನ್ನಡೆ ಅನುಭವಿಸಿದ್ದಾರೆ.
Hubli-Dharwad : ಅಂಚೆಮತ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭಾರೀ ಮುನ್ನಡೆ ಪಡೆದುಕೊಂಡರು. ಚುನಾವಣೆಗೂ ಮುನ್ನ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಇದೀಗ ಅವರು ತಮ್ಮ ಸ್ವಕ್ಷೇತ್ರವಾದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಲ್ಲಿ ಮತ ಎಣಿಕೆಯ ಸುತ್ತುಗಳಲ್ಲಿ ಸತತವಾಗಿ ಹಿನ್ನಡೆಯಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರು ಸತತವಾಗಿ ಗೆಲುವಿನ ಹಾದಿಯಲ್ಲಿದ್ದರು.
ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತಮ್ಮ ಸ್ವಕ್ಷೇತ್ರವಾದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರ ವಿರುದ್ಧ ಸೋಲನ್ನು ಕಂಡಿದ್ದಾರೆ. ಈ ಕುರಿತು ಮಾದ್ಯಮದೊಂದಿಗೆ ಮಾತನಾಡಿದ ಅವರು " ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಬರುತ್ತೆ ಅಂದಿದ್ದೆ, ಕಾಂಗ್ರೆಸ್‌ಗೆ ಬೆಂಬಲ ನೀಡಿದ ಕರ್ನಾಟಕ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಇದನ್ನೂ ಓದಿ-Karnataka Election Result 2023: ಹೀನಾಯ ಸೋಲು ಕಂಡ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರು!
ನನಗೆ ಗೆಲ್ಲಲು ಆಗಿಲ್ಲ, ಆದರೆ ಜನರ ತೀರ್ಪಿಗೆ ಗೌರವ ಕೊಡುತ್ತೇನೆ. ನನ್ನನ್ನು ಸೋಲಿಸಬೇಕು ಅಂತಾ ಹಠ ಮಾಡಿದ್ದವರು ಹಠ ಸಾಧಿಸಿದ್ದಾರೆ, ನನ್ನನ್ನು ಸೋಲಿಸಲು ಹೋಗಿದ್ದ ವ್ಯಕ್ತಿಗಳು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದವರ ವಿರುದ್ಧ ಛಾಲೆಂಜ್ ಮಾಡಿ ಫೇಸ್ ಮಾಡಿದ್ದೇನೆ ನಾನು ಸೋತಿದ್ದೇನೆ ಅನ್ನೊ ದುಃಖ ನನಗಿಲ್ಲ.
ಲಿಂಗಾಯತ ಸಮುದಾಯ ಕಡೆಗಣಿಸಿದ್ರು ಅನ್ನೋದರ ಪರಿಣಾಮ ಈಗ ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಕಾಣಿಸುತ್ತಿದೆ ಒಬ್ಬರಿಗೆ ಪೆಟ್ಟು ಕೊಡಲು ಹೋಗಿ ಇಡೀ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ. ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ 70 ವರ್ಷವಾದ ಮೇಲೆ ನಾನು ಚುನಾವಣಾ ರಾಜಕೀಯದಲ್ಲಿ ಇರಲ್ಲಾ ನನಗೀಗ 67 ವರ್ಷ ಮುಂದೆ ಏನಾಗುತ್ತೆ ನೋಡೋಣ.
ಬಿಜೆಪಿ ದಕ್ಷಿಣ ಭಾರತದಲ್ಲಿ ಹೇಗೆ ಅವಸಾನ ಆಗುತ್ತಿದೆ ಅಂತಾ ಗೊತ್ತಾಗುತ್ತಿದೆ ನಾನೇ ಬೆಳೆಸಿದ್ದ ಬಿಜೆಪಿ ಮೈಂಡ್‌ಸೆಟ್ ಛೇಂಜ್ ಮಾಡಲು ಆಗಿಲ್ಲ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ನಮ್ಮ ಒಳಹೊಡೆತ ಕೆಲಸ ಆಗಿಲ್ಲ, ಏನಾಯ್ತು ಅಂತಾ ಭೂತ್ ವೈಜ್ ಪರಿಶೀಲನೆ ಮಾಡುತ್ತೇನೆ ಕೆಲವೇ ವ್ಯಕ್ತಿಗಳ ಕುತಂತ್ರದಿಂದ ಇದೆಲ್ಲಾ ಆಗುತ್ತಿದೆ ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ, ಇದರ ಪರಿಣಾಮ ದೇಶಾದ್ಯಂತ ಆಗುತ್ತೆ.
ಇದನ್ನೂ ಓದಿ-ಕರ್ನಾಟಕ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ: ಸಿಎಂ ಬೊಮ್ಮಾಯಿ
ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದು ಪಕ್ಷದ ಗೆಲುವಿಗೆ ಒಂದು ಕಾರಣ. ಹುಬ್ಬಳ್ಳಿಯಲ್ಲಿ ಬಿಜೆಪಿ ಒತ್ತಡ ತಂತ್ರ ಹೇರಿ, ಭಯದ ವಾತಾವರಣ ಹೇರಿದ್ದರು ಹಣ ಹಂಚಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಅಧಿಕಾರದ ದುರುಪಯೋಗ ಮತ್ತು ದೌರ್ಜನ್ಯವಾಗಿದೆ, ಮೋದಿ ನಾಯಕತ್ವ ಮತ್ತು ಬಿಜೆಪಿ ಸರ್ಕಾರವಿದ್ದಾಗಲೂ 65ಕ್ಕೆ ಬಂದು ನಿಂತಿದ್ದಾರೆ ನಾನೆಂದೂ ಸೇಡಿನ ರಾಜಕೀಯ ಮಾಡಿಲ್ಲ ಬಿಜೆಪಿಯ ಅಹಂಕಾರ, ಹಣದ ಮದಕ್ಕೆ ಉತ್ತರ ಕೊಟ್ಟಿದ್ದೇನೆ ಲೋಕಸಭಾ ಚುನಾವಣೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.