Karnataka Election Result 2023: ಹೀನಾಯ ಸೋಲು ಕಂಡ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರು!

Karnataka Election Result 2023: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊಂದಿದ್ದ ಜನರು ತಮ್ಮ ವೋಟ್ ಪವರ್ ಮೂಲಕ ತೋರಿಸಿದ್ದಾರೆ.

Written by - Puttaraj K Alur | Last Updated : May 13, 2023, 03:21 PM IST
  • ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದೆ
  • ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಸಚಿವರ ಕಾರ್ಯವೈಖರಿ ವಿರುದ್ಧ ಜನರ ಅಸಮಾಧಾನ
  • ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರಿಗೆ ಹೀನಾಯ ಸೋಲು
Karnataka Election Result 2023: ಹೀನಾಯ ಸೋಲು ಕಂಡ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರು! title=
ಬೊಮ್ಮಾಯಿ ಸಂಪುಟದ ಸಚಿವರಿಗೆ ಮುಖಭಂಗ!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದೆ. ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಾಟಿದ್ದು, ಬಹುಮತದ ಸರ್ಕಾರ ರಚಿಸುವುದು ಖಚಿತವಾಗಿದೆ. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಅಭೂತಪೂರ್ವ ಮುನ್ನಡೆ ಸಾಧಿಸಿದೆ.

ಮತ್ತೊಮ್ಮೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಕೇವಲ 65 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅದೇ ರೀತಿ ಸಮ್ಮಿಶ್ರ ಸರ್ಕಾರ ರಚಿಸುವ ಕನಸು ಕಂಡಿದ್ದ ಜೆಡಿಎಸ್ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: Tumkur Assembly Election Result 2023: ಕಲ್ಪತರು ನಾಡಲ್ಲಿ 7 ಕ್ಷೇತ್ರ ‘ಕೈ’ ತೆಕ್ಕೆಗೆ: ಮಾಜಿ ಡಿಸಿಎಂ ಪರಮೇಶ್ವರ್’ಗೆ ಭರ್ಜರಿ ಜಯ

ಬೊಮ್ಮಾಯಿ ಸಂಪುಟದ ಸಚಿವರಿಗೆ ಮುಖಭಂಗ!

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಹೀನಾಯ ಸೋಲು ಕಾಣುವ ಮೂಲಕ ಭಾರೀ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಸಚಿವರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊಂದಿದ್ದ ಜನರು ತಮ್ಮ ವೋಟ್ ಪವರ್ ಮೂಲಕ ತೋರಿಸಿದ್ದಾರೆ.

ಬೊಮ್ಮಾಯಿ ಸಂಪುಟದ ಸಚಿವರಿಗೆ ಸೋಲು

ಗೋವಿಂದ್​ ಕಾರಜೋಳ – ಮುಧೋಳ್

ಮುರುಗೇಶ್ ನಿರಾಣಿ - ಬೀಳಗಿ

ಬಿ.ಶ್ರೀರಾಮುಲು - ಬಳ್ಳಾರಿ ಗ್ರಾಮಾಂತರ

ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ

ನಾರಾಯಣಗೌಡ- ಕೆ.ಆರ್.ಪೇಟೆ

ಆರ್.ಅಶೋಕ್ - ಕನಕಪುರ

ವಿ.ಸೋಮಣ್ಣ- ಚಾಮರಾಜನಗರ ಮತ್ತು ವರುಣಾ

ಜೆ.ಸಿ.ಮಾಧುಸ್ವಾಮಿ - ಚಿಕ್ಕನಾಯಕನಹಳ್ಳಿ

ಬಿ.ಸಿ.ಪಾಟೀಲ್ - ಹಿರೀಕೆರೂರು

ಎಂಟಿಬಿ ನಾಗರಾಜ್ - ಹೊಸಕೋಟೆ

ಹಾಲಪ್ಪ ಆಚಾರ್ - ಯಲಬುರ್ಗಾ

ಇದನ್ನೂ ಓದಿ: ಸೆಂಟ್ರಲ್ ಕಾಂಗ್ರೆಸ್ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ: ರಜತ್ ಉಳ್ಳಾಗಡ್ಡಿಮಠ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News